ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಗೆ 'ಬನ್ ಟೀ': ಏನು ಹೇಳುತ್ತಿದೆ ಹೊಸಬರ ಸಿನಿಮಾ?

ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಏನೇ ಇರಲಿ ಹೊಸಬರು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ವಿಶಿಷ್ಠವಾದ ಕಥೆಯನ್ನು ಹುಡುಕೊಂಡು ಬರುತ್ತಾರೆ. ಇಲ್ಲಾ ಸಮಾಜಕ್ಕೆ ಸಂದೇಶವನ್ನು ನೀಡುವ ಕಥೆಯನ್ನು ಹೊತ್ತು ತರುತ್ತಾರೆ.

ಇಂತಹದ್ದೇ ಒಂದು ತಂಡ 'ಬನ್ ಟೀ' ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿದೆ. ಸಿನಿಮಾ ಟೈಟಲ್‌ ವಿಶಿಷ್ಠವಾಗಿದ್ದು, ಪ್ರೇಕ್ಷಕರನ್ನು ಸೆಳೆಯುವ ಎಲ್ಲಾ ಲಕ್ಷಣಗಳು ಇವೆ. ಸದ್ಯ ಈ ತಂಡ ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

Kannada Movie Bun Tea Trailer out

'ಬನ್ ಟೀ ಎಂದಾಕ್ಷಣ ಇದ್ಯಾವುದೋ ಕಾಮಿಡಿ ಸಿನಿಮಾ ಅಂದುಕೊಳ್ಳುವ ಹಾಗಿಲ್ಲ. ಹೊಸಬರ ತಂಡ ಗಂಭೀರವಾದ ವಿಷಯವನ್ನು ಹೊತ್ತು ಬರುತ್ತಿದೆ. ಈ ಸಿನಿಮಾ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಇರುವ ಸಿನಿಮಾ.

ಅಂದ್ಹಾಗೆ, 'ಬನ್ ಟೀ' ಸಿನಿಮಾಗೆ ನಿರ್ದೇಶಕ ಉದಯ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ನೈಜ ಘಟನೆಯನ್ನು ಆಧರಿಸಿ ಮಾಡಿದ ಸಿನಿಮಾ. ಉದಯ್ ಕುಮಾರ್ ತಮ್ಮ ಗೆಳೆಯನ ಬದುಕಿನಲ್ಲಿ ನಡೆದ ಸನ್ನಿವೇಶವನ್ನೇ ಇಟ್ಟುಕೊಂಡು ಕಥೆ ಮಾಡಿ ಸಿನಿಮಾ ಮಾಡಿದ್ದಾರೆ.

ಈ ಸಿನಿಮಾ ವಿಶೇಷ ಯಾಕೆ ಅಂದರೆ, ಇಲ್ಲಿ ಹೀರೊ-ಹೀರೊಯಿನ್ ಅನ್ನೋ ಕಾನ್ಸೆಪ್ಟ್ ಇಲ್ಲ. ಇದು ಸಂಪೂರ್ಣ ಕಂಟೆಂಟ್‌ ಅನ್ನೇ ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಮಾಡಿದ ಸಿನಿಮಾ. 'ಬನ್ ಟೀ' ಪ್ರಮುಖ ಪಾತ್ರದಲ್ಲಿ ಉಮೇಶ್ ಮತ್ತು ಶ್ರೀದೇವಿ, ಗುಂಡಣ್ಣ ಚಿಕ್ಕಮಗಳೂರು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ವಕೀಲರಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಸಿನಿಮಾದ ಕಾನ್ಸೆಪ್ಟ್ ಇಷ್ಟ ಆಗಿ ನಟಿಸಿದ್ದಾರೆ. ಹಾಗೇ ನಟಿ ಶ್ರೀದೇವಿಗೂ ಕೂಡ ಇದು ಮೊದಲ ಸಿನಿಮಾ.

'ಬನ್ ಟೀ' ಸಿನಿಮಾದಲ್ಲಿ ಮೌರ್ಯ ಮತ್ತು ತನ್ಮಯಿ ಎಂಬ ಇಬ್ಬರು ಬಾಲ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಈ ಸಿನಿಮಾವನ್ನು ಯಾವುದೇ ಸೆಟ್ ಅನ್ನು ಬಳಸದೆಯೇ ಶೂಟಿಂಗ್ ಮಾಡಲಾಗಿದೆ. ಹದಗೆಟ್ಟಿರುವ ಶಿಕ್ಷಣದ ವ್ಯವಸ್ಥೆ, ಖಾಸಗಿ ಶಾಲೆಯ ಶಿಕ್ಷಣ ಇಂತಹ ಗಂಭೀರ ವಿಷಯದ ಸುತ್ತವೇ ಸುತ್ತವೇ 'ಬನ್ ಟೀ' ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.

'ಬನ್ ಟೀ' ಸಿನಿಮಾವನ್ನು ಕೇಶವ್ ಆರ್ ನಿರ್ಮಾಣ ಮಾಡಿದ್ದಾರೆ. ಪ್ರದ್ಯೋತ್ತನ್ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳು ಇಲ್ಲ. ಆದರೂ, ಹಿನ್ನೆಲೆ ಸಂಗೀತಕ್ಕೆ ಪ್ರಾಮುಖ್ಯತೆ ಹೆಚ್ಚಿದೆ. 'ಬನ್ ಟೀ' ಟ್ರೈಲರ್ ರಿಲೀಸ್ ಆಗಿದ್ದು, ಸಿನಿಮಾ ಇದೇ ತಿಂಗಳು 22ಕ್ಕೆ ರಿಲೀಸ್ ಆಗಲಿದೆ.

More from Filmibeat

English summary
Kannada Movie Bun Tea Trailer out; it explains Education systems
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X