For Quick Alerts
  ALLOW NOTIFICATIONS  
  For Daily Alerts

  ಜೂನ್ 2ಕ್ಕೆ 'ಡ್ರಾಮಾ ಜ್ಯೂನಿಯರ್ಸ್' ಮಕ್ಕಳ ಚಿತ್ರ ತೆರೆಗೆ

  By Suneel
  |

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಡ್ರಾಮಾ ಜ್ಯೂನಿಯರ್ಸ್' ಮೂಲಕ ಕನ್ನಡಿಗರನ್ನು ನಕ್ಕು ನಲಿಸಿದ ಪುಟಾಣಿಗಳು ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚೆಗಷ್ಟೆ 'ಎಳೆಯರು ನಾವು ಗೆಳೆಯರು' ಚಿತ್ರದ ಟೀಸರ್ ನಿಂದ ಕನ್ನಡ ಕಲಾರಸಿಕರಲ್ಲಿ ಕುತೂಹಲ ಮೂಡಿಸಿದ್ದ ಪುಟಾಣಿ ಪಂಟ್ರುಗಳ ಈ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದ್ದು, ಜೂನ್ 2 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.[ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದ 'ಡ್ರಾಮಾ ಜ್ಯೂನಿಯರ್ಸ್']

  ಅಂದಹಾಗೆ 'ಎಳೆಯರು ನಾವು ಗೆಳೆಯರು' ಚಿತ್ರಕ್ಕೆ ಕಥೆ ಬರೆದು ನಾಗರಾಜ್ ಗೋಪಾಲ್ ರವರು ನಿರ್ಮಾಣ ಮಾಡಿದ್ದಾರೆ. ವಿಕ್ರಮ್ ಸೂರಿ ರವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಡ್ರಾಮಾ ಜ್ಯೂನಿಯರ್ಸ್' ಮಕ್ಕಳು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ರಿಚರ್ಡ್ ಲೂಯಿಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

  ಎಸ್.ನಾರಾಯಣ್ ನಿರ್ದೇಶನದ 'ಮನಸು ಮಲ್ಲಿಗೆ' ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿ ಗಮನ ಸೆಳೆದಿದ್ದ ಅಚಿಂತ್ಯ ಸೇರಿದಂತೆ ನಿಹಾಲ್, ಅಮೋಘ್, ಮಹೇಂದ್ರ, ಅಭಿಷೇಕ್, ತುಷಾರ್, ಸೂರಜ್, ಪುಟ್ಟರಾಜು, ತೇಜಸ್ವಿನಿ ಮತ್ತು ಇತರೆ ಕೆಲವು ಮಕ್ಕಳು ಗೆಳೆಯರಾಗಿ ಅಭಿನಯಿಸಿದ್ದಾರೆ.[ಎಕ್ಸ್ ಕ್ಲೂಸಿವ್:'ಡ್ರಾಮಾ ಜ್ಯೂನಿಯರ್ಸ್' ಗೆದ್ದ ಮಕ್ಕಳಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?]

  'ಎಳೆಯರು ನಾವು ಗೆಳೆಯರು' ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮತ್ತು ಅಶೋಕ್ ವಿ ರಮಣ್ ರವರ ‍ಛಾಯಾಗ್ರಹಣ ಚಿತ್ರಕ್ಕಿದೆ.

  English summary
  Popular TV show Drama Juniors Kids Starrer Kannada Movie 'Eleyaru Naavu Geleyaru' all set to release on June 2nd. The Movie is directed by Vikram Suri, features Achintya, Tejaswini, Puttaraju, Nihal and other kids in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X