ಗಣೇಶ ಚತುರ್ಥಿಗೆ ಯಾವ್ಯಾವ ಸಿನಿಮಾ ರಿಲೀಸ್‌? ಕನ್ನಡ, ತೆಲುಗು, ತಮಿಳಿನಲ್ಲೇ ಹೇಗಿದೆ ಕ್ರೇಜ್?

ಇತ್ತೀಚೆಗೆ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಬರುವವರೇ ಕಮ್ಮಿಯಾಗಿದ್ದಾರೆ. ಸಿಂಗಲ್ ಸ್ಕ್ರೀನ್‌ಗಳಂತೂ ಒಂದುವಾರಕ್ಕಷ್ಟೇ ಸೀಮಿತವಾಗಿದೆ ಅನ್ನೋದು ಸಿನಿಮಾ ಮಂದಿಯ ಅಳಲು. ಆದರೆ, ಆಗಸ್ಟ್ ತಿಂಗಳು ಕನ್ನಡ ಚಿತ್ರರಂಗಕ್ಕಂತೂ ಪಾಸಿಟಿವ್ ಅಂತ ಸಾಬೀತಾಗಿದೆ. ಇದೇ ಖುಷಿಯಲ್ಲಿ ಗಣೇಶ್ ಚತುರ್ಥಿಗೆ ಪ್ರೇಕ್ಷಕರಿಗೆ ಮನರಂಜನೆ ನೀಡುವುದಕ್ಕೆ ನಿರ್ಧರಿಸಿದ್ದಾರೆ.

ಗಣೇಶ ಚತುರ್ಥಿಯಲ್ಲಿ ಜನರು ಎಂಜಾಯ್ ಮಾಡುತ್ತಾರೆ. ರಿಲ್ಯಾಕ್ಸ್ ಆಗಿ ಹಬ್ಬ ಮಾಡಿ, ಫ್ಯಾಮಿಲಿ ಜೊತೆ ಸಿನಿಮಾ ನೋಡುವುದಕ್ಕೆ ಹೋಗುವುದು ಕೆಲವರಿಗೆ ಅಭ್ಯಾಸ. ಹೀಗಾಗಿ ಈ ಸಂದರ್ಭದಲ್ಲಿ ಸಿನಿಮಾ ಮಂದಿ ಹಬ್ಬವನ್ನು ಬಳಸಿಕೊಳ್ಳುತ್ತಾರೆ. ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ನಾಲ್ಕೈದು ತಿಂಗಳ ಮುಂದೇನೆ ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ.

Kannada Telugu Tamil Malayalam Movies list releasing on Ganesha festival

ಈ ಬಾರಿ ಕೂಡ ಗಣೇಶ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ, ಅದ್ಯಾಕೋ ಪೈಪೋಟಿಗೆ ಬಿದ್ದು ಸಿನಿಮಾ ರಿಲೀಸ್ ಮಾಡುವುದಕ್ಕೆ ಹೋಗಿಲ್ಲ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಲಿಮಿಟೆಡ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಸಿನಿಮಾಗಳ ಪಟ್ಟಿ ಇಲ್ಲಿದೆ.

ಇಬ್ಬನಿ ತಬ್ಬಿದ ಇಳೆಯಲಿ

ರಕ್ಷಿತ್ ಶೆಟ್ಟಿ ನಿರ್ಮಿಸಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಇದೇ ಸೆಪ್ಟೆಂಬರ್ 5ರಂದು ಬಿಡುಗಡೆಯಾಗುತ್ತಿದೆ. ಇದೊಂದು ಮ್ಯೂಸಿಕಲ್ ರೊಮ್ಯಾಂಟಿಕ್ ಸಿನಿಮಾ. ವಿಹಾನ್, ಅಂಕಿತಾ ಅಮರ್ ಹಾಗೂ ಮಯೂರಿ ನಟರಾಜನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಗಣೇಶ ಹಬ್ಬಕ್ಕೆ ಕುಟುಂಬ ಸಮೇತ ಸಿನಿಮಾ ನೋಡುವುದಕ್ಕೆ ಇದೊಂದು ಒಳ್ಳೆಯ ಸಿನಿಮಾ ಆಗಬಹುದು.

Kannada Telugu Tamil Malayalam Movies list releasing on Ganesha festival

ದಳಪತಿ ವಿಜಯ್ ಗೋಟ್

ದಕ್ಷಿಣ ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಗೋಟ್ (The Greatest Of All Time). ದಳಪತಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ. ಆಕ್ಷನ್ ಪ್ರಿಯರಿಗೆ ಈ ಸಿನಿಮಾ ಇಷ್ಟ ಆಗಬಹುದು. ಗಣೇಶ ಚತುರ್ಥಿಗೆ ಮಾಸ್ ಸಿನಿಮಾ ಬೇಕು ಅನ್ನೋರಿಗೆ ಗೋಟ್ (GOAT) ಸಖತ್ ಕಿಕ್ ಕೊಡಬಹುದು. ವೆಂಕಟ್ ಪ್ರಭು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿಜಯ್ ಜೊತೆ ಪ್ರಶಾಂತ್, ಪ್ರಭುದೇವ ಸೇರಿದಂತೆ ಸ್ನೇಹಾ, ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

35 ಚಿನ್ನ ಕಥಾ ಕಾದು

ತೆಲುಗಿನಲ್ಲಿ ಗಣೇಶ ಚತುರ್ಥಿಗೆ ಸೂಪರ್‌ಸ್ಟಾರ್‌ ಸಿನಿಮಾಗಳೇನು ರಿಲೀಸ್ ಆಗುತ್ತಿಲ್ಲ. '35 ಚಿನ್ನ ಕಥಾ ಕಾದು' ಅನ್ನುವ ಸಿನಿಮಾ ರಿಲೀಸ್ ಆಗುತ್ತಿದೆ. ಯುವ ಪ್ರತಿಭೆ ನಂದ ಕಿಶೋರ್ ಇಮಾನಿ ನಿರ್ದೇಶನ ಮಾಡುತ್ತಿದ್ದಾರೆ. ನಿವೇತಾ ಥಾಮಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಪ್ರಿಯದರ್ಶಿನಿ ಹಾಗೂ ವಿಶ್ವದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಉರುಕು ಪಟೇಲ

ಉರುಕು ಪಟೇಲ ತೆಲುಗಿನ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ. ಸೆಪ್ಟೆಂಬರ್ 6ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ. ತೇಜಸ್ ಕಂಚೇರ್ಲಾ ಹಾಗೂ ಖುಷ್ಬೂ ಚೌಧರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ವಿವೇಕ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ.

ಜನಕ ಆಯಿತೆ ಗನಕ

ಸುಹಾಸ್, ಸಂಗೀರ್ತನಾ, ವೆನ್ನೆಲಾ ಕಿಶೋರ್, ರಾಜೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಜನಕ ಆಯಿತೆ ಗನಕ. ಈ ಸಿನಿಮಾಗೆ ಸಂದೀಪ್ ಬಂಡ್ಲಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೆಪ್ಟೆಂಬರ್ 7ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಮಧ್ಯಮ ವರ್ಗದ ಯುವಕನಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಆದರೆ ಅವನ ಪರಿಸ್ಥಿತಿ ಹೇಗಿರುತ್ತೆ? ಅನ್ನೋದೇ ಸಿನಿಮಾದ ಕಥೆ. ಗಣೇಶ ಹಬ್ಬಕ್ಕೆ ಫ್ಯಾಮಿಲಿ ಜೊತೆ ಕೂಡ ಸಿನಿಮಾ ನೋಡಲು ಇದೊಂದು ಉತ್ತಮ ಸಿನಿಮಾ ಆಗಬಹುದು.

More from Filmibeat

English summary
List of Movies releasing in Ganesha festival;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X