'ಪರಸಂಗದ ಗೆಂಡೆತಿಮ್ಮ' ಸಿನಿಮಾದ ನಟಿ ನಿಧನ; 80ರ ದಶಕದ ಸುಂದರಿ ಇನ್ನು ನೆನಪು ಮಾತ್ರ

ಕನ್ನಡದ ಎವರ್‌ಗ್ರೀನ್ ಸಿನಿಮಾಗಳಲ್ಲಿ 'ಪರಸಂಗದ ಗೆಂಡೆತಿಮ್ಮ' ಕೂಡ ಒಂದು. ಹಿರಿಯ ನಟ ದಿವಂಗತ ಲೋಕೇಶ್ ನಟಿಸಿದ್ದ ಈ ಸಿನಿಮಾದ ಹಾಡುಗಳು ಇಂದಿಗೂ ಫೇಮಸ್. ಇಂದಿನ ಪೀಳಿಗೆ ಕೂಡ ಈ ಹಾಡುಗಳನ್ನು ಗುನುಗುತ್ತಲೇ ಇರುತ್ತಾರೆ. ಇದೇ ಸಿನಿಮಾದಲ್ಲಿ ಲೋಕೇಶ್ ಅವರಿಗೆ ನಾಯಕಿಯಾಗಿ ನಟಿಸಿದವರು ರೀಟಾ ಅಂಚನ್ ರಾಧಾಕೃಷ್ಣ. ಈ ಜೋಡಿ ಅಂದು ಪ್ರೇಕ್ಷಕರನ್ನು ಮೋಡಿ ಮಾಡಿತ್ತು.

'ಪರಸಂಗದ ಗೆಂಡೆತಿಮ್ಮ' ಸಿನಿಮಾದಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಾಯಕಿ ರೀಟಾ ಅಂಚನ್ ರಾಧಾಕೃಷ್ಣ ನಟಿಸಿದ್ದರೂ ಕನ್ನಡದಲ್ಲಿ ಹೆಚ್ಚು ದಿನ ಉಳಿದುಕೊಳ್ಳಲಾಗಲಿಲ್ಲ. ಇದೇ ನಟಿ ರೀಟಾ ಅಂಚನ್ ರಾಧಾಕೃಷ್ಣ ಎರಡು ದಿನಗಳ ಹಿಂದೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾದ ಸುದ್ದಿ ತಡವಾಗಿ ಸಿಕ್ಕಿದೆ.

Kannada Movie Parasangada Gendethimma actress Rita Anchan Radhakrishna died due to ill health

ರೀಟಾ ಅಂಚನ್ ರಾಧಾಕೃಷ್ಣ ಅವರಿಗೆ 68 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರದಂದು (ನವೆಂಬರ್ 13) ಇಹಲೋಕವನ್ನು ತ್ಯಜಿಸಿದ್ದಾರೆ. ಕೆಲವೇ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದರು. ಈ ನಟಿಯ ನಿಧನದ ಸುದ್ದಿಯನ್ನು ನಿರ್ದೇಶಕ ರಘುರಾಮ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರೀಟಾ ಅಂಚನ್ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಅವರನ್ನು ಬಹುತೇಕವಾಗಿ ಗುರುತಿಸುತ್ತಿದ್ದಿದ್ದು 'ಪರಸಂಗದ ಗೆಂಡೆತಿಮ್ಮ' ಸಿನಿಮಾದ ಮೂಲಕವೇ. 1978ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ರೀಟಾ ಅಂಚನ್ ಬೋಲ್ಡ್‌ ರೋಲ್‌ನಲ್ಲಿ ನಟಿಸಿದ್ದರು. ಲೋಕೇಶ್ ಅಂತಹ ದಿಗ್ಗಜರ ಮುಂದೆ ನಟಿಸಿ ರೀಟಾ ಅಂಚನ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಈಗ ಇವರು ಅನಾರೋಗ್ಯದಿಂದ ಎರಡು ದಿನಗಳ ಹಿಂದೆ ನಿಧನರರಾಗಿದ್ದಾರೆ. ಈ ವಿಷಯವನ್ನು ರಘುರಾಮ್ ತಮ್ಮ ಫೇಸ್‌ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

"ನಿಮ್ಮೆಲ್ಲರಿಗೂ ಇವರ ಜೀವನದ ಕಥೆಯನ್ನು ಪರಿಚಯಿಸಬೇಕೆಂಬ ನನ್ನ ಕನಸು ನನಸಾಗಲಿಲ್ಲ. 'ಪರಸಂಗದ ಗೆಂಡೆತಿಮ್ಮ' ಖ್ಯಾತಿಯ ಶ್ರೀಮತಿ ರೀಟಾ ಅಂಚನ್ ರಾಧಾಕೃಷ್ಣ ಅವರು ನಿನ್ನೆ (13/11/2024) ರಂದು ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ಕೊಡಲಿ." ಎಂದು ರಘುರಾಮ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ರೀಟಾ ಅಂಚನ್ 'ಕರಾವಳಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ಬಹುಭಾಷೆಯ ನಟಿಯಾಗಿದ್ದರು. ಕನ್ನಡ ಸೇರಿದಂತೆ ಹಿಂದಿ, ಗುಜರಾತಿ, ಪಂಜಾಬಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ 'ಪರಸಂಗದ ಗೆಂಡೆತಿಮ್ಮ' ಸಿನಿಮಾದ ಜೊತೆ 'ಅನುರಿಕ್ತೆ', ' ಧರ್ಮ ದಾರಿ ತಪ್ಪಿತು', 'ಕನಕಾಂಬರ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ 'ಬದ್ನಾಂ', 'ಗರ್ಲ್ ಜವಾನ್ ಹೋಗಯಾ', 'ಆತ್ಮ', 'ಫರ್ಜ್ ಊರ್ ಪ್ಯಾರ್' ಅಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ರೀಟಾ ಅಂಚನ್ ಅವರಿಗೆ ನಟ ಹಾಗೂ ಉಧ್ಯಮಿಯಾಗಿದ್ದ ರಾಧಾಕೃಷ್ಣ ಮಂಚಿಗಯ್ಯ ಅವರ ಮೇಲೆ ಒಂದೇ ಸಿನಿಮಾದಲ್ಲಿಯೇ ಪ್ರೀತಿ ಹುಟ್ಟಿತ್ತು. 1978ರಲ್ಲಿ ಇಬ್ಬರು ವಿವಾಹವಾದರು. ಆ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರಿಗೆ ಅಭಿಷೇಕ್ ಹಾಗೂ ಐಶ್ವರ್ಯಾ ಎಂಬ ಇಬ್ಬರು ಮಕ್ಕಳು ಇದ್ದಾರೆ. ಅಂದ್ಹಾಗೆ ರೀಟಾ ಅಂಚನ್ ಅವರ ಅತ್ತೆ ವನಿತಾ ಮೈಸೂರು ಮಹಾರಾಜ ಒಡೆಯರ್ ಕುಟುಂಬಕ್ಕೆ ಸೇರಿದಂತೆ ಎಂದು ಎನ್ನಲಾಗಿದೆ. ವಿವಾಹದ ಬಳಿಕ ಸಿನಿಮಾದಿಂದ ದೂರವೇ ಉಳಿದುಬಿಟ್ಟಿದ್ದರು.

More from Filmibeat

English summary
Kannada Movie Parasangada Gendethimma actress Rita Anchan Radhakrishna died due to ill health;
Read more about: actress death filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X