'ಕೆಜಿಎಫ್ 2' ಗೆಲುವಿನ ಬಳಿಕ ಗಗನಕ್ಕೇರಿದ ಯಶ್ ಸಿನಿಮಾ ಬಜೆಟ್; 'ಟಾಕ್ಸಿಕ್'ಗಾಗಿ ಖರ್ಚಾಗುತ್ತಿರೋದು ₹450 ಕೋಟಿ?
'ಕೆಜಿಎಫ್' ಸಿನಿಮಾ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೊಸ ವಿಷಯವೇನಲ್ಲ. 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್ ಮತ್ತೊಂದು ಸಾಹಸಕ್ಕೆ ಕೈ ಹಾಕುವಂತೆ ಮಾಡಿದೆ. 'ಕೆಜಿಎಫ್ 2' ತೆರೆಕಂಡು ಎರಡು ವರ್ಷಗಳ ಬಳಿಕ 'ಟಾಕ್ಸಿಕ್' ಸೆಟ್ಟೇರಿದೆ. ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಸದ್ಯ ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದೆ.
'ಟಾಕ್ಸಿಕ್' ಮತ್ತೊಂದು 'ಕೆಜಿಎಫ್' ಅಲ್ಲ ಅನ್ನೋದನ್ನು ಈಗಾಗಲೇ ಗೊತ್ತಾಗಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡುತ್ತೆ ಅನ್ನೋ ನಂಬಿಕೆಯಲ್ಲೇ ಅವರ ಅಭಿಮಾನಿಗಳು ಇದ್ದಾರೆ. ಈ ಮಧ್ಯೆ ಕನ್ನಡದ ಹಿರಿಯ ನಿರ್ಮಾಪಕ ಕೆ. ಮಂಜು 'ಟಾಕ್ಸಿಕ್' ಬಗ್ಗೆ ಇನ್ನಷ್ಟು ಇಂಟ್ರೆಸ್ಟಿಂಗ್ ವಿಷಯಗಳನ್ನು ಹೊರ ಹಾಕಿದ್ದಾರೆ.

ನಿರ್ಮಾಪಕ ಕೆ. ಮಂಜು ಇತ್ತೀಚೆಗೆ ಡೈಲಿ ಮಾಧ್ಯಮ ಅನ್ನುವ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಆ ವೇಳೆ 'ಟಾಕ್ಸಿಕ್' ಸಿನಿಮಾದ ಬಜೆಟ್ ಹಾಗೂ ಯಶ್ ಮುಂದಿನ ಗುರಿ ಏನು ಅನ್ನೋದನ್ನು ರಿವೀಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ 'ಟಾಕ್ಸಿಕ್' ಬಜೆಟ್ 450 ಕೋಟಿ ರೂಪಾಯಿನಾ? ಪ್ಯಾನ್ ಇಂಡಿಯಾನಾ? ಪ್ಯಾನ್ ವರ್ಲ್ಡ್ ಸಿನಿಮಾನಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಯಶ್ 'ಕೆಜಿಎಫ್' ಮಾಡಿದಾಗ ಪ್ಯಾನ್ ಇಂಡಿಯಾ ಅನ್ನುವುದನ್ನು ಗಮನದಲ್ಲಿ ಇಟ್ಟುಕೊಂಡೇ ಸಿನಿಮಾ ಮಾಡಿದ್ದರು. ಕೇವಲ ದಕ್ಷಿಣ ಭಾರತವನ್ನು ಗಮನದಲ್ಲಿ ಇಟ್ಟುಕೊಂಡು ಮಾಡಲಿಲ್ಲ. ಉತ್ತರ ಭಾರತದಲ್ಲೂ ತನ್ನ ಸಿನಿಮಾ ಸದ್ದು ಮಾಡಬೇಕು ಅಂತಲೇ ಗಮನ ಹರಿಸಿದ್ದರು. ಕೆಜಿಎಫ್ ಗೆಲ್ಲುತ್ತಿದ್ದಂತೆ ಇಡೀ ಚಿತ್ರರಂಗವೇ ಉತ್ತರ ಭಾರತದ ಬಗ್ಗೆ ಯೋಚನೆ ಮಾಡಿತು. ಇದಕ್ಕೂ ಮೊದಲು 2 ರಿಂದ 3 ಕೋಟಿ ರೂ.ಗೆ ಹಿಂದಿ ಡಬ್ಬಿಂಗ್ ಅಂತ ಮಾರಿ ಸುಮ್ಮನಾಗಿ ಬಿಡುತ್ತಿದ್ದರು. ಆದ್ರೀಗ ಅವರ ನಿರೀಕ್ಷೆ ಹೆಚ್ಚಾಗಿದೆ ಎಂದು ಹಿರಿಯ ನಿರ್ಮಾಪಕ ಕೆ.ಮಂಜು ಅಭಿಪ್ರಾಯ ಪಟ್ಟಿದ್ದಾರೆ.

"ಕನ್ನಡದಲ್ಲಿ ದೊಡ್ಡ ಮಾರ್ಕೆಟ್ ಓಪನ್ ಮಾಡಿಕೊಟ್ಟಿದ್ದು ಕೆಜಿಎಫ್. ಅಲ್ಲಿವರೆಗೂ ಕನ್ನಡ ಸೀಮಿತವಾಗಿತ್ತು. ಆದರೆ, ಯಶ್, ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ದುಡ್ಡು ಹಾಕಿ ಡಾರ್ಕ್ ಸಿನಿಮಾ ಮಾಡಿದ್ದಾರೆ. ಅದು ಪ್ಯಾನ್ ಇಂಡಿಯಾ ಹಿಟ್ ಆಯ್ತು. ಈಗ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾವನ್ನೇ ಮಾಡುತ್ತಿದ್ದಾರೆ." ಎಂದು ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ಹಿರಿಯ ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ.
ಇದೇ ವೇಳೆ 'ಟಾಕ್ಸಿಕ್' ಸಿನಿಮಾ ಬಜೆಟ್ ಎಷ್ಟು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಟಾಕ್ಸಿಕ್ ಸಿನಿಮಾವನ್ನು ಅದ್ಭುತವಾಗಿ ಮಾಡುತ್ತಿದ್ದಾರೆ. 450 ಕೋಟಿ ರೂ. ಕೇವಲ ಖರ್ಚಾಗುತ್ತಿದೆ. ಇದರಲ್ಲಿ ಸಂಭಾವನೆ ಸೇರಿಕೊಂಡಿಲ್ಲ. ದೊಡ್ಡ ದೊಡ್ಡ ಸೆಟ್ ಹಾಕುತ್ತಿದ್ದಾರೆ. ಅದು ಪ್ಯಾನ್ ವರ್ಲ್ಡ್ ಸಿನಿಮಾ. ಯಶ್ ಆಲೋಚನೆ ಏನು ಅಂದರೆ, ಪ್ಯಾನ್ ಇಂಡಿಯಾ ಮಾಡಿ ಆಯ್ತು. ಪ್ಯಾನ್ ವರ್ಲ್ಡ್‌ಗೆ ಸ್ಕೆಚ್ ಹಾಕಿದ್ದಾರೆ. ಯಶ್ ಸಕ್ಸಸ್ ಆಗುತ್ತಾರೆ." ಎಂದಿದ್ದಾರೆ.
ಈಗ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇನ್ಮುಂದೆ ಬರುತ್ತೆ ಪ್ಯಾನ್ ವರ್ಲ್ಡ್ ಸಿನಿಮಾ. ಅದೇ ಟಾಕ್ಸಿಕ್. ಎಲ್ಲಾ ಪ್ಯಾನ್ ಇಂಡಿಯಾ ಪ್ಯಾನ್ ಇಂಡಿಯಾ ಅಂತಾರೆ. ಅದನ್ನು ಬಿಟ್ಟು ಬಿಟ್ಟ. ನಾನು ಓಪನ್ ಮಾಡಿದ್ದೀನಿ. ಎಷ್ಟು ಬೇಕಾದರೂ ನುಗ್ಗಿ ಅಂದಿದ್ದಾನೆ. ಈಗ ವರ್ಲ್ಡ್‌ವೈಡ್ ಕವರ್ ಮಾಡುವುದಕ್ಕೆ ನಮ್ಮ ಯಶ್ ಅವರ ಟಾಕ್ಸಿಕ್ ಅಂತ ಸಿನಿಮಾ ಮಾಡುತ್ತಿದ್ದಾರೆ ಎಂದು ನಿರ್ಮಾಪಕ ಕೆ.ಮಂಜು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











