ಹಾಡೋದನ್ನು ಬಿಟ್ಟು ಪಾಠ ಮಾಡೋಕೆ ರೆಡಿಯಾದ ಚಂದನ್ ಶೆಟ್ಟಿ: ಎಲ್ರ ಕಾಲೆಳೆಯತ್ತೆ ಕಾಲ

ಕಳೆದ ಕೆಲವು ದಿನಗಳಿಂದ ರೆಟ್ರೋ ಲುಕ್‌ನಲ್ಲಿದ್ದ ಗಾಯಕ ಚಂದನ್ ಶೆಟ್ಟಿ ಫೋಟೊ ಒಂದು ವೈರಲ್ ಆಗುತ್ತಿತ್ತು. ಅದನ್ನು ಪೋಸ್ಟ್ ಮಾರ್ಟಮ್ ಮಾಡಿ ನೋಡಿದಾಗ, ಚಂದನ್ ಶೆಟ್ಟಿ ನಟನೆಗೆ ಇಳಿಯುತ್ತಿದ್ದಾರೆ ಅನ್ನುವುದು ಗೊತ್ತಾಗಿತ್ತು. ಮೊದಲ ಸಿನಿಮಾದಲ್ಲಿಯೇ ಬೆಲ್ ಬಾಟಂ ಪ್ಯಾಂಟ್ ತೊಟ್ಟು ನಿಂತಿದ್ದ ಚಂದನ್ ಶೆಟ್ಟಿ ನೋಡಿ ಸಿನಿಮಾ ಮಂದಿಗೆ ಏನ್ ಲುಕ್ ಗುರು ಇದು ಅಂತ ಕೇಳುತ್ತಲೇ ಇದ್ದರು ಅದಕ್ಕೆ ಚಂದನ್ 'ಎಲ್ರ ಕಾಲೆಳೆಯತ್ತೆ ಕಾಲ' ಅಂತ ಉತ್ತರ ಕೊಟ್ಟಿದ್ದಾರೆ.

Recommended Video

ಗಡ್ಡ ತೆಗೆಸಿ ದಪ್ಪ ಮೀಸೆ ಬಿಟ್ಟು ಕಾಲೇಜ್ ಸೇರಿಕೊಂಡ ಚಂದನ್ ಶೆಟ್ಟಿ

ಮ್ಯೂಸಿಕ್ ಮಾಡಿಕೊಂಡಿದ್ದ ಚಂದನ್ ಶೆಟ್ಟಿ ಆಗಾಗ ಆಲ್ಬಮ್ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ ಹಾಡಿನಲ್ಲಿ ಚಂದನ್ ಕೂಡ ಹೆಜ್ಜೆ ಹಾಕಿದ್ದರು. ಆ ಹಾಡು ರಿಲೀಸ್ ಆಗುತ್ತಿದ್ದಂತೆ ಸಿನಿಮಾಗೆ ಎಂಟ್ರಿಕೊಟ್ಟಿದ್ದಾರೆ. ಸುಜಯ್ ಶಾಸ್ತ್ರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ' ಎಲ್ರ ಕಾಲೆಳೆಯತ್ತೆ ಕಾಲ' ಚಿತ್ರದ ಬಗ್ಗೆ ಚಂದನ್ ಶೆಟ್ಟಿ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

 ನಟನೆಗಿಳಿದ ಚಂದನ್ ಶೆಟ್ಟಿ

ನಟನೆಗಿಳಿದ ಚಂದನ್ ಶೆಟ್ಟಿ

"ಇಷ್ಟು ದಿನ ಸಂಗೀತ ನಿರ್ದೇಶಕನಾಗಿ, ರಾಪರ್ ಆಗಿ ನಿಮ್ಮ ಮುಂದೆ ಬರ್ತಾ ಇದ್ದೆ. ಪಾರ್ಟಿ ಹಾಡುಗಳನ್ನಾಗಿರಬಹುದು, ಸಿನಿಮಾ ಹಾಡುಗಳನ್ನಾಗಿರಬಹುದು, ಹುಡುಕಿಕೊಂಡು ತರುತ್ತಿದೆ. ಈಗ ಹೊಸ ಸಾಗರಕ್ಕೆ ಧುಮುಕುತ್ತಿದ್ದೇನೆ. ಸಿನಿಮಾ ಅನ್ನುವ ಮಹಾಸಾಗರ. " ಕಥೆ ಬಗ್ಗೆ ಹೇಳುವುದಾದರೆ, ಈಗ ಪ್ರಾರಂಭ ಆಗುತ್ತೆ. ಹಾಗೇ ಎಂಡ್ ಆಗುತ್ತೆ. ನಾನೊಬ್ಬ ಕಾಲೇಜ್ ಲೆಕ್ಚರರ್ ಪಾತ್ರ ಮಾಡುತ್ತಿದ್ದೇನೆ. ವಿಜಯ್ ಅಂತ ನನ್ನ ಪಾತ್ರದ ಹೆಸರು. ಸದ್ಯಕ್ಕೆ ಇಷ್ಟು ಮಾತ್ರ ಹೇಳಬಲ್ಲೆ. ಜಾಸ್ತಿ ಮಾತಾಡಿದರೆ, ನಮ್ಮ ನಿರ್ದೇಶಕರು ಕೋಪ ಮಾಡಿಕೊಳ್ಳುತ್ತಾರೆ." ಅಂತ ಕಥೆ ಸೀಕ್ರೆಟ್ ಉಳಿಸಿಕೊಂಡಿದ್ದಾರೆ ಚಂದನ್.

 ಸದ್ಯಕ್ಕೀಗ LKGಗೆ ಸೇರಿಕೊಂಡಿದ್ದೇನೆ

ಸದ್ಯಕ್ಕೀಗ LKGಗೆ ಸೇರಿಕೊಂಡಿದ್ದೇನೆ

"ನಮ್ಮ ಸುಜಯ್ ಶಾಸ್ತ್ರಿ ಅದ್ಭುತವಾದ ಕಲಾವಿದ. ನಮ್ಮ ಸಿನಿಮಾದ ನಿರ್ದೇಶಕರು. ಅವರ ಪ್ರತಿಭೆಯನ್ನು ನೀವು ಯಾರೂ ಪೂರ್ತಿಯಾಗಿ ನೋಡಿಲ್ಲ. ಅಲ್ಲಲ್ಲಿ ತೋರಿಸುತ್ತಿರುತ್ತಾರೆ. ನಟನೆ ಮಾಡುವುದುನ್ನು ತುಂಬಾ ಚೆನ್ನಾಗಿ ನನಗೆ ಹೇಳಿಕೊಟ್ಟಿದ್ದಾರೆ. ಸಂಗೀತ ಲೋಕದಲ್ಲಿ ಇದ್ದವನನ್ನು ನಟನಾಲೋಕಕ್ಕೆ ಕರೆದುಕೊಂಡು ಬರಲು ತುಂಬಾ ಚೆನ್ನಾಗಿ ಗೈಡ್ ಮಾಡಿದ್ದಾರೆ. ಈಗ ತಾನೇ ಎಲ್‌ಕೆಜಿಗೆ ಅಡ್ಮಿಷನ್ ತೆಗೆದುಕೊಂಡಿದ್ದಾರೆ. ಸಿನಿಮಾ ಮುಗಿಯುವಷ್ಟರಲ್ಲಿ ಎಷ್ಟನೇ ಕ್ಲಾಸಿನಲ್ಲಿ ಇರುತ್ತೇನೆ ಎಂದು ನೀವು ಹೇಳಬೇಕು." ಎಂದು ತಮಾಷೆಯಾಗಿ ಸಿನಿಮಾ ಬಗ್ಗೆ ಮಾತಾಡಿದ್ದಾರೆ ಚಂದನ್.

 ಒಂದು ಹಾಡಿಗೆ ಚಂದನ್ ಮ್ಯೂಸಿಕ್

ಒಂದು ಹಾಡಿಗೆ ಚಂದನ್ ಮ್ಯೂಸಿಕ್

ಚಂದನ್ ಶೆಟ್ಟಿ ಮೊದಲ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರಷ್ಟೆ. ಆದರೆ, ಸಂಗೀತದ ಜವಾಬ್ದಾರಿಯನ್ನು ಮಾತ್ರ ಚಂದನ್‌ಗೆ ನೀಡಿಲ್ಲ. ಆದರೂ ಒಂದು ಹಾಡನ್ನು ಕಂಪೋಸ್ ಮಾಡಿದ್ದಾರಂತೆ. " ಕೆಲವರು ಕೇಳಿದರು ನಿಮ್ಮ ಸಿನಿಮಾಗೆ ನೀವೇ ಮ್ಯೂಸಿಕ್ ಮಾಡಬಹುದಲ್ಲಾ ಅಂತ. ಬೇಡಾ ಡೈರೆಕ್ಟರ್ ಯಾವ ರೀತಿ ಆಯ್ಕೆ ಮಾಡಿದ್ದಾರೋ ಅದೇ ನಿರ್ಧಾರ ಫೈನಲ್. ಆದರೆ, ಈ ಸಿನಿಮಾದಲ್ಲಿ ಹಾಡು ಚೆನ್ನಾಗಿ ಮೂಡಿ ಬಂದಿದೆ. ನಾನೂ ಒಂದು ಹಾಡು ಮಾಡಿದ್ದೇನೆ." ಎನ್ನುತ್ತಾರೆ ಚಂದನ್ ಶೆಟ್ಟಿ

ಬಿಗ್ ಬಾಸ್ ವಿಷ್ಯ ಯಾಕೆ ಬೇಕು ಅಂತಿದ್ದೆ

"ಯಾರನ್ನು ಆಯ್ಕೆ ಮಾಡಬೇಕು ಅಂತಿದ್ದೀರಾ ಅಂತ ಹೇಳಿದ್ದರು. ಆಗ ಚಂದನ್ ಶೆಟ್ಟಿ ಹೆಸರು ಬಂದಿತ್ತು. ಬಿಗ್‌ಬಾಸ್ ವಿನ್ನರ್ ಬೇರೆ ನಮಗೆ ಯಾಕೆ ಬೇಕು ಅಂತ ನನ್ನಷ್ಟಕ್ಕೆ ನಾನಿದ್ದೆ. ಸ್ನೇಹಿತರು ಹೇಳಿದಾಗ, ಚಂದನ್‌ಗೆ ಕಥೆ ಹೇಳಿದ್ದೆ. ಆಗ ಅವರು ಸಿನಿಮಾ ಮಾಡೋಣ ಅಂದರು. ನಿರ್ಮಾಪಕರಿಗೆ ಹೇಳಿದೆ. ಅವರು ಓಕೆ ಅಂದರು. ಮಧ್ಯದಲ್ಲಿ ನಂದೇನಿದೆ ಅಂತ ನಾನು ಓಕೆ ಅಂದೆ." ಅಂತ ಚಂದನ್ ಶೆಟ್ಟಿ ಆಯ್ಕೆ ಬಗ್ಗೆ ನಿರ್ದೇಶಕ ಸುಜಯ್ ಶಾಸ್ತ್ರಿ ಹೇಳುತ್ತಾರೆ.

More from Filmibeat

English summary
After Laka Laka Lamborgini album song with Rachita Ram, Chandan Shetty steped into acting. Kannada Rapper Chandan Shetty first movie elra kaleleyutte kaala started he is playing college lecturer role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X