ಐರ್ಲ್ಯಾಂಡ್‌ನಲ್ಲಿ 'ಧುರಂಧರ್ 2' ವೀಕ್ಷಿಸಿದ ಥ್ರಿಲ್ಲರ್ ಮಂಜು; ಸಿನಿಮಾ ಬಗ್ಗೆ ಹೇಳಿದ್ದೇನು?

ಭಾರತೀಯ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿ 'ಧುರಂಧರ್ 2' ಮುನ್ನುಗ್ಗುತ್ತಿದೆ. ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್ ಮತ್ತೊಂದು ಸಿನಿಮಾ ಯಶಸ್ಸು ಕಂಡಿದೆ. ಮಾರ್ಚ್ 19ರಂದು ತೆರೆಕಂಡಿದ್ದ ಈ ಸಿನಿಮಾ ಭಾರತೀಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಜೋಡಿಯ ಸತತ ಎರಡನೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ.

ಈಗಾಗಲೇ 'ಧುರಂಧರ್ 2' ಬಗ್ಗೆ ಪರ ಹಾಗೂ ವಿರೋಧಗಳ ಚರ್ಚೆ ನಡೆಯುತ್ತಿದೆ. ಕೆಲವರಿಗೆ ಈ ಸಿನಿಮಾದಲ್ಲಿ ತೋರಿಸಲಾಗಿರುವ ಕೆಲವು ದೃಶ್ಯಗಳು ಇಷ್ಟ ಆಗಿಲ್ಲ. ಸತ್ಯಕ್ಕೆ ವಿರುದ್ಧವಾದ ದೃಶ್ಯಗಳನ್ನು ಬಿಂಬಿಸಲಾಗಿದೆ ಎನ್ನಲಾಗಿದೆ. ಇನ್ನು ಕೆಲವರಿಗೆ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅದರಲ್ಲೂ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಅವರಂತಹವರು ಈ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

Kannada Stunt Master Thriller Manju watched Dhurandhar 2 in Ireland

ಇನ್ನು ಕನ್ನಡಿಗರೂ ಕೂಡ 'ಧುರಂಧರ್ 2' ಸಿನಿಮಾ ಬಗ್ಗೆ ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕನ್ನಡದ ಜನಪ್ರಿಯ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಈ ಸಿನಿಮಾವನ್ನು ಐರ್ಲ್ಯಾಂಡ್‌ನಲ್ಲಿ ವೀಕ್ಷಣೆ ಮಾಡಿದ್ದಾರೆ. ಈ ಸಂಬಂಧ ಒಂದು ವಿಡಿಯೋವನ್ನು ಮಾಡಿದ್ದು, ಅದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಏನು ಹೇಳಿದ್ದಾರೆಂದು ನೋಡುವುದಾರೇ,

'ಧುರಂಧರ್ 2' ರಿಲೀಸ್ ಆದ ಒಂದು ವಾರದ ಬಳಿಕ ಕನ್ನಡದಲ್ಲಿಯೂ ರಿಲೀಸ್ ಆಗಿದೆ. ಕನ್ನಡಿಗರಿಂದ ಕನ್ನಡ ವರ್ಷನ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ಒಂದು ವಾರದಿಂದ ಸಿನಿಮಾದ ಕಲೆಕ್ಷನ್ ಮೂರು ಕೋಟಿ ಆಸು-ಪಾಸಿನಲ್ಲಿದೆ. ಸಾಮಾನ್ಯವಾಗಿ ಕನ್ನಡದಲ್ಲಿ ಡಬ್ ಆದ ಸಿನಿಮಾಗಳನ್ನು ಕನ್ನಡಿಗರೇ ನೋಡುವುದಿಲ್ಲ. ಆದರೆ, ಕನ್ನಡದಲ್ಲಿ ಡಬ್ ಆದ ಸಿನಿಮಾಗಳ ಪೈಕಿ ಉತ್ತಮ ಕಲೆಕ್ಷನ್ ಮಾಡಿರುವ ಕೆಲವೇ ಸಿನಿಮಾಗಳಲ್ಲಿ 'ಧುರಂಧರ್ 2' ಕೂಡ ಸೇರಿಕೊಂಡಿದೆ.

ಕನ್ನಡದ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸದ್ಯ ಐರ್ಲ್ಯಾಂಡ್‌ನಲ್ಲಿ ಇದ್ದಾರೆ. ಐರ್ಲ್ಯಾಂಡ್‌ನ ರಾಜಧಾನಿ ಡಬ್ಲಿನ್‌ನಲ್ಲಿ ಇತ್ತೀಚೆಗೆ ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನ 'ಧುರಂಧರ್ 2' ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡಿ ಥ್ರಿಲ್ ಆಗಿರೋ ಥ್ರಿಲ್ಲರ್ ಮಂಜು ಸೆಲ್ಫಿ ವಿಡಿಯೋ ಮಾಡಿ ಸಿನಿಮಾ ಬಗ್ಗೆ ಮೆಚ್ವುಗೆ ಸೂಚಿಸಿದ್ದಾರೆ. "ಐರ್ಲ್ಯಾಂಡ್‌ನ ಡಬ್ಲಿನ್ ಸಿಟಿಯಲ್ಲಿ ಧುರಂಧರ್ 2 ಸಿನಿಮಾವನ್ನು ಈಗಷ್ಟೇ ನೋಡಿಕೊಂಡು ಆಚೆ ಬರುತ್ತಿದ್ದೇನೆ. ಎಕ್ಸ್‌ಟ್ರಾಡಿನರಿ ಸಿನಿಮಾ. ಸೂಪರ್ ಸಿನಿಮಾ ಯಾರೂ ಮಿಸ್ ಮಾಡಬೇಡಿ. ಒಂದೊಳ್ಳೆ ಸಿನಿಮಾವನ್ನು ಕೊಟ್ಟಿದ್ದಾರೆ. ಪ್ರತಿಯೊಬ್ಬ ಭಾರತೀಯರೂ ನೋಡಲೇಬೇಕಾದ ಸಿನಿಮಾ.

ಥ್ರಿಲ್ಲರ್ ಮಂಜು ವಿಡಿಯೋ ಹಾಕುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. "ಲಿಫಿ ವ್ಯಾಲಿ ಶಾಪಿಂಗ್ ಸೆಂಟರ್. ತುಂಬಾ ಸಂತೋಷ ನೀವು ಐರ್ಲ್ಯಾಂಡ್‌ನಲ್ಲಿ ಇರೋದು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡುತ್ತಿದ್ದಾರೆ. " ಇತ್ತೀಚೆಗೆ ನಿಮ್ಮ ಸಿನಿಮಾಗಳನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಅಣ್ಣ ನಮ್ಮ ಕರ್ನಾಟಕದಲ್ಲಿಯೇ ಸಿನಿಮಾ ರಿಲೀಸ್ ಆಗಿದೆ. ಅಷ್ಟು ದೂರ ಹೋಗಿ ಯಾಕೆ ಸಿನಿಮಾ ನೋಡಿದ್ದೀರಾ?" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಥ್ರಿಲ್ಲರ್‌ಗೆ ಥ್ರಿಲ್ಲರ್ ಸಾಟಿ" ಎಂದು ಹೇಳಿದ್ದಾರೆ.

'ಧುರಂಧರ್ 2' ಭಾರತದ ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡಿದೆ. 11 ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 846 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ (sacnilk) ವರದಿ ಮಾಡಿದೆ. ಈ ಹಿಂದೆ ಬಾಕ್ಸಾಫೀಸ್‌ನಲ್ಲಿದ್ದ ದಾಖಲೆಗಳನ್ನು ಒಂದೊಂದಾಗಿಯೇ ಅಳಿಸಿ ಹಾಕುತ್ತಾ ಮುನ್ನುಗ್ಗುತ್ತಿದೆ. ಒಟ್ಬಲ್ಲಿ ಕನ್ನಡದ ಹಿರಿಯ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜುಗೂ 'ಧುರಂಧರ್ 2' ಇಷ್ಟ ಆಗಿದೆ.

English summary
Kannada Stunt Master Thriller Manju watched Dhurandhar 2 in Ireland.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X