ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕೆರೆಬೇಟೆ; ಕನ್ನಡ ಸೊಗಡಿನ ಸಿನಿಮಾ ಮನ್ನಣೆ
ಅಪ್ಪಟ ಕನ್ನಡದ ಸೊಗಡಿನ ಸಿನಿಮಾ 'ಕೆರೆಬೇಟೆ'. ಗೌರಿ ಶಂಕರ್ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಶಿವಮೊಗ್ಗ ಭಾಗದ ಆಚಾರ ವಿಚಾರವನ್ನು ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಶಿವಮೊಗ್ಗ, ಸಾಗರ, ಸೊರಬ ಭಾಗದಲ್ಲಿ ಮೀನು ಬೇಟೆಯಾಡುವ ಪದ್ಧತಿಯನ್ನು 'ಕೆರೆಬೇಟೆ' ಅನ್ನೋ ಹೆಸರಿನಲ್ಲಿ ಕರೆಯುತ್ತಾರೆ.
ಇದೇ ಹೆಸರನ್ನೇ ಇಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾಗೆ ವಿಮರ್ಶಕರಿಗೆ ಮೆಚ್ಚುಗೆನೂ ವ್ಯಕ್ತವಾಗಿತ್ತು. ಈ ಚಿತ್ರ ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ ಗೋವಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. 55ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ ಎರಡೇ ಎರಡು ಚಿತ್ರಗಳಲ್ಲಿ ಇದೂ ಒಂದು.

55ನೇ ಗೋವಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಪನೋರಮಾ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ 'ಕೆರೆಬೇಟೆ' ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಇದು ಕನ್ನಡ ಚಿತ್ರರಂಗದ ಹೆಮ್ಮೆ. ನವೆಂಬರ್ 20 ರಿಂದ 28ರವರೆಗೂ ನಡೆಯುವ ಈ ಚಿತ್ರೋತ್ಸವದಲ್ಲಿ ದೇಶದ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ಇಲ್ಲಿ ಪ್ರದರ್ಶನವನ್ನು ಮಾಡಲಾಗುತ್ತೆ.
ಗೋವಾದ ಪಣಿಜಿಯಲ್ಲಿ ಪ್ರತಿವರ್ಷವೂ ಈ ಚಲನ ಚಿತ್ರೋತ್ಸವ ನಡೆಯಲಿದೆ. ಈ ಚಿತ್ರೋತ್ಸವಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಿನಿಮಾ ಗಣ್ಯರು ಭಾಗಿಯಾಗಲಿದ್ದಾರೆ. ಭಾರತೀಯ ಚಲನಚಿತ್ರೋತ್ಸವದ ಪ್ರಮುಖ ಭಾಗವಾಗಿರುವ 'ಇಂಡಿಯನ್ ಪನೋರಮಾ'ದಲ್ಲಿ ಸುಮಾರು 25 ಫೀಚರ್ ಫಿಲ್ಮ್ ಪ್ರದರ್ಶನ ಕಾಣಲಿವೆ. ಅದರಲ್ಲಿ ಎರಡು ಕನ್ನಡ ಸಿನಿಮಾಗಳು ಸೇರಿವೆ. ಒಂದು ಸಾಗರ್ ಪುರಾಣಿಕ್ ನಿರ್ದೇಶನದ 'ವೆಂಕ್ಯ'. ಇನ್ನೊಂದು ಗುರುರಾಜ್ ನಿರ್ದೇಶನದ 'ಕೆರೆಬೇಟೆ'.
ಈ ಚಿತ್ರೋತ್ಸವಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾರಂಗದ ಗಣ್ಯರು ಸಾಕ್ಷಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ಗೋವಾ ಚಿತ್ರೋತ್ಸವದಲ್ಲಿ ಕನ್ನಡದ ಸಿನಿಮಾ ಪ್ರದರ್ಶನ ಕಾಣುತ್ತಿದೆ. 25 ಫೀಚರ್ ಫಿಲ್ಮ್ ಜೊತೆಗೆ 20 ನಾನ್-ಫೀಚರ್ ಫಿಲ್ಮ್‌ಗಳು ಕೂಡ ಸೇರಿದೆ. ವಿಶೇಷ ಅಂದರೆ, 25 ಫೀಚರ್ ಫಿಲ್ಮ್‌ನಲ್ಲಿ ಮೊದಲ ಸಿನಿಮಾವಾಗಿ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಪ್ರದರ್ಶನ ಕಾಣುತ್ತಿದ್ದರೆ, ಎರಡನೇ ಸಿನಿಮಾವಾಗಿ 'ಕೆರೆಬೇಟೆ' ಆಯ್ಕೆಯಾಗಿದೆ.
ಗೋವಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ವಿಭಾಗದಲ್ಲಿ 25 ಫೀಚರ್ ಫಿಲ್ಮ್ ಆಯ್ಕೆ ಮಾಡಲು 384 ಸಿನಿಮಾಗಳು ಬಂದಿದ್ದವು. ಅವುಗಳಲ್ಲಿ ಜ್ಯೂರಿಗಳು 25 ಚಿತ್ರಗಳನ್ನು ಆಯ್ಕೆ ಮಾಡಿದ್ದರು. ಅದರಲ್ಲಿ ಎರಡು ಕನ್ನಡ ಸಿನಿಮಾಗಳು ಸೇರಿವೆ. ಇನ್ನು 'ಕೆರೆಬೇಟೆ' ರಾಜ್‌ಗುರು ನಿರ್ದೇಶಿಸಿದ ಚೊಚ್ಚಲ ಸಿನಿಮಾ. ಗೌರಿ ಶಂಕರ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದರು.
'ಕೆರೆಬೇಟೆ' ಅಪ್ಪಟ ಮಲೆನಾಡಿನ ಹಳ್ಳಿ ಸೊಗಡಿನ ಸಿನಿಮಾ. ಈ ಚಿತ್ರ ಇದೇ ವರ್ಷ ಮಾರ್ಚ್ 15ಕ್ಕೆ ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಗೌರಿ ಶಂಕರ್ ಅವರ ಜನಮನ ಸಿನಿಮಾ ಸಂಸ್ಥೆಯಲ್ಲಿ ಈ ಸಿನಿಮಾ ನಿರ್ಮಾಣ ಆಗಿತ್ತು. ಮಲೆನಾಡಿನ ಮೀನು ಬೇಟೆಯ ಪದ್ಧತಿಯನ್ನು ಈ ಸಿನಿಮಾದಲ್ಲಿ ಪರಿಚಯ ಮಾಡಲಾಗಿತ್ತು. ಗೌರಿಶಂಕರ್, ನಾಯಕಿ ಬಿಂದು ಗೌಡ, ಪೋಷಕ ಪಾತ್ರದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಹಲವು ಮಂದಿ ನಟಿಸಿದ್ದರು.


Click it and Unblock the Notifications











