"ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲರಾಗಿರಲಿಲ್ಲ"; ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಚಿತ್ರರಂಗದ ಪ್ರತಿಕ್ರಿಯೆ

ಸ್ಯಾಂಡಲ್‌ವುಡ್‌ನ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಆತ್ಯಹತ್ಯೆಗೆ ಶರಣಾಗಿದ್ದಾರೆ. ಕನ್ನಡ ಸಿನಿಮಾಗಳನ್ನು ನಿರ್ಮಾಣದ ಜೊತೆಗೆ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು. ಕನ್ನಡದ ಶ್ರೀಮಂತ ನಿರ್ಮಾಪಕರಲ್ಲಿ ಸೌಂದರ್ಯ ಜಗದೀಶ್ ಕೂಡ ಒಬ್ಬರಾಗಿದ್ದರು. ಇಂದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಚಿತ್ರರಂಗಕ್ಕೆ ಶಾಕ್ ಆಗಿದೆ.

ನಿರ್ಮಾಪಕ ಸೌಂದರ್ಯ ಜಗದೀಶ್, ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಬಿಲ್ಡಿಂಗ್ ಕನ್‌ಸ್ಟ್ರಕ್ಷನ್‌ ಉದ್ಯಮಗಳಲ್ಲಿ ಸಕ್ರಿಯರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವೇ ಉಳಿದಿದ್ದರು. ಸೌಂದರ್ಯ ಕನ್‌ಸ್ಟ್ರಕ್ಷನ್ ಹಾಗೂ ಸೌಂದರ್ಯ ಲಿಂಕ್ಸ್, ಜೆಟ್‌ಲ್ಯಾಗ್‌ ಪಬ್ ಅನ್ನು ನಡೆಸುತ್ತಿದ್ದರು.

Kannada Producer Soundarya Jagadesh death film celebrity reactions

ಇತ್ತೀಚೆಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಉದ್ಯಮ ಕೈ ಕೊಟ್ಟಿದ್ದ ಬೆನ್ನಲ್ಲೇ ಸೌಂದರ್ಯ ಜಗದೀಶ್ ಕಂಗಲಾಗಿದ್ದರು ಅನ್ನೋ ಮಾತು ಹೇಳಿಬರುತ್ತಿದೆ. ಆದರೆ, ಆತ್ಮಹತ್ಯೆ ಅಸಲಿ ಕಾರಣವೇನು? ಅನ್ನೋದನ್ನು ಇನ್ನಷ್ಟೇ ಹೊರ ಬೀಳಬೇಕಿದೆ. ಈ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಸೌಂದರ್ಯ ಜಗದೀಶ್ ಹಾಗೂ ನಿರ್ಮಾಪಕ ಉಮೇಶ್ ಬಣಕಾರ್ ಇಬ್ಬರೂ ಗೆಳೆಯರಾಗಿದ್ದರು. ಒಟ್ಟಿಗೆ ಶಿಕ್ಷಣವನ್ನು ಪೂರೈಸಿದ್ದ ಉಮೇಶ್ ಬಣಕರ್ ಗೆಳೆಯ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಮನ:ಸ್ಥಿತಿಯವರಾಗಿರಲಿಲ್ಲ ಎಂದಿದ್ದಾರೆ.

"ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಶಾಕಿಂಗ್. ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನ:ಸ್ಥಿತಿಯವರು ಅಲ್ಲ. ಅವರು ನಿರ್ಮಾಪಕ ಕಮ್ ಬಿಲ್ಡರ್ ಆಗಿದ್ದರು. ಇತ್ತೀಚೆಗೆ ಅವರು ರಿಯಲ್ ಎಸ್ಟೇಟ್ ಬ್ಯುಸಿನೆಸ್‌ ಕಡೆ ಹೆಚ್ಚು ಒಲವು ಹೊಂದಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದೇ ಆದರೆ ಅದು ತಪ್ಪು" ಎಂದು ಮಾಧ್ಯಮಕ್ಕೆ ಉಮೇಶ್ ಬಣಕಾರ್ ಪ್ರತಿಕ್ರಿಯೆ ನೀಡಿದ್ದಾರೆ.

Kannada Producer Soundarya Jagadesh death film celebrity reactions

ಸೌಂದರ್ಯ ಜಗದೀಶ್ ನಿರ್ಮಾಣ ಮಾಡಿದ್ದ 'ಮಸ್ತ್ ಮಜಾ ಮಾಡಿ' ಹಾಗೂ 'ಅಪ್ಪು ಪಪ್ಪು' ಸಿನಿಮಾಗಳಲ್ಲಿ ನಟಿಸಿದ್ದ ನಟ ಕೋಮಲ್ ಕೂಡ ಈ ಆಘಾತಕಾರಿ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.

"ಸೌಂದರ್ಯ ಜಗದೀಶ್ ಜೊತೆ ಮಸ್ತ್ ಮಜಾ ಮಾಡಿ ಹಾಗೂ ಅಪ್ಪು ಪಪ್ಪು ಎರಡೂ ಸಿನಿಮಾ ಮಾಡಿದ್ದೆ. ಕೆಲವು ದಿನಗಳ ಹಿಂದಷ್ಟೇ ಅವರ ಮಗಳು ಮದುವೆ ಕೂಡ ಮಾಡಿದ್ದರು. ವೈಯಕ್ತಿಕವಾಗಿ ನನಗೆ ಅಷ್ಟೊಂದು ಗೊತ್ತಿಲ್ಲ. ನನಗೆ ಗೊತ್ತಿದ್ದ ಹಾಗೇ ಅವರು ಅನುಕೂಲವಾಗಿದ್ದರು. ಏನಾಯ್ತು ಅನ್ನೋದು ಗೊತ್ತಿಲ್ಲ. ಆದರೆ, ಒಳ್ಳೆಯ ಮನುಷ್ಯ." ಎಂದು ಕೋಮಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Kannada Producer Soundarya Jagadesh death film celebrity reactions

ಇನ್ನು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ ಎಂ ಸುರೇಶ್ ಕೂಡ ಶಾಕ್ ಆಗಿದ್ದಾರೆ. " ಮೊದಲು ಅವನು ಹೃದಯವಂತ. ಒಳ್ಳೆಯ ಸ್ನೇಹಿತ ಕೂಡ ಹೌದು. ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಯಾವಾಗಲೂ ಕೆಟ್ಟದನ್ನು ಆಲೋಚನೆ ಮಾಡಿಲ್ಲ. ನಮಗೂ ಕೂಡ ಆಶ್ಚರ್ಯ ಆಗುತ್ತಿದೆ. ನಂಬಲು ಆಗುತ್ತಿಲ್ಲ. ಏನು ವಿಚಾರ ಅನ್ನೋದು ನನಗೆ ಗೊತ್ತಿಲ್ಲ. ಮದುವೆಯಲ್ಲಿ ನೋಡಿದಾಗ ಅವರ ಮುಖ ಡಲ್ ಆಗಿತ್ತು. ಅದನ್ನೇ ನಾನು ನನ್ನ ಕುಟುಂಬಕ್ಕೆ ಹೇಳುತ್ತಿದ್ದೆ. ನನಗೂ ಅವರು ತುಂಬಾನೇ ಸಹಾಯ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ." ಎಂದು ಹೇಳಿದ್ದಾರೆ.

More from Filmibeat

English summary
Producer Soundarya Jagadesh death film celebrity reactions:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X