For Quick Alerts
    ALLOW NOTIFICATIONS  
    For Daily Alerts

    'ಪಡ್ಡೆಹುಲಿ' ಮುಹೂರ್ತಕ್ಕೆ ಆಗಮಿಸಲಿರುವ 'ಸ್ಟಾರ್' ನಟರು: ಯಾರು.?

    By Bharath Kumar
    |

    ಕನ್ನಡ ಚಿತ್ರರಂಗದಲ್ಲಿ 'ಗಂಡುಗಲಿ' ಎಂದೇ ಖ್ಯಾತಿ ಗಳಿಸಿಕೊಂಡಿರುವ ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿರುವುದು ಗೊತ್ತಿರುವ ವಿಚಾರ.

    ಕೆ ಮಂಜು ಮಗನ ಮೊದಲ ಸಿನಿಮಾದ ಮುಹೂರ್ತ ಸಮಾರಂಭ ಇದೇ ಭಾನುವಾರ ಬೆಳಿಗ್ಗೆ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ.

    'ಪಡ್ಡೆ ಹುಲಿ' ಆಗಮನಕ್ಕೆ ಅರ್ಧ ಕೋಟಿ ಸುರಿದ ನಿರ್ಮಾಪಕರುd

    ಶ್ರೇಯಸ್ ಚೊಚ್ಚಲ ಚಿತ್ರಕ್ಕೆ ಆರ್ಶೀವಾದ ಮಾಡಲು ಕನ್ನಡದ ಖ್ಯಾತ ಸ್ಟಾರ್ ನಟರು ಆಗಮಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಪಡ್ಡೆಹುಲಿ' ಎಂದು ಟೈಟಲ್ ಇಟ್ಟಿದ್ದು, ಈ ಚಿತ್ರದ ಮೊದಲ ದೃಶ್ಯಕ್ಕೆ ಕಿಚ್ಚ ಸುದೀಪ್ ಕ್ಲ್ಯಾಪ್ ಮಾಡಲಿದ್ದಾರೆ.

    ಕೆ ಮಂಜು ಮಗನ ಸಿನಿಮಾ ಎಂಟ್ರಿಗೆ ಕಿಚ್ಚನಿಂದ ಸ್ವಾಗತ

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಪಡ್ಡೆಹುಲಿ' ಚಿತ್ರದ ಕ್ಯಾಮೆರಾಗೆ ಚಾಲನೆ ನೀಡಲಿದ್ದಾರೆ. ಇವರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

    ಇನ್ನು ಈ ಸಿನಿಮಾ ಡಾ ವಿಷ್ಣುವರ್ಧನ್ ಅವರು ಆರ್ಶೀವಾದಗಳೊಂದಿಗೆ ಆರಂಭ ಮಾಡುತ್ತಿದ್ದು, ಈ ಕಾರ್ಯಕ್ರಮವನ್ನ ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ್ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಧರ್ಮಸ್ಥಳದ ಧಮಾ೯ಧಿಕಾರಿ ಡಾ|| ವೀರೇಂದ್ರ ಹೆಗ್ಗಡೆ ಅವರಿಗೂ ಆಹ್ವಾನ ನೀಡಿದ್ದು, ಅವರ ಕೂಡ ಜೊತೆ ಬರುವ ಸಾಧ್ಯತೆ ಇದೆ.

    ಚೊಚ್ಚಲ ಚಿತ್ರಕ್ಕೂ ಮುಂಚೆಯೇ 4 ಪ್ರಾಜೆಕ್ಟ್ ಗೆ ಬುಕ್ ಆದ ನಟಿ.!

    ಅಂದ್ಹಾಗೆ, ಈ ಚಿತ್ರವನ್ನ ಗುರುದೇಶ ಪಾಂಡೇ ನಿರ್ದೇಶನ ಮಾಡುತ್ತಿದ್ದು, ತೇಜಸ್ವಿನಿ ಎಂಟರ್ ಪ್ರೈಸಸ್" ಬ್ಯಾನರ್ ನಲ್ಲಿ ಎಂ ರಮೇಶ್ ರೆಡ್ಡಿ 'ಪಡ್ಡೆಹುಲಿ' ಚಿತ್ರವನ್ನು ನಿಮಿ೯ಸುತ್ತಿದ್ದಾರೆ. ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.

    English summary
    Another star son is gearing up for a debut in sandalwood industry. This, it is noted producer K Manju's son Shreyas. the Film launching on sunday (february 11).

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X