»   » 'ಪಡ್ಡೆ ಹುಲಿ' ಆಗಮನಕ್ಕೆ ಅರ್ಧ ಕೋಟಿ ಸುರಿದ ನಿರ್ಮಾಪಕರು

'ಪಡ್ಡೆ ಹುಲಿ' ಆಗಮನಕ್ಕೆ ಅರ್ಧ ಕೋಟಿ ಸುರಿದ ನಿರ್ಮಾಪಕರು

Posted By:
Subscribe to Filmibeat Kannada

'ರಾಜಹುಲಿ', 'ರುದ್ರತಾಂಡವ' ಸಿನಿಮಾಗಳನ್ನ ನಿರ್ದೇಶನ ಮಾಡಿ ಕಮರ್ಷಿಯಲ್ ಆಗಿ ಸಕ್ಸಸ್ ಕಂಡಿದ್ದ ನಿರ್ದೇಶಕ ಗುರುದೇಶ್ ಪಾಂಡೆ ಗಾಂಧಿನಗರಕ್ಕೆ ಪಡ್ಡೆಹುಲಿಯನ್ನ ಪರಿಚಯಿಸುತ್ತಿದ್ದಾರೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕೆ ಮಂಜು ಅವರ ಪುತ್ರ ಶ್ರೇಯಸ್ ಪಡ್ಡೆಹುಲಿ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಶ್ರೇಯಸ್ ಅವರನ್ನ ಚಿತ್ರರಂಗಕ್ಕೆ ಪರಿಚಯಿಸುವ ಮೊದಲ ಚಿತ್ರದ ಪ್ರೋಮೋ ಚಿತ್ರೀಕರಣವನ್ನ ಆರಂಭ ಮಾಡಿದ್ದಾರೆ ನಿರ್ದೇಶಕ ಗುರುದೇಶ್ ಪಾಂಡೆ. ಚಿತ್ರದ ಪ್ರೋಮೊ ಶೂಟ್ ಗಾಗಿ 45 ರಿಂದ 50 ಲಕ್ಷ ರೂಪಾಯಿಗಳನ್ನು ಖಚು೯ ಮಾಡಲಾಗಿದೆ.

"ತೇಜಸ್ವಿನಿ ಎಂಟರ್ ಪ್ರೈಸಸ್" ಬ್ಯಾನರ್ ನಲ್ಲಿ ಎಂ. ರಮೇಶ್ ರವರು ಪಡ್ಡೆಹುಲಿ ಚಿತ್ರವನ್ನು ನಿಮಿ೯ಸುತ್ತಿದ್ದಾರೆ. ಪ್ರೋಮೋ ಚಿತ್ರೀಕರಣಕ್ಕಾಗಿ ಆರು ಸೆಟ್ ಗಳನ್ನ ಹಾಕಲಾಗಿದೆ. ಸಿನಿಮಾರಂಗಕ್ಕೆ ಬರುವ ಮುಂಚೆಯೇ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿರುವ ಶ್ರೇಯಸ್ ಯಾವುದೇ ಡ್ಯುಪ್ ಇಲ್ಲದೆ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ.

Kannada Paddehuli movie promo shooting Beginning from yesterday(feb 27)

ಚಿತ್ರದ ಮಹೂರ್ತಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿರುವ ಚಿತ್ರತಂಡ ಮಾಚ್೯ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಅದಕ್ಕೂ ಮುನ್ನವಾಗಿ ಪಡ್ಡೆಹುಲಿಯ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರೆ.

English summary
Kannada Producer K Manju's son 'Shreyas' is getting introduced into the cinema through Paddehuli movie Gurudesh Pandey is directing the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada