»   » ಬಾಕ್ಸ್ ಅಫೀಸ್ ನಲ್ಲಿ 'ಭರ್ಜರಿ' ಸೌಂಡು: ಕಲೆಕ್ಷನ್ ಸೂಪರ್ರೋ ಸೂಪರ್ರು.!

ಬಾಕ್ಸ್ ಅಫೀಸ್ ನಲ್ಲಿ 'ಭರ್ಜರಿ' ಸೌಂಡು: ಕಲೆಕ್ಷನ್ ಸೂಪರ್ರೋ ಸೂಪರ್ರು.!

Posted By:
Subscribe to Filmibeat Kannada

''ಬಹದ್ದೂರ್ ಗಂಡು ರೂಲಿಂಗ್ ದಿ ಟ್ರೆಂಡು... ಭರ್ಜರಿ ಸೌಂಡು ಮೇಕಿಂಗ್ ನ್ಯೂ ಬ್ರ್ಯಾಂಡು'' ಅಂತ ನಿರ್ದೇಶಕ ಚೇತನ್, ಅದ್ಯಾವಾಗ ಸಾಹಿತ್ಯ ಬರೆದ್ರೋ... ಬಾಕ್ಸ್ ಆಫೀಸ್ ನಲ್ಲಿ ಈಗ ಅಕ್ಷರಶಃ 'ಭರ್ಜರಿ' ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ನಿರೀಕ್ಷೆಗೂ ಮೀರಿದ 'ಭರ್ಜರಿ' ಕಲೆಕ್ಷನ್ ಆಗುತ್ತಿದೆ.

ಸುಮಾರು 294 ಥಿಯೇಟರ್ ಗಳಲ್ಲಿ ಬಿಡುಗಡೆ ಆದ 'ಭರ್ಜರಿ' ಸಿನಿಮಾ ಮೂರು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಅಂತ ಗೊತ್ತಾದ್ರೆ, ನೀವೇ ಬಾಯಿ ಮೇಲೆ ಬೆರಳಿಡುತ್ತೀರಾ.!


'ಭರ್ಜರಿ' ಚಿತ್ರದ ಮೂರು ದಿನಗಳ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ ನೋಡಿ....


ಮೂರು ದಿನಗಳ ಕಲೆಕ್ಷನ್ ರಿಪೋರ್ಟ್

ಬಿಡುಗಡೆ ಆದ ಮೂರು ದಿನಗಳಲ್ಲಿ ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯಾ ನಟನೆಯ 'ಭರ್ಜರಿ' ಸಿನಿಮಾ 16 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಅಂತಿದೆ ಗಾಂಧಿನಗರ.


ಮೊದಲೆರಡು ದಿನಗಳ ಕಲೆಕ್ಷನ್ ರಿಪೋರ್ಟ್

ಮೊದಲ ದಿನ (ಶುಕ್ರವಾರ) ಹಾಗೂ ಎರಡನೇ ದಿನ (ಶನಿವಾರ) ಒಟ್ಟು 9.80 ಕೋಟಿ ಕಲೆಕ್ಷನ್ ಆಗಿದ್ದು, ಮೂರನೇ ದಿನ (ಭಾನುವಾರ) 5.5 ಕೋಟಿ ಕಲೆಕ್ಷನ್ ಆಗಿದೆ ಎಂಬುದು ವಿತರಕರಿಂದ ಬಂದಿರುವ ಮಾಹಿತಿ.


ಊರ್ವಶಿ ಹಾಗೂ ರೆಕ್ಸ್ ನಲ್ಲಿ ಹಿಂದೆ ಬಿದ್ದಿಲ್ಲ!

ಪರಭಾಷೆಯ ಚಿತ್ರಗಳೇ ರಾರಾಜಿಸುತ್ತಿದ್ದ ಊರ್ವಶಿ ಹಾಗೂ ರೆಕ್ಸ್ ಥಿಯೇಟರ್ ಗಳಲ್ಲಿ 'ಭರ್ಜರಿ' ಉತ್ತಮ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಖಂಡಿತ ಇದೆ ಎಂದು 'ಭರ್ಜರಿ' ಸಾಬೀತು ಪಡಿಸಿದೆ.


'ಭರ್ಜರಿ' ಕುರಿತು...

'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾ, ಧ್ರುವ ಸರ್ಜಾ ನಟನೆಯ ಮೂರನೇ ಸಿನಿಮಾ 'ಭರ್ಜರಿ'. ರಚಿತಾ ರಾಮ್, ಹರಿಪ್ರಿಯಾ, ಅವಿನಾಶ್, ತಾರಾ, ಸಾಧು ಕೋಕಿಲ ರಂತಹ ದೊಡ್ಡ ತಾರಾಬಳಗ ಇರುವ 'ಭರ್ಜರಿ' ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ ಓದಿರಿ...


English summary
Kannada Movie 'Bharjari' has collected around 16 crore (Gross Collection) in 3 days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada