ಪ್ರೇಮಿಗಳ ದಿನ ಮುಗಿಯುತ್ತಿದ್ದಂತೆ 'ರವಿಕೆ ಪ್ರಸಂಗ' ಥಿಯೇಟರ್‌ಗೆ ಎಂಟ್ರಿ; ಸೆನ್ಸಾರ್‌ನಿಂದಲೂ ಗ್ರೀನ್ ಸಿಗ್ನಲ್

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ವಿಭಿನ್ನ ಕಥೆಯನ್ನು ಆಧರಿಸಿದ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಂತಹ ಸಿನಿಮಾಗಳಲ್ಲಿ 'ರವಿಕೆ ಪ್ರಸಂಗ' ಕೂಡ ಒಂದು.

'ರವಿಕೆ ಪ್ರಸಂಗ' ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು, ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಕನ್ನಡದಲ್ಲಿ ಇಂತಹದ್ದೊಂದು ವಿಭಿನ್ನ ಟೈಟಲ್‌ ಇಟ್ಟು ಸಿನಿಮಾ ರಿಲೀಸ್ ಆಗುತ್ತಿವೆ. ಈ ಸಾಲಿಗೆ 'ರವಿಕೆ ಪ್ರಸಂಗ' ಕೂಡ ಸೇರಲಿದೆ. ಈಗಾಗಲೇ 'ರವಿಕೆ ಪ್ರಸಂಗ' ಸಿನಿಮಾ ಶೂಟಿಂಗ್ ಮುಗಿದಿದ್ದು, ಸಿನಿಮಾದ ಟೀಸ‌ರ್ ಮತ್ತು ಟ್ರೈಲರ್‌ಗೆ ಮೆಚ್ಚುಗೆ ಸಿಕ್ಕಿದೆ.

 Kannada Movie Ravike Prasanga Releasing on Feb 16th

ಇತ್ತೀಚೆಗೆ ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಿರ್ಮಾಣದ ಸಂತೋಷ್ ಕೊಡೆಂಕೇರಿ ನಿರ್ದೇಶಿಸಿದ 'ರವಿಕೆ ಪ್ರಸಂಗ' ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದೆ. ಬಳಿಕ 'ರವಿಕೆ ಪ್ರಸಂಗ'ಕ್ಕೆ ಯು-ಎ ಸರ್ಟಿಫಿಕೇಟ್ ಕೂಡ ನೀಡಿದೆ.

ರವಿಕೆಯನ್ನೇ ( ಬ್ಲೌಸ್) ಕಥೆಯ ಪ್ರಮುಖ ವಸ್ತುವಾಗಿಟ್ಟುಕೊಂಡು ಪಕ್ಕಾ ಕೌಟುಂಬಿಕ ಕಥಾ ಹಂದರದ ಸಿನಿಮಾ ಹೆಣೆಯಲಾಗಿದೆ. ಹಾಸ್ಯಭರಿತ ಉತ್ತಮ ಸಂದೇಶವನ್ನು ಸಾರುವ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. 'ರವಿಕೆ ಪ್ರಸಂಗ' ಸಿನಿಮಾದ ರವಿಕೆ ಹಾಡುಗಳು ಕೂಡ ಇಷ್ಟ ಆಗುತ್ತಿವೆ. ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಇನ್ನು "ಮನಸಲಿ ಜೋರು ಕಲರವ.." ಅನ್ನೋ ಹಾಡನ್ನು ಮಾನಸ ಹೊಳ್ಳ, "ಹಸಿಮನಸಲಿ.." ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಗೀತಾ ಭಾರತಿ ಭಟ್ ನಟಿಸಿದ್ದಾರೆ. ಇವರೊಂದಿಗೆ ಎವರ್‌ಗ್ರೀನ್ ಬ್ಯೂಟಿ ಸುಮನ್ ರಂಗನಾಥ್ ಕೂಡ ನಟಿಸಿದ್ದಾರೆ.

 Kannada Movie Ravike Prasanga Releasing on Feb 16th

ರವಿಕೆ ಪ್ರಸಂಗ ಸಿನಿಮಾವನ್ನು ಮಾಷ್೯ ಡಿಸ್ಟ್ರಿಬ್ಯುಟರ್ಸ್ ಸಂಸ್ಥೆ ರಿಲೀಸ್ ಮಾಡುತ್ತಿದೆ. ವಿಶೇಷ ಅಂದರೆ, ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಕುಟುಂಬ ಸಮೇತ ನೋಡಬೇಕಾದ ಸಿನಿಮಾ ಇದಾಗಿದ್ದು, ಪ್ರತಿಯೊಬ್ಬ ಮಹಿಳೆಯರ ಜೀವನದಲ್ಲಿ ನಡೆಯುವ ಕಥೆ ಹೊಂದಿದೆ. ಪಾವನಾ ಸಂತೋಷ್ ಕಥೆ, ಸಂಭಾಷಣೆ ಇದೆ.

ಹೆಣ್ಣು ಮಕ್ಕಳಿಗೆ ಸೀರೆ ಮೇಲೆ ಎಲ್ಲಿಲ್ಲದ ಪ್ರೀತಿ. ಸೀರೆಯಷ್ಟೇ ನೀಟ್ ಆಗಿ ಬ್ಲೌಸ್ ಇರಬೇಕು. ಸೀರೆ ಖರ್ಚು ಮಾಡಿದ್ದಕ್ಕಿಂತ ಹೆಚ್ಚು ಹಣ ರವಿಕೆಗೆ ಕೊಡುತ್ತಾರೆ. ಒಂದು ಸಮಾರಂಭಕ್ಕೆ ಹೊರಡಲು ರೆಡಿಯಾದರೆ, ಇಂಥದ್ದೇ ಸೀರೆ, ಹೀಗೆ ಇರಬೇಕು ಅಂತ ಆಸೆ ಪಡುತ್ತಾರೆ. ಒಳ್ಳೆಯ ಟೇಲರ್‌ ಹತ್ತಿರ ಬ್ಲೌಸ್ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆಗೆ ಟೇಲರ್ ಏನಾದರೂ ಒಂದು ಯಡವಟ್ಟು ಮಾಡುತ್ತಾರೆ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ಈ 'ರವಿಕೆ ಪ್ರಸಂಗ'.

ಈ ಸಿನಿಮಾದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಹಾಸ್ಯ ರೂಪದಲ್ಲಿ ಹೇಳಲಾಗಿದೆ. ಮಂಗಳೂರು ಕನ್ನಡ ಶೈಲಿಯ ಭಾಷೆಯನ್ನು ಬಳಸಿರುವುದು ವಿಶೇಷ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದ್ದು, ಫೆಬ್ರವರಿ 16 ರಂದು 'ರವಿಕೆ ಪ್ರಸಂಗ' ರಾಜ್ಯಾದ್ಯಂತ ತೆರೆಕಾಣಲಿದೆ.

More from Filmibeat

English summary
Kannada Movie Ravike Prasanga Releasing After Valetains Day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X