»   » 'ಭರ್ಜರಿ' ಕಲೆಕ್ಷನ್ ಮಾಡಿದ ಬಹದ್ದೂರ್ ಗಂಡು: ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು

'ಭರ್ಜರಿ' ಕಲೆಕ್ಷನ್ ಮಾಡಿದ ಬಹದ್ದೂರ್ ಗಂಡು: ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು

Posted By:
Subscribe to Filmibeat Kannada
Bharjari, Kannada movie enters Box office | Here is the collection report | Filmibeat Kannada

ಸಿನಿಮಾ ಸ್ವಲ್ಪ ತಡವಾಗಿ ಬಿಡುಗಡೆ ಆಗಿರಬಹುದು. ಆದ್ರೆ, 'ಭರ್ಜರಿ' ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪಿರುವ ಕಾರಣ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡುತ್ತಿದೆ ಧ್ರುವ ಸರ್ಜಾ ಅಭಿನಯದ 'ಭರ್ಜರಿ'.

'ಅದ್ಧೂರಿ', 'ಬಹದ್ದೂರ್' ನಂತಹ ಯಶಸ್ವಿ ಚಿತ್ರಗಳನ್ನ ನೀಡಿರುವ ಧ್ರುವ ಸರ್ಜಾ 'ಭರ್ಜರಿ' ಮೂಲಕ ಹ್ಯಾಟ್ರಿಕ್ ಹಿಟ್ ಬಾರಿಸಿದ್ದಾರೆ. ಬಿಡುಗಡೆ ಆದ ಮೂರು ದಿನಗಳಲ್ಲಿ ಅಂದಾಜು 16 ಕೋಟಿ ಕಲೆಕ್ಷನ್ ಮಾಡಿದ 'ಭರ್ಜರಿ' ಸಿನಿಮಾದ ಒಂದು ವಾರದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ ನೋಡಿ...

ಒಂದು ವಾರದ ಕಲೆಕ್ಷನ್ ಎಷ್ಟು.?

ಬಿಡುಗಡೆ ಆದ ಒಂದು ವಾರದಲ್ಲಿ 25 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ಯಂತೆ 'ಭರ್ಜರಿ' ಸಿನಿಮಾ.


ಮೊದಲ ಮೂರು ದಿನಗಳಲ್ಲಿ ಆಗಿದ್ದ ಕಲೆಕ್ಷನ್ ಎಷ್ಟು.?

ಮೊದಲ ದಿನ (ಶುಕ್ರವಾರ) ಹಾಗೂ ಎರಡನೇ ದಿನ (ಶನಿವಾರ) ಒಟ್ಟು 9.80 ಕೋಟಿ, ಮೂರನೇ ದಿನ (ಭಾನುವಾರ) 5.5 ಕೋಟಿ. ಒಟ್ಟಾರೆ ಮೂರು ದಿನಗಳಲ್ಲಿ 16 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿತ್ತು.


ಬಾಕ್ಸ್ ಅಫೀಸ್ ನಲ್ಲಿ 'ಭರ್ಜರಿ' ಸೌಂಡು: ಕಲೆಕ್ಷನ್ ಸೂಪರ್ರೋ ಸೂಪರ್ರು.!


ವಾರದ ದಿನಗಳಲ್ಲೂ ಕಲೆಕ್ಷನ್ ಡಲ್ ಆಗಿಲ್ಲ

ಕಾಲೇಜು ಯುವಕರನ್ನು ಹೆಚ್ಚಾಗಿ ಸೆಳೆಯುತ್ತಿರುವ ಈ ಸಿನಿಮಾ ವಾರದ ದಿನಗಳಲ್ಲೂ ಕಲೆಕ್ಷನ್ ಮ್ಯಾಟರ್ ನಲ್ಲಿ ಹಿಂದೆ ಬಿದ್ದಿಲ್ಲ. ಕ್ಲಾಸ್-ಮಾಸ್ ಎಂಬ ಭೇದಭಾವ ಇಲ್ಲದೆ, ಎಲ್ಲರೂ ನೋಡಬಹುದಾದ ಅಚ್ಚುಕಟ್ಟಾದ ಸಿನಿಮಾ 'ಭರ್ಜರಿ'.


'ಭರ್ಜರಿ' ಕುರಿತು

'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾ, ಧ್ರುವ ಸರ್ಜಾ ನಟನೆಯ ಮೂರನೇ ಸಿನಿಮಾ 'ಭರ್ಜರಿ'. ರಚಿತಾ ರಾಮ್, ಹರಿಪ್ರಿಯಾ, ಅವಿನಾಶ್, ತಾರಾ, ಸಾಧು ಕೋಕಿಲ ರಂತಹ ದೊಡ್ಡ ತಾರಾಬಳಗ ಇರುವ 'ಭರ್ಜರಿ' ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ ಓದಿರಿ...


English summary
Kannada Movie 'Bharjari' has collected around 25 crore (Gross Collection) in 1 week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada