ರಿವೇಂಜ್ ಸ್ಟೋರಿ 'ಕರಿಕಾಡ'; ಪ್ಯಾನ್ ಇಂಡಿಯಾ ರಿಲೀಸ್‌ಗೆ ರೆಡಿ.. ಹೇಗಿದೆ ಕ್ರೇಜ್?
ಪ್ಯಾನ್ ಇಂಡಿಯಾ ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗಬೇಕು ಅಂದೇನು ಇಲ್ಲ. ಕಂಟೆಂಟ್ ಚೆನ್ನಾಗಿದ್ದರೆ, ಸಿನಿಮಾವನ್ನು ಕಡಿಮೆ ಬಜೆಟ್‌ನಲ್ಲಿಯೂ ಮಾಡಬಹುದು. ಇದಕ್ಕೆ 'ಕಾಂತಾರ'ವೇ ಸಾಕ್ಷಿ. ಈಗ ಮತ್ತೊಂದು ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕಾಗಿ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ. ಅದುವೇ 'ಕರಿಕಾಡ'.
'ಕರಿಕಾಡ' ಸಿನಿಮಾ ಟೈಟಲ್‌ನಿಂದಲೇ ಗಮನ ಸೆಳೆಯುತ್ತಿದೆ. ಹೊಸ ಪ್ರತಿಭೆಗಳೇ ಸೇರಿ ಸಿನಿಮಾ ಮಾಡಿವೆ. ಹೊಸಬರ ತಂಡ ವಿಭಿನ್ನ ಸಾಹಸಕ್ಕೆ ಕೈ ಹಾಕಿದ್ದು, ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಂಡಿವೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ತುಣುಕುಗಳು ಪ್ರೇಕ್ಷಕರ ಗಮನ ಸೆಳೆದಿದೆ. ಇತ್ತೀಚೆಗೆ ಬಿಡುಗಡೆಯಾದ ಸಿನಿಮಾದ ಟೀಸರ್ ಭರವಸೆಯನ್ನು ಮೂಡಿಸಿದೆ.

ಪ್ಯಾನ್ ಇಂಡಿಯಾ ಸಿನಿಮಾ ಮಾಡೋದು ಅಷ್ಟು ಸುಲಭ ಅಲ್ಲ. ಅದರಲ್ಲೂ ಅದನ್ನು ರಿಲೀಸ್ ಮಾಡುವುದಂತೂ ಇನ್ನು ಕಷ್ಟ. ಐದು ಭಾಷೆಯಲ್ಲೂ ಏಕಕಾಲಕ್ಕೆ ರಿಲೀಸ್ ಮಾಡುವುಕ್ಕೆ ಥಿಯೇಟರ್ ಸೆಟಪ್ ಮಾಡುವುದೇ ದೊಡ್ಡ ಚಾಲೆಂಜ್. ಜೊತೆಗೆ ಎಲ್ಲಾ ಭಾಷೆಯಲ್ಲಿಯೂ ಸಿನಿಮಾದ ಪ್ರಚಾರ ಆಗಬೇಕು. ಹೀಗಿದ್ದು ಈ ತಂಡ ಈ ಸಾಹಸಕ್ಕೆ ಕೈ ಹಾಕಿದೆ.
'ಕರಿಕಾಡ' ಸಿನಿಮಾದಲ್ಲಿ ಕಾಡ ನಟರಾಜ್ ನಾಯಕನಾಗಿ ಹಾಗೂ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಹಾಡು ಕೇಳಿರುವ ಸಿನಿ ಪ್ರಿಯರು ಇಬ್ಬರ ಸ್ಕ್ರೀನ್ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗೇ ಗಿಲ್ಲಿ ವೆಂಕಟೇಶ್ ಆಕ್ಷನ್ ಕಟ್ ಹೇಳಿದ್ದು, ಸಿನಿಮಾವನ್ನು ರಿದ್ದಿ ಎಂಟರ್ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ , ದೀಪ್ತಿ ದಾಮೋದರ್ ನಿರ್ಮಿಸಿದ್ದಾರೆ.
ಸದ್ಯಕ್ಕೀಗ ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿವೆ. ಈ ಲಿಸ್ಟ್‌ನಲ್ಲಿ 'ಕರಿಕಾಡ' ಕೂಡ ಒಂದು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗುತ್ತಿವೆ. 'ಕರಿಕಾಡ' ಇದೇ ಫೆಬ್ರವರಿ 6ರಂದು ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪಕ್ಕ ಹಳ್ಳಿ ಸೊಗಡಿನ ಜೊತೆಗೆ ಅಡ್ವೆಂಚರ್ಸ್ ಸಿನಿಮಾವೆಂದು ಟೀಸರ್ ನೋಡಿದಾಗ ಅನಿಸುತ್ತಿದೆ.

'ಕರಿಕಾಡ' ಹೆಸರೇ ಹೇಳುವಂತೆ ಇದೊಂದು ಕಾಡಿನಲ್ಲಿ ನಡೆಯುವ ಕಥೆ. ದ್ವೇಷ, ಪ್ರತಿಕಾರ ಮತ್ತು ಪ್ರೀತಿ ಎಲ್ಲ ಭಾವನೆಗಳ ಮಿಶ್ರಣ ಈ ಟೀಸರ್‌ನಲ್ಲಿ ಇದೆ. ಹಾಗಾಗಿ ಟೀಸರ್ ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿರುವುದು ಸತ್ಯ. ಸಿನಿಮಾಗೆ ಅತೀಶಯ ಜೈನ್ ಮತ್ತು ಶಶಾಂಕ್ ಶೇಷಗಿರಿ ಇಬ್ಬರೂ ಟ್ಯೂನ್ ಹಾಕಿದ್ದಾರೆ. ಈಗಾಗಲೇ "ರತುನಿ ರತುನಿ.." ಮತ್ತು "ಕಬ್ಬಿನ್ ಜಲ್ಲೆ.." ಎನ್ನುವ ಎರಡು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಇನ್ನು ಸಿನಿಮಾದ ಮೂರನೇ ಹಾಡು 'ನೀ ಯಾರೇ ನನಗೆ ' ಜನವರಿ 28 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಒಂದು ರೀತಿಯಲ್ಲಿ ಹೊಸ ಪ್ರತಿಭೆಗಳಿರುವ ಈ ಸಿನಿಮಾವು ಬಿಡುಗಡೆಗೂ ಮುನ್ನವೇ ಅಬ್ಬರಿಸುತ್ತಿದೆ. ಜೊತೆಗೆ ಸಿನಿಮಾದ ಕಥೆ ಹಾಗೂ ನಟನೆಯ ಬಗ್ಗೆ ಸಿನಿ ಪ್ರಿಯರಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿದೆ. 'ಕರಿಕಾಡ' ಬಿಡುಗಡೆಗೂ ಮುನ್ನವೇ ಸಂಚಲನ ಮೂಡಿಸುತ್ತಿರುವ ಈ ಸಿನಿಮಾವು ಇದೀಗ ತೆರೆ ಮೇಲೆ ಬರಲು ಸಜ್ಜಾಗಿದೆ.


Click it and Unblock the Notifications











