Breaking:ಕನ್ನಡದ ಕುಳ್ಳ ಹಿರಿಯ ಕಲಾವಿದ, ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿನ ನಟ- ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ದ್ವಾರಕೀಶ್ ಬಳಲುತ್ತಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕನ್ನಡದಲ್ಲಿ ನಾಲ್ಕೈದು ದಶಕಗಳ ಕಾಲ ಕನ್ನಡ ಚಿತ್ರರಂಗದ ಸೇವೆ ಮಾಡಿದ್ದಾರೆ. ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ದ್ವಾರಕೀಶ್ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು.

ಕಳೆದ ಕೆಲವು ದಿನಗಳ ಹಿಂದೆ ದ್ವಾರಕೀಶ್ ನಿಧನ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಈ ವೇಳೆ ದ್ವಾರಕೀಶ್ ಅವರೇ ವಿಡಿಯೋ ಮಾಡುವ ಮೂಲಕ ಆರೋಗ್ಯವಾಗಿ ಇರುವುದಾಗಿ ತಮ್ಮ ಅಭಿಮಾನಿಗಳಿಗೆ ಹೇಳಿಕೊಂಡಿದ್ದರು. ಆದರೆ, ಇಂದು (ಏಪ್ರಿಲ್ 16) ದ್ವಾರಕೀಶ್ ನಿಧನರಾಗಿರುವ ಸುದ್ದಿಯನ್ನು ಕುಟುಂಬ ಮೂಲಗಳೇ ಸ್ಪಷ್ಪ ಪಡಿಸಿವೆ.

Kannada Senior actor director producer Dwarakish died

ನಿನ್ನೆ ರಾತ್ರಿ (ಏಪ್ರಿಲ್ 15) ದ್ವಾರಕೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಸಣ್ಣ ಪ್ರಮಾಣದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ರಾತ್ರಿಯಿಡಿ ನಿದ್ದೇ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದು ಸ್ವಲ್ಪ ಹೊತ್ತು ನಿದ್ದೆ ಮಾಡುತ್ತೇನೆ ಎಂದು ಮಲಗಿದ್ದರು. ಆ ವೇಳೆ ಹಾರ್ಟ್ ಅಟ್ಯಾಕ್ ಆಗಿದ್ದಾಗಿ ದ್ವಾರಕೀಶ್ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಾಧ್ಯತೆಗಳು ಕೂಡ ಇರಲಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ದ್ವಾರಕೀಶ್ ಕಳೆದ ಕೆಲವರು ವರ್ಷಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಹೊರಗಡೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಫಿಲ್ಮ್ ಚೇಂಬರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು ಬಿಟ್ಟರೆ, ಸಿನಿಮಾ ಕಾರ್ಯಕ್ರಮಗಳಿಗೆ ಬರುತ್ತಿರಲಿಲ್ಲ.

ದ್ವಾರಕೀಶ್ ಅವರು 1942, ಆಗಸ್ಟ್ 19ರಂದು ಮೈಸೂರಿನಲ್ಲಿ ಜನಿಸಿದ್ದರು. ಶಾರದಾ ವಿಲಾಸ್ ಮತ್ತು ಬಾನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದರು. ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಶಿಕ್ಷಣ ಪಡೆದಿದ್ದರು. ಆರಂಭದಲ್ಲಿ ದ್ವಾರಕೀಶ್‌ ಅವರು ಆಟೋಮೊಬೈಲ್ ಪಾರ್ಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ಮೈಸೂರಿನಲ್ಲಿ 'ಭಾರತ್ ಆಟೋ ಸ್ಪೇರ್' ಅನ್ನುವ ಅಂಗಡಿ ಇಟ್ಟಿದ್ದರು.

ಕನ್ನಡ ಚಿತ್ರರಂಗದ ದಿವಂಗತ ಲೆಜೆಂಡ್ ಹುಣಸೂರು ಕೃಷ್ಣಮೂರ್ತಿಯವರ ಸಂಬಂಧಿಯಾಗಿದ್ದರು. ಇವರು 1963ರಲ್ಲಿ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಕೊಟ್ಟಿದ್ದರು. ಹೀಗಾಗು ಬ್ಯುಸಿನೆಸ್‌ಗೆ ಗುಡ್‌ ಬೈ ಹೇಳಿ ಸಿನಿಮಾ ಕಡೆಗೆ ವಾಲಿಕೊಂಡರು. ನಟನೆಯಿಂದ ಆರಂಭ ಆದ ಇವರ ಜರ್ನಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.

ದ್ವಾರಕೀಶ್ ಚಿತ್ರ ಅನ್ನುವ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿ ಅದರಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಇವರು ನಿರ್ಮಾಣ ಮಾಡಿದ ಸಿನಿಮಾಗಳು ಮೆಗಾ ಹಿಟ್ ಕಂಡಿವೆ. ಹಾಗೇ ದೊಡ್ಡ ಸೋಲನ್ನು ಕಂಡಿದೆ. ಕನ್ನಡ ಸಿನಿಮಾಗಳಲ್ಲಿ ಪ್ರಯೋಗಗಳನ್ನು ಮಾಡಿದವರು. ವಿದೇಶದಲ್ಲಿ ಚಿತ್ರೀಕರಣ ಮಾಡಿದ ನಿರ್ಮಾಪಕರಲ್ಲಿ ದ್ವಾರಕೀಶ್ ಮಾಡಿದ್ದರು.

More from Filmibeat

English summary
Kannada Senior actor director producer Dwarakish died
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X