ಮಠ ಗುರುಪ್ರಸಾದ್ ಬಳಿ ಪಳಗಿದ 'ವೀಲ್ ಚೇರ್ ರೋಮಿಯೋ'ನಿರ್ದೇಶಕನ 15 ವರ್ಷಗಳ ಪರಿಶ್ರಮ!

ಸ್ಯಾಂಡಲ್‌ವುಡ್‌ನಲ್ಲಿ 'ವೀಲ್ ಚೇರ್ ರೋಮಿಯೋ' ಅನ್ನುವ ಹೊಸ ಸಿನಿಮಾವೊಂದು ಟ್ರೈಲರ್‌ನಿಂದಲೇ ಸದ್ದು ಮಾಡುತ್ತಿದೆ. ನಟರಾಜ್ ಎಂಬುವವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ' ವೀಲ್ ಚೇರ್ ರೋಮಿಯೋ' ಸಿನಿಮಾ ಡೈರೆಕ್ಟ್ ಮಾಡುವುದಕ್ಕೆ ಈ ನಿರ್ದೇಶಕನಿಗೆ 15 ವರ್ಷವೇ ಹಿಡಿದೆ. ಹಾಗಂತ ಇದು 15 ವರ್ಷದ ಹಿಂದಿನ ಕಥೆಯಲ್ಲ. ನಿರ್ದೇಶಕ ಅನ್ನುವ ಹೆಸರು ಗಳಿಸಲು 15 ವರ್ಷ ಬೇಕಾಗಿತ್ತು.

ಹದಿನೈದು ವರ್ಷನಾ..? ಇದನ್ನು ಕೇಳಿ ಅಕ್ಷರಶಃ ಶಾಕ್ ಆಗಿರುತ್ತೀರಾ ಅಲ್ವಾ? ಸಿನಿಮಾ ಮಾಡುವುದಕ್ಕೆ ಹಣ ಹಾಕುವವರು ಸಿಕ್ಕಿದರೆ ಗಂಧ ಗಾಳಿ ಗೊತ್ತಿಲ್ಲದವರು ಸಿನಿಮಾ ಮಾಡಬಹುದು. ಅಂತಹ ಉದಾಹರಣೆಗಳು ನಮ್ಮ ಕಣ್ಣ ಮುಂದೆ ನಡೆದಿದೆ. ಆದರೆ 'ವೀಲ್ ಚೇರ್ ರೋಮಿಯೋ' ಸಿನಿಮಾ ಹಿಂದೆ ಒಂದು ದೊಡ್ಡ ಪರಿಶ್ರಮ, ಧ್ಯಾನ ಅಡಗಿದೆ. ಅದು ಒಂದೆರಡು ವರ್ಷದಲ್ಲ ಸುಮಾರು ಹದಿನೈದು ವರ್ಷದ ಪರಿಶ್ರಮ.

ಒಂದು ಸಿನಿಮಾ ಮಾಡುವುದಕ್ಕೆ ಇಷ್ಟು ವರ್ಷಗಳ ಪರಿಶ್ರಮ ಬೇಕಾ ಅಂತ ನಿಮಗೆ ಪ್ರಶ್ನೆ ಮೂಡಬಹುದು. ಆದರೆ ಟ್ರೈಲರ್‌ನಲ್ಲಿ ಆ ಪರಿಶ್ರಮದ ಫಲ ಎದ್ದು ಕಾಣುತ್ತಿದೆ. ನಟರಾಜ್ ಸಿನಿಮಾ ಕ್ಷೇತ್ರಕ್ಕೆ ನಿರ್ದೇಶಕರಾಗಬೇಕೆಂಬ ಕನಸು ಕಂಡವರು. ಆದರೆ ಬಂದ ಕೂಡಲೇ ಅದು ಅಷ್ಟು ಸುಲಭವಾಗಿ ಧಕ್ಕಲೇ ಇಲ್ಲ. ಹಾಗಂತ ಮನಸ್ಸಿಗೆ ಬೇಸರ ಮಾಡಿಕೊಂಡು ವಾಪಾಸ್ ದಾರಿಯೂ ಹಿಡಿಯಲಿಲ್ಲ. ಇಲ್ಲೇ ಇದ್ದುಕೊಂಡು, ಹಲವು ಕ್ಷೇತ್ರದಲ್ಲಿ ಅನುಭವ ಪಡೆದರು.

Kannada Movie Wheel Chair Romeo Releasing On May 27th

ಮಠ ಗುರುಪ್ರಸಾದ್, ಪಿ ಸಿ ಶೇಖರ್ ಸೇರಿದಂತೆ ಹಲವರ ಗರಡಿಯಲ್ಲಿ ಪಳಗಿದ್ದಾರೆ. ಅದೆಲ್ಲರ ಪರಿಶ್ರಮ, ಅನುಭವ ಒಟ್ಟುಗೂಡಿಸಿ ಇದೀಗ 'ವೀಲ್ ಚೇರ್ ರೋಮಿಯೋ' ಎಂಬ ವಿಭಿನ್ನ ಸಿನಿಮಾವನ್ನು ತೆರೆಗೆ ತರಲು ಸಿದ್ದರಾಗಿದ್ದಾರೆ. ಇದೇ ತಿಂಗಳ 27ಕ್ಕೆ ಸಿನಿಮಾ ತೆರೆಗೆ ಬರಲಿದೆ.

Kannada Movie Wheel Chair Romeo Releasing On May 27th

ಎಲ್ಲರನ್ನು ಕೌತುಕಗೊಳಿಸಿರುವ 'ವೀಲ್ ಚೇರ್ ರೋಮಿಯೋ' ಸಿನಿಮಾದಲ್ಲಿ ಕಿರುತೆರೆ ನಟ ರಾಮ್ ಚೇತನ್ ನಾಯಕನಾಗಿ ನಟಿಸಿದ್ದು, ಮಯೂರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಿ.ಜೆ.ಭರತ್ ಸಂಗೀತ ನಿರ್ದೇಶನವಿದ್ದು, ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದೆ. ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ.

Kannada Movie Wheel Chair Romeo Releasing On May 27th

ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಹಾರಾಷ್ಟ್ರ, ಪುಣೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ.

More from Filmibeat

English summary
Kannada Movie Wheel Chair Romeo Releasing On May 27th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X