3 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ 'ಕನ್ನಡ ಕೋಗಿಲೆ' ಗಾಯಕಿ ಅಖಿಲಾ ಪಜಿಮಣ್ಣು; ವಿಚ್ಛೇದನಕ್ಕೆ ಅರ್ಜಿ

ಇತ್ತೀಚೆಗೆ ಸೆಲೆಬ್ರಿಟಿಗಳು ವಿಚ್ಚೇದನ ತೆಗೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಪ್ರತಿ ದಿನ ಒಬ್ಬರಲ್ಲ ಒಬ್ಬರ ಡಿವೋರ್ಸ್ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಈಗ ಆ ಸಾಲಿಗೆ 'ಕನ್ನಡ ಕೋಗಿಲೆ' ರಿಯಾಲಿಟಿ ಶೋನ ಗಾಯಕಿ ಅಖಿಲಾ ಪಜಿಮಣ್ಣು ಕೂಡ ಸೇರಿಕೊಂಡಿದ್ದಾರೆ. ಅಖಿಲಾ ಪಜಿಮಣ್ಣು ತಮ್ಮ ಮಧುರ ಕಂಠದಿಂದ ಕನ್ನಡಿಗರ ಮನ ಗೆದಿದ್ದರು. 'ಕನ್ನಡ ಕೋಗಿಲೆ' ರಿಯಾಲಿಟಿ ಶೋನಲ್ಲಿ ಮೊದಲೆರಡು ಆವೃತ್ತಿಗಳಲ್ಲಿ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು. ಇವರು ಹಾಡಿದ ಹಾಡುಗಳಿಗೆ ಕನ್ನಡಿಗರು ಭೇಷ್ ಎಂದು ಮೆಚ್ಚಿಕೊಂಡಿದ್ದರು.

ಅಖಿಲಾ ಪಜಿಮಣ್ಣು ಈಗ ಅವರ ದಾಂಪತ್ಯ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಮೂರು ವರ್ಷಗಳ ಹಿಂದೆ ಈ ಗಾಯಕಿ ಸಾಪ್ಟ್‌ವೇರ್ ಇಂಜಿನಿಯರ್ ಧನಂಜಯ್ ಶರ್ಮಾ ಎಂಬುವವರೊಂದಿಗೆ ವಿವಾಹವಾಗಿದ್ದರು. ಆದ್ರೀಗ ಇವರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು, ಅಖಿಲಾ ವಿಚ್ಚೇದನಕ್ಕೆ ಮುಂದಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಗಾಯಕಿಯನ್ನು ಇಷ್ಟಪಡುವ ಕನ್ನಡಿಗರಿಗೆ ಶಾಕ್ ಕೊಟ್ಟಿದೆ.

Kannada singer Akhila Pajimannu is heading towards divorce with husband Dhananjay Sharma

ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರದ್ದೂ ಅರೇಂಜ್ಡ್‌ ಮ್ಯಾರೇಜ್. ಎರಡು ಕುಟುಂಬಗಳ ಸಮ್ಮುಖದಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಎಲ್ಲವೂ ಖುಷಿ ಖುಷಿಯಾಗಿಯೇ ಇದ್ದ ಇಬ್ಬರ ದಾಂಪತ್ಯದಲ್ಲಿ ಅಂತಹದ್ದೇನಾಯ್ತೋ ಗೊತ್ತಿಲ್ಲ. ಬೇರೆಯಾಗುವುದಕ್ಕೆ ಇಬ್ಬರೂ ನಿರ್ಧರಿಸಿದ್ದಾರೆ. ಸದ್ಯ ಗಾಯಕಿಯ ಅಭಿಮಾನಿಗಳಿಗೆ ಈ ಸುದ್ದಿ ಬೇಸರ ಮೂಡಿಸಿದೆ.

2022ರಲ್ಲಿ ಕನ್ನಡ ಕೋಗಿಲೆ ಗಾಯಕಿ ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರೂ ಗುರು ಹಿರಿಯರ ಆಸೆಯಂತೆಯೇ ವಿವಾಹವಾಗಿದ್ದರು. ಆದ್ರೀಗ ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್ ಪಡೆಯುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಈಗಾಗಲೇ ಪುತ್ತೂರು ನ್ಯಾಯಾಲಯದಲ್ಲಿ ಡಿವೋರ್ಸ್‌ಗೆ ಅರ್ಜಿಯನ್ನು ಸಲ್ಲಿಸಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ಜೂನ್ 12ರಂದು ಈ ಜೋಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಇನ್ನು ಪುತ್ತೂರಿನವರಾಗಿರುವ ಅಖಿಲಾ ಪಜಿಮಣ್ಣು ಗಾಯಕಿ ಜನಪ್ರಿಯರಾಗಿದ್ದರು. ಆಗಲೇ ಸಾಪ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಪತಿಯೊಂದಿಗೆ ಅಮೆರಿಕಗೆ ತೆರಳಿದಿದ್ದರು. ಯುಎಸ್‌ಎಗೆ ಹೋದ ಬಳಿಕವೂ ಸೋಶಿಯಲ್ ಮೀಡಿಯಾದ ಅಖಿಲಾ ಆಕ್ಟಿವ್ ಆಗಿದ್ದರು. ಪತಿಯೊಂದಿಗಿನ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ವಿಚ್ಚೇದನ ನೀಡುವ ನಿರ್ಧಾರಕ್ಕೆ ಬಂದ್ಮೇಲೆ ಸೋಶಿಯಲ್ ಮೀಡಿಯಾ ಖಾತೆಗಳಿಂದ ಫೋಟೊಗಳನ್ನು ತೆಗೆದು ಹಾಕಿದ್ದಾರೆ.

Kannada singer Akhila Pajimannu is heading towards divorce with husband Dhananjay Sharma

ಪರಸ್ಪರ ಒಪ್ಪಂದ ಮೂಲಕ ಅಖಿಲಾ ಹಾಗೂ ಧನಂಜಯ್ ಡಿವೋರ್ಸ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ (ಜೂನ್ 20) ನಡೆಯಲಿದೆ. ಇನ್ನು ಅಖಿಲಾ ಅವರ ಪತಿ ಧನಂಜಯ್ ಮೈಸೂರಿನ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದರು. ಆ ಬಳಿಕ ಮಾಸ್ಟರ್ ಡಿಗ್ರಿ ಮಾಡುವುದಕ್ಕೆ ಅಮೆರಿಕಗೆ ತೆರಳಿದ್ದರು. ಅಲ್ಲಿಯೇ ಉದ್ಯೋಗಕ್ಕೂ ಸೇರಿಕೊಂಡಿದ್ದರು ಎಂದು ವರದಿಗಳಾಗಿವೆ. ಹೀಗಾಗಿ ವಿವಾಹದ ಬಳಿಕ ಅಖಿಲಾ ಕೂಡ ಅಮೆರಿಕಗೆ ತೆರಳಿದ್ದರು.

ಇನ್ನು ಅಖಿಲಾ ಅವರ ಕಂಠಕ್ಕೆ ಕನ್ನಡಿಗರು ಫಿದಾ ಆಗಿದ್ದರು. ರಿಯಾಲಿಟಿ ಶೋಗಳಲ್ಲಿ ಇವರು ಹಾಡುತ್ತಿದ್ದ ಪರಿಗೆ ಸಂಗೀತ ತಜ್ಞರು ಕೂಡ ತಲೆದೂಗಿದ್ದರು. ಇವರು ಹಾಡುಗಳಲ್ಲಿ ಮಾಡುತ್ತಿದ್ದ ಪ್ರಯೋಗಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಇವರ ಹಾಡುಗಳು ಫೇಮಸ್ ಆಗಿದ್ದವು. ವಿಚ್ಚೇದನದ ಬಳಿಕ ಸಂಗೀತ ಕ್ಷೇತ್ರದಲ್ಲಿ ಮತ್ತೆ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ.

More from Filmibeat

English summary
Kannada singer Akhila Pajimannu is heading towards divorce with husband Dhananjay Sharma.
Read more about: singer divorce reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X