ಅತಿರಥ ಮಹಾರಥಿ 'ಸಾರಥಿ': ಭರ್ಜರಿ ಫಿಫ್ಟಿ ನಾಟ್ ಔಟ್

Darshan Sarathi
ಈಗ ಎಲ್ಲೆಲ್ಲೂ ದರ್ಶನ್ ಅಭಿನಯದ ಸಾರಥಿ ಚಿತ್ರದ್ದೇ ಮಾತು. ಚಿತ್ರದ ಯಶಸ್ಸು ಎಲ್ಲರಲ್ಲೂ ಮಾತನಾಡಿಸುತ್ತಿದೆ. ನಿರ್ಮಾಪಕರಿಗೆ ಸಾಕುಸಾಕು ಅನಿಸುವಷ್ಟು ಹಣದ ಹೊಳೆಯನ್ನೇ ಈಗಾಗಲೇ ಚಿತ್ರ ಹರಿಸಿ ಬಿಟ್ಟಿದೆ, ಮಾತ್ರವಲ್ಲದೇ ಭರ್ಜರಿಯಾಗಿ ಮುನ್ನುಗ್ಗುತ್ತಿದೆ.

ಸೆಪ್ಟೆಂಬರ್ 30 ರಂದು ಬಿಡುಗಡೆಗೊಂಡಿದ್ದ ಸಾರಥಿ ಚಿತ್ರ ಯಶಸ್ವಿ 50 ದಿನ ಪೂರೈಸಿದೆ. ಚಿತ್ರ ರಿಲೀಸ್ ಆಗಿದ್ದಾಗಿಂದಲೂ ತುಂಬಿದ ಪ್ರದರ್ಶನ ಕಾಣುತ್ತಿದ್ದ ಚಿತ್ರ ಒಂದು ವಾರದ ನಂತರ ಪುನೀತ್ ಅಭಿನಯದ ಪರಮಾತ್ಮ ಚಿತ್ರಕ್ಕೆ ಪೈಪೋಟಿ ನೀಡಬೇಕಿತ್ತು. ಎಲ್ಲಾ ಪೈಪೋಟಿಯನ್ನು ಮೀರಿ ಸಾರಥಿ 93 ಸೆಂಟರ್ ಗಳಲ್ಲಿ 50 ದಿನ ಪೂರೈಸಿ ಸ್ಯಾಂಡಲ್ ವುಡ್ ಗೆ ಇನ್ನಷ್ಟು ಹುರುಪು ನೀಡಿದೆ.

ಬೆಂಗಳೂರು ನಗರವೊಂದರಲ್ಲೇ 20 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ವಾಗುತ್ತಿದೆ. ಒಟ್ಟು ರೆಕಾರ್ಡ್ 147 ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆಗೊಂಡಿತ್ತು. ಅದರಲ್ಲಿ 135 ಸಿನಿಮಾಹಾಲ್ ನಲ್ಲಿ 25 ಪೂರೈಸಿದರೆ 93 ಸೆಂಟರ್ ನಲ್ಲಿ 50 ದಿನ ಪೂರೈಸಿ ಇನ್ನೂ ಅಜೇಯವಾಗಿ ಉಳಿದಿದೆ.

ಕರಾವಳಿ ಭಾಗದಿಂದ ಹಿಡಿದು ಎಲ್ಲಾ ಕಡೆಯಲ್ಲೂ ಚಿತ್ರಕ್ಕೆ ಅಧ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಅಲ್ಲದೆ ಚಿತ್ರ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಗಳಿಕೆ ಇದೇ ರೀತಿ ಮುಂದುವರಿದರೆ ಕನ್ನಡದ ಇದುವರೆಗಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಲಿದ್ದಾನೆ ಈ ಅತಿರಥ ಮಹಾರಥಿ ಸಾರಥಿ.

More from Filmibeat

English summary
Challenging Star Darshan's Sarathi movie completed 50 days. Movie is running successfully in 93 centers and heading towards breaking all Sandalwood records.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X