Kiran Raj: ಮೈಸೂರು ಹುಡುಗನ 'ಭರ್ಜರಿ ಗಂಡು' ಚಿತ್ರದ ಹಿಂದಿ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್
ಕಿರಣ್ ರಾಜ್ ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ. ಕಿರುತೆರೆಯಲ್ಲಿ ಜನಪ್ರಿಯರಾದರೆ, ಸಿನಿಮಾರಂಗಕ್ಕೆ ಕಾಲಿಡುವುದು ಬಲು ಸುಲಭ. ಸ್ಯಾಂಡಲ್‌ವುಡ್‌ನಲ್ಲಿ ಕಿರುತೆರೆಯಿಂದ ಬಂದವರಿಗೆ ಅದ್ಧೂರಿ ಸ್ವಾಗತವೇ ಸಿಕ್ಕಿದೆ. ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರಿಗೆ ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಕೆಲ ನಟ-ನಟಿಯರ ಅದೃಷ್ಟ ಖುಲಾಯಿಸಿ, ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಮೆರೆಯುತ್ತಿದ್ದಾರೆ. ಇವರ ಸಾಲಿಗೆ ಸೇರುವುದು ಕಿರಣ್ ರಾಜ್ ರೆಡಿಯಾಗಿದ್ದಾರೆ.
ಕಿರುತೆರೆಯಲ್ಲಿ ಮನೆ ಮಾತಾಗಿರುವ ನಟ ಕಿರಣ್ ರಾಜ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ 'ಭರ್ಜರಿ ಗಂಡು' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿದ್ದಾರೆ. ಹಲವು ದಿನಗಳಿಂದ ಕಿರಣ್ ರಾಜ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಈ ಸಿನಿಮಾ ಭರ್ಜರಿ ಗಂಡು ಸಿನಿಮಾ ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಭಾರಿ ಮೊತ್ತಕ್ಕೆ ಸೇಲ್ ಆಯ್ತಂತೆ 'ಭರ್ಜರಿ ಗಂಡು'
ಕಿರುತೆರೆ ವೀಕ್ಷಕರಿಗೆ ಕಿರಣ್ ರಾಜ್ ಪರಿಚಯ ಮಾಡಿ ಕೊಡಬೇಕಿಲ್ಲ. ಆದರೀಗ ಕಿರಣ್ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಮೊದಲ ಪ್ರಯತ್ನದಲ್ಲೇ 'ಭರ್ಜರಿ ಗಂಡು' ಅವತಾರವೆತ್ತಿ ಥಿಯೇಟರ್‌ಗೆ ಎಂಟ್ರಿಕೊಡಲಿದ್ದಾರೆ. ಕಿರಣ್ ರಾಜ್ ಈ ಸಿನಿಮಾಗಾಗಿ ಬಹಳ ಶ್ರಮಪಟ್ಟಿದ್ದು, ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಅಬ್ಬರಿಸಲಿದ್ದಾರೆ.
ಕಿರಣ್ ರಾಜ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಭರ್ಜರಿ ಗಂಡು ಕಿರಣ್ ರಾಜ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾ. 'ಬಡ್ಡೀಸ್', 'ಭರ್ಜರಿ ಗಂಡು' ಅಂತಹ ಸಿನಿಮಾಗಳು ಸಿದ್ದವಾಗಿದ್ದು, ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಸದ್ಯ 'ಭರ್ಜರಿ ಗಂಡು' ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರು ಇಷ್ಟ ಪಟ್ಟಿದ್ದಾರೆ. ಇದೇ ಜೋಷ್‌ನಲ್ಲಿ ಈ ಸಿನಿಮಾದ ಹಿಂದಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆಯಂತೆ.

ಮೊತ್ತ ರಿವೀಲ್ ಮಾಡಿಲ್ಲ ಚಿತ್ರತಂಡ
ಅಂದ್ಹಾಗೆ ಕಿರಣ್ ರಾಜ್ ನಾಯಕನಾಗಿ ನಟಿಸಿರುವ 'ಭರ್ಜರಿ ಗಂಡು' ಸಿನಿಮಾದ ಹಿಂದಿ ರೈಟ್ಸ್ ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ ಅನ್ನುವುದು ಇನ್ನೋದನ್ನು ಚಿತ್ರರಂಗ ರಿವೀಲ್ ಮಾಡಿಲ್ಲ. ಆದರೆ, ಬಿಡುಗಡೆಗೂ ಮುನ್ನ ಅಧಿಕ ಮೊತ್ತಕ್ಕೆ ರಿಲೀಸ್ ಆಗಿದೆ ಎಂದು ಹೇಳಿಕೊಂಡಿದೆ.
ಸದ್ಯ ಗುರುತೇಜ್ ಶೆಟ್ಟಿ ನಿರ್ದೇಶನದ 'ಬಡ್ಡಿಸ್' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ವಿಭಿನ್ನ ಪೋಸ್ಟರ್‌ನಿಂದಲೇ ಸಿನಿಪ್ರಿಯರ ಮನ ಗೆದ್ದಿದೆ. ಇದೇ ಜೋಷ್‌ನಲ್ಲಿ ಕಿರಣ್ ರಾಜ್ ಸಾಕಷ್ಟು ಸಿನಿಮಾಗಳಿಗೂ ಸಹಿ ಮಾಡಿದ್ದಾರಂತೆ.
Recommended Video

ನಟನೆ ಜೊತೆ ಜೊತೆಗೇ ಕಿರಣ್ ರಾಜ್ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಕಿರಣ್ ರಾಜ್ ಅಸಹಾಯಕರಿಗೆ ಸಹಾಯ ಹಸ್ತ ಚಾಚಿದ್ದರು. ಸಮಾಜದಿಂದ ದೂರ ಉಳಿದಿರುವ ತೃತೀಯ ಲಿಂಗಿಗಳಿಗೂ ನೆರವಾಗಿದ್ದರು.


Click it and Unblock the Notifications











