ಮೃತ ಅಭಿಮಾನಿಗಳ ಮನೆಗೆ ಭೇಟಿ ಕೊಡಲಿರೋ ಯಶ್: ಎಲ್ಲಿದ್ದಾರೆ? ಹೇಗೆ ಬರ್ತಾರೆ?

ಇಂದು (ಜನವರಿ 8) ರಾಕಿಂಗ್ ಸ್ಟಾರ್ ಯಶ್ 38ನೇ ಹುಟ್ಟುಹಬ್ಬ. ಹೀಗಾಗಿ ದೇಶ ಮೂಲೆ ಮೂಲೆಯಲ್ಲಿ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಯುವಕರು ಮಧ್ಯರಾತ್ರಿ ಯಶ್ ಬ್ಯಾನರ್ ಕಟ್ಟಲು ಮುಂದಾಗಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಮೃತಪಟ್ಟಿದ್ದಾರೆ.

ಸೂರಣಗಿ ಗ್ರಾಮದ ಮುರಳಿ ನಡವಿನಮನಿ (20), ಹನಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ಈ ಮೂವರು ಮೃತ ಅಭಿಮಾನಿಗಳು. ಇನ್ನು ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Kannada News Toxic actor Yash will be visiting deceased fans house in Gadag

ಗದಗದ ತಮ್ಮ ಅಭಿಮಾನಿಗಳು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಯಶ್ ಅವರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಸುಮಾರು 3 ಗಂಟೆಗೆ ಯಶ್ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಸಂಜೆ 4 ಗಂಟೆ ವೇಳೆಗೆ ರಸ್ತೆ ಮಾರ್ಗವಾಗಿ ಲಕ್ಷ್ಮೀಶ್ವರದ ಸೂರಣಗಿಯಲ್ಲಿರುವ ಮೃತ ಅಭಿಮಾನಿಗಳ ಮನೆಗಳಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.

ಯಶ್ 'ಕೆಜಿಎಫ್ 2' ಬಳಿಕ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹುಟ್ಟುಹಬ್ಬಕ್ಕೆ ಕೆಲವೇ ದಿನಗಳ ಹಿಂದಷ್ಟೇ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಸಿನಿಮಾ ಕೆಲಸದ ನಿಮಿತ್ತ ಊರಲ್ಲಿ ಇರುವುದಿಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಬಹಿರಂಗ ಪತ್ರ ಬರೆದಿದ್ದರು. ಹೀಗಾಗಿದ್ದರೂ ಅಭಿಮಾನಿಗಳು ತಮ್ಮ ಊರಿನಲ್ಲೇ ಬರ್ತ್‌ಡೇ ಸಂಭ್ರಮಿಸಲು ಮುಂದಾಗಿದ್ದರು.

"ಜನವರಿ 8.. ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನ ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ.. ನನಗೂ ಅಷ್ಟೇ.. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8 ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು.. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ.. ನನಗೆ ಹುಟ್ಟುಹಬ್ಬದ ಉಡುಗೊರೆ. ನಿಮ್ಮ ಪ್ರೀತಿಯ ಯಶ್" ಎಂದು ಯಶ್ ಹುಟ್ಟುಹಬ್ಬಕ್ಕೂ ಮುನ್ನವೇ ಅಭಿಮಾನಿಗಳಿಗೆ ಸಂದೇಶ ರವಾನೆ ಮಾಡಿದ್ದರು.

Kannada News Toxic actor Yash will be visiting deceased fans house in Gadag

ಇದರ ಹೊರತಾಗಿಯೂ ರಾಕಿಂಗ್ ಸ್ಟಾರ್ ಯಶ್‌ನ ಗದಗ ಜಿಲ್ಲೆಯೆ ಲಕ್ಷ್ಮೀಶ್ವರದ ಸೂರಣಗಿ ಗ್ರಾಮದ ಅಭಿಮಾನಿ ಬರ್ತ್‌ಡೇ ಸೆಲೆಬ್ರೆಷನ್ ಮಾಡುವುದಕ್ಕೆ ಮುಂದಾಗಿದ್ದರು. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮಿಸಲು ಹೋದ ಮೂವರು ಅಭಿಮಾನಿಗಳು ಮೃತಪಟ್ಟಿದ್ದಾರೆ. ಹೀಗಾಗಿ ತಮ್ಮ ಮೃತ ಅಭಿಮಾನಿಗಳ ಮನೆಗಳಿಗೆ ಯಶ್ ಭೇಟಿ ಮಾಡಲಿದ್ದಾರೆ.

ಮೂಲಗಳ ಪ್ರಕಾರ, ಯಶ್ 'ಟಾಕ್ಸಿಕ್' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ವಿದೇಶದಲ್ಲಿ ಈ ಸಿನಿಮಾದ ಶೂಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಯಶ್ ಬ್ಯಾಂಕಾಕ್‌ನಲ್ಲಿ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಂದ ನೇರವಾಗಿ ತಮ್ಮ ಅಭಿಮಾನಿಗಳ ಮನೆಗೆ ಭೇಟಿ ಕೊಡಲಿದ್ದಾರೆ ಅನ್ನೋ ಸುದ್ದಿಯಿದೆ.

More from Filmibeat

English summary
Yash will be visiting deceased fans house in Gadag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X