"ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ"; 'ಕಾಟೇರ' ರೆಸ್ಪಾನ್ಸ್‌ಗೆ ದಾಸ ದಿಲ್ ಖುಷ್
'ಕಾಟೇರ' ಸಿನಿಮಾಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ದರ್ಶನ್ ಸಿನಿಮಾ ಹಿಂದೆಂದೂ ಈ ಮಟ್ಟಿಗೆ ಪ್ರದರ್ಶನ ಕಂಡಿರಲಿಲ್ಲ. 'ರಾಬರ್ಟ್' ಬಳಿಕ ಮತ್ತೊಮ್ಮೆ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ಮತ್ತೊಮ್ಮೆ ಈ ಕಾಂಬಿನೇಷನ್‌ಗೆ ದರ್ಶನ್ ಫ್ಯಾನ್ಸ್ ಫಿದಾ ಆಗಿರೋದಂತೂ ಸತ್ಯ.
ಮೊದಲ ದಿನ ಸುಮಾರು 1670ಕ್ಕೂ ಅಧಿಕ ಶೋಗಳು ಪ್ರದರ್ಶನ ಕಂಡಿದ್ದವು. 1544 ಶೋಗಳು ಹೌಸ್ ಫುಲ್ ಆಗಿದ್ದವು. ಚಿತ್ರತಂಡವೇ ಕೊಟ್ಟಿರೋ ಮಾಹಿತಿ ಪ್ರಕಾರ, ಶೇ. 93ರಷ್ಟು ಶೋಗಳು ಹೌಸ್‌ಫುಲ್ ಆಗಿದ್ದವು. ಈ ಮೂಲಕ ಮೊದಲ ದಿನ ರಾಜ್ಯಾದ್ಯಂತ 'ಕಾಟೇರ' ಉತ್ತಮ ಓಪನಿಂಗ್ ಸಿಕ್ಕಿದೆ.

ಹಾಗೇ ಎರಡನೇ ದಿನವೂ ಸಿನಿಮಾದ ಸ್ಟಡಿಯಾಗಿದೆ. ಮೊದಲ ದಿನ ಸಿಕ್ಕಿರೋ ಉತ್ತಮ ಪ್ರತಿಕ್ರಿಯೆಗೆ ಇನ್ನೊಂದಿಷ್ಟು ಶೋಗಳನ್ನು ಸೇರಿಸಲಾಯ್ತು. ಸುಮಾರು 15ಕ್ಕೂ ಅಧಿಕ ಚಿತ್ರಮಂದಿರಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಸದ್ಯಕ್ಕೀಗ 406 ಚಿತ್ರಮಂದಿರಲ್ಲಿ 'ಕಾಟೇರ' ಹವಾ ನಡೆಯುತ್ತಿದೆ. ಈ ಮಟ್ಟಿಗೆ ಸಿಕ್ಕಿರೋ ಪ್ರತಿಕ್ರಿಯೆಗೆ ದರ್ಶನ್ ಕರಗಿ ನೀರಾಗಿದ್ದಾರೆ.
'ಕಾಟೇರ' ಡಿಸೆಂಬರ್ 29ರ ಮಧ್ಯರಾತ್ರಿ 12 ಗಂಟೆಯಿಂದಲೇ ಪ್ರದರ್ಶನ ಶುರುವಾಗಿತ್ತು. ಅಭಿಮಾನಿಗಳಿಗಾಗಿ ನೀಡಿದ ವಿಶೇಷ ಪ್ರದರ್ಶನ ಕೂಡ ಯಶಸ್ವಿಯಾಗಿತ್ತು. ಕೆಲವು ಥಿಯೇಟರ್‌ಗಳಲ್ಲಂತೂ ಟಿಕೆಟ್ ಸಿಗದೆ ಗಲಾಟೆ ನಡೆದಿದ್ದೂ ಇವೆ. ಹೀಗಾಗಿ ರಾಜ್ಯದಾದ್ಯಂತ ಚಿತ್ರಮಂದಿರದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಿದಾ ಆಗಿದ್ದು ತಮ್ಮ ಎಕ್ಸ್ (ಟ್ವೀಟ್) ಖಾತೆಯಲ್ಲಿ ಧನ್ಯವಾದಗಳನ್ನು ಕೋರಿ ಪೋಸ್ಟ್ ಮಾಡಿದ್ದಾರೆ.
"ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ #Kaatera ಚಿತ್ರತಂಡದ ಮನತುಂಬಿದೆ. Speechless" ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ (ಎಕ್ಸ್) ಮಾಡಿದ್ದಾರೆ.
ಈ ಟ್ವೀಟ್ (ಎಕ್ಸ್) ಬೆನ್ನಲ್ಲೇ 'ಕಾಟೇರ' ಎರಡನೇ ದಿನವೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮಾರ್ನಿಂಗ್ ಶೋ, ಮ್ಯಾಟನಿ ಶೋ ಸೇರಿದಂತೆ ಸುಮಾರು 1783 ಶೋಗಳಲ್ಲಿ 1327 ಶೋಗಳು ಸೋಲ್ಡ್‌ಔಟ್ ಆಗಿವೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ಮೂಲಕ ಎರಡನೇ ದಿನವೂ ಶೇ.83ರಷ್ಟು ಆಕ್ಯೂಪೆನ್ಸಿ ಇದೆ ಎಂದು ಹೇಳಿಕೊಂಡಿದೆ.
ಮೊದಲನೇ ದಿನ 'ಕಾಟೇರ' ಬಾಕ್ಸಾಫೀಸ್ ಕಲೆಕ್ಷನ್ 19.79 ಕೋಟಿ ರೂಪಾಯಿ ಆಗಿತ್ತು. ಒಂದೇ ದಿನ ಕೆಲವು ಚಿತ್ರಮಂದಿರಗಳಲ್ಲಿ 7 ಶೋಗಳನ್ನು ಕಂಡಿತ್ತು. ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರದರ್ಶನಗಳನ್ನು ಕಂಡಿರೋ 'ಕಾಟೇರ' ಕಲೆಕ್ಷನ್ ಕೇಳಿ ಸಿನಿಮಾ ಮಂದಿ ಥ್ರಿಲ್ ಆಗಿದ್ದಾರೆ. ಅದೇ ಇನ್ನೊಂದು ಕಡೆ ಎರಡನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಈಗಾಗಲೇ ಲೆಕ್ಕಾಚಾರ ಶುರುವಾಗಿದೆ.
ಈ ಸಿನಿಮಾದಲ್ಲಿ ದರ್ಶನ್ 'ಕಾಟೇರ'ನಾಗಿ ಕಾಣಿಸಿಕೊಂಡಿದ್ದಾರೆ. ಜಮಿನ್ದಾರಿಕೆ ಪದ್ಧತಿ ವಿರುದ್ಧ ಸಿಡಿದೇಳುವ ಕಥಾನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕೃಷಿಕರ ವಿರುದ್ಧ ಸವಾರಿ ಮಾಡುತ್ತಿರುವ ಜಮಿನ್ದಾರ ವಿರುದ್ಧ 'ಕಾಟೇರ' ಹೇಗೆ ಸಿಡಿದೇಳುತ್ತಾನೆ ಅನ್ನೋದೇ ಸಿನಿಮಾ ಕಥೆ. ತರುಣು ಸುಧೀರ್ ನಿರ್ದೇಶಿಸಿದ ಈ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











