ಕನಸಿನ ರಾಣಿ ಮಾಲಾಶ್ರೀ ಪುತ್ರನನ್ನ ನೋಡಿದ್ದೀರಾ? ಸಿನಿಮಾಗೆ ಎಂಟ್ರಿ ಕೊಡೋದು ಗ್ಯಾರಂಟಿ?
ಸಿನಿಮಾ ತಾರೆಯರಿಗೆ ತಮ್ಮ ಮಕ್ಕಳೂ ಸಿನಿಮಾದಲ್ಲಿ ಸ್ಟಾರ್‌ಗಳಾಗಬೇಕು ಅನ್ನೋ ಹಂಬಲ ಇರುತ್ತೆ. ತಮ್ಮಂತೆಯೇ ಮಕ್ಕಳನ್ನು ಚಿತ್ರರಂಗದಲ್ಲಿ ಸಕ್ಸಸ್‌ಫುಲ್ ಆಗಬೇಕು ಅಂತ ಬಯಸುತ್ತಾರೆ. ಅದಕ್ಕಾಗಿ ಒಂದು ತಯಾರಿ ಮಾಡಿಸಿ, ಬಳಿಕ ಚಿತ್ರರಂಗಕ್ಕೆ ಕರೆದುಕೊಂಡು ಬರುತ್ತಾರೆ. ಅದೇ ಹಾದಿಯಲ್ಲಿ ಕನಸಿನ ರಾಣಿ ಮಾಲಾಶ್ರೀ ಕೂಡ ಸಾಗುತ್ತಿದ್ದಾರೆ.
ಕೆಲವು ತಿಂಗಳ ಹಿಂದೆಷ್ಟೇ ಮಾಲಾಶ್ರೀ ಪುತ್ರಿ ಆರಾಧನಾ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಅಮ್ಮನಂತ ಆರಾಧನಾ ರಾಮ್‌ಗೂ ಮೊದಲ ಸಿನಿಮಾದಲ್ಲಿ ಗ್ರ್ಯಾಂಡ್ ಸಕ್ಸಸ್ ಸಿಕ್ಕಿತ್ತು. ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತಹ ಸೂಪರ್‌ಸ್ಟಾರ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಪಕ್ಕ ಹಳ್ಳಿ ಹುಡುಗಿಯಾಗಿ 'ಕಾಟೇರ' ಸಿನಿಮಾ ನಟಿಸಿ ಕನ್ನಡಿಗರು ಮನೆಗೆದ್ದಿದ್ದರು.

ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಪುತ್ರಿಯೇನೋ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಹಾಗಿದ್ಮೇಲೆ ಮಾಲಾಶ್ರೀ ಪುತ್ರ ಆರ್ಯನ್ ಎಂಟ್ರಿ ಯಾವಾಗ? ಈಗ ಮಾಲಾಶ್ರೀ ಪುತ್ರ ಆರ್ಯನ್ ಹೇಗಿದ್ದಾರೆ? ಸಿನಿಮಾಗೆ ತಯಾರಿ ಹೇಗಿದೆ? ಅನ್ನೋ ಪ್ರಶ್ನೆಗಳಿಗೆ ಇತ್ತೀಚೆಗಷ್ಟೇ ಹಿರಿಯ ನಟಿ ಹಂಚಿಕೊಂಡಿರುವ ಫೋಟೊಗಳು ಉತ್ತರ ಕೊಟ್ಟಿವೆ.
ಆರಂಭದಲ್ಲಿ ಕನ್ನಡಿಗರ ಪಾಲಿಗೆ ಕನಸಿನರಾಣಿಯಾಗಿದ್ದ ಮಾಲಾಶ್ರೀ ಮುಂದಿನ ದಿನಗಳಲ್ಲಿ ಆಕ್ಷನ್ ಕ್ವೀನ್ ಆಗಿಯೂ ಹೊರಹೊಮ್ಮಿದ್ದರು. ಲವ್ ಸ್ಟೋರಿ ಹಾಗೂ ಆಕ್ಷನ್ ಎರಡೂ ಸಿನಿಮಾಗಳಲ್ಲಿಯೂ ನಟಿಸಿ ಯಶಸ್ಸು ಗಳಿಸಿದ್ದರು. ಈಗ ಮಕ್ಕಳ ಸರದಿ. ಆರಾಧನಾಗೆ ಚಿತ್ರರಂಗದಲ್ಲಿ ಗ್ರ್ಯಾಂಡ್ ಎಂಟ್ರಿ ಸಿಕ್ಕಿದೆ. ಆದರೆ, ಅದಕ್ಕೂ ಮುನ್ನ ಆರಾಧನಾ ನಟನೆಯಲ್ಲಿ ಸಂಪೂರ್ಣ ತಯಾರಿ ಪಡೆದು ಬಳಿಕ ಚಿತ್ರರಂಗಕ್ಕೆ ಬಂದಿದ್ದರು.
ಈಗ ಅದೇ ಹಾದಿಯಲ್ಲಿ ಪುತ್ರ ಆರ್ಯನ್ ರಾಮು ಕೂಡ ಸಾಗುತ್ತಿದ್ದಾರೆ. ಹೀರೋ ಆಗುವುದಕ್ಕೆ ಬೇಕಿರೋ ಎಲ್ಲಾ ತಯಾರಿಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಸ್ವತ: ಮಾಲಾಶ್ರೀ ತಮ್ಮ ಪುತ್ರ ವರ್ಕ್‌ಔಟ್ ಮಾಡುತ್ತಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆರ್ಯನ್ ರಾಮು ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹೀರೊ ಆಗುವ ಎಲ್ಲಾ ಸಾಧ್ಯತೆಗಳನ್ನು ತೋರಿಸುತ್ತಿದೆ.
ಕನಸಿನರಾಣಿ ಮಾಲಾಶ್ರೀ ಪುತ್ರ ಆರ್ಯನ್ ಸಿನಿಮಾಗೆ ಬರುವುದಕ್ಕೆ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಜೊತೆಗೆ ಆರ್ಯನ್ ದೈಹಿಕವಾಗಿಯೂ ಕಸರತ್ತು ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆರ್ಯನ್ ವರ್ಕೌಟ್ ಹಾಗೂ ಬಾಕ್ಸಿಂಗ್ ವಿಡಿಯೋಗಳನ್ನು ಹಂಚಿಕೊಂಡಿದ್ದು, ಯಾವಾಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಬಹುದು ಎಂದು ಮಾಲಾಶ್ರೀ ಎದುರು ನೋಡುತ್ತಿದ್ದಾರೆ.
ಸ್ಟಾರ್ ಆಗುವುದಕ್ಕೆ ಬೇಕಾದ ಎಲ್ಲಾ ಲಕ್ಷಣಗಳು ಕೂಡ ಆರ್ಯನ್‌ಗೆ ಇದೆ. ಅಲ್ಲದೇ ಮಾಡಲಿಂಗ್ ಕ್ಷೇತ್ರಕ್ಕೆ ಬರಬಹುದಾದ ಎತ್ತರ, ತೂಕ ಮತ್ತು ಸೌಂದರ್ಯ ಎಲ್ಲವೂ ಇದೆ. ಹೀಗಾಗಿ ಮಾಲಾಶ್ರೀ ಅಭಿಮಾನಿಗಳು ಮಗನನ್ನು ನೋಡಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಮಾಲಾಶ್ರೀ ಪುತ್ರ ಆರ್ಯನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.


Click it and Unblock the Notifications











