ಮಲಯಾಳಂ 'ಲೋಕಾ' ಸಿನಿಮಾದಲ್ಲಿ ಬೆಂಗಳೂರು ಹುಡುಗಿಯರಿಗೆ 'ಡಗಾರ್' ಎಂದಿದ್ದಾರೆಯೇ? ಕೆರಳಿದ ಕನ್ನಡಿಗರು

ಮಲಯಾಳಂ ಸಿನಿಮಾಗಳು ದೇಶಾದ್ಯಂತ ಸದ್ದು ಮಾಡುತ್ತಿವೆ. ಇತ್ತೀಚೆಗಿನ ದಿನಗಳಲ್ಲಿ ಇಲ್ಲಿ ನಿರ್ಮಾಣ ಆಗುವ ಸಿನಿಮಾಗಳು ಕೂಡ ಅಷ್ಟೇ ಕಂಟೆಂಟ್ ಮೇಲೆ ಹೆಚ್ಚು ಕೆಲಸ ಮಾಡುವುದು ಎದ್ದು ಕಾಣುತ್ತಿದೆ. ಈಗಂತೂ ಮಲಯಾಳಂ ಸಿನಿಮಾಗಳನ್ನು ಇಷ್ಟ ಪಡುವಂತಹ ಸಿನಿ ಪ್ರೇಮಿಗಳ ಬಳಗ ದೊಡ್ಡದಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮಲಯಾಳಂ ಸಿನಿಮಾಗಳಿಗೆ ಬೇಡಿಕೆ ಚೆನ್ನಾಗಿದೆ. ಇಂತಹ ಕ್ರೇಜ್ ಇರುವಾಗಲೇ 'ಲೋಕಾ' ಎನ್ನುವ ಮತ್ತೊಂದು ಮಲಯಾಳಂ ಸಿನಿಮಾ ರಿಲೀಸ್ ಆಗಿದೆ.

'ಲೋಕಾ' ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಎಲ್ಲಾ ಕಡೆಗಳಲ್ಲೂ ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ರೆಗ್ಯೂಲರ್ ಸಿನಿಮಾ ಅಲ್ಲ. ದುಲ್ಖರ್ ಸಲ್ಮಾನ್ ನಿರ್ಮಾಣ ಮಾಡಿರುವ ಈ ಸಿನಿಮಾ ಮಲಯಾಳಂ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುತ್ತಿದೆ. ಡೊಮಿನಿಕ್ ಅರುಣ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

Kannadigas Outraged Over Offensive Word Used for Bengaluru Girls in Malayalam Movie Lokah

ದುಲ್ಖರ್ ಸಲ್ಮಾನ್ ನಿರ್ದೇಶಿಸಿದ ಈ ಸಿನಿಮಾ ಹೆಚ್ಚು ಪಾಲು ಬೆಂಗಳೂರಿನಲ್ಲಿಯೇ ನಡೆಯುತ್ತೆ. ಹೀಗಾಗಿ ಈ ಸಿನಿಮಾದಲ್ಲಿ ಬೆಂಗಳೂರಿನ ರೆಫರೆನ್ಸ್ ಅನ್ನು ಕಾಣಬಹುದು. ಇನ್ನೂ 'ಲೋಕಾ' ಟೀಸರ್‌ನಲ್ಲಿ ಬೆಂಗಳೂರಿನ ಬಗ್ಗೆ ಉಲ್ಲೇಖಗಳಾಗಿವೆ. ಎಲ್ಲಾ ಕಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವಾಗಲೇ ಸಿನಿಮಾ ವಿವಾದಕ್ಕೆ ಸಿಕ್ಕಿಕೊಂಡಿದೆ. ಕನ್ನಡಿಗರ ಕಣ್ಣುಗಳನ್ನು ಕೆಂಪಾಗಿಸುವಂತೆ ಮಾಡಿದೆ.

ಮಲಯಾಳಂ ಸಿನಿಮಾ 'ಲೋಕಾ'ದಲ್ಲಿ ಬೆಂಗಳೂರು ಹಾಗೂ ಇಲ್ಲಿನ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ. ಕೆಲವು ದೃಶ್ಯಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಅಭಿಪ್ರಾಯಗಳು ವೈರಲ್ ಆಗಿದ್ದು, ಬಹಳಷ್ಟು ಮಂದಿ ಇದಕ್ಕೆ ಧ್ವನಿಗೂಡಿಸಿದ್ದಾರೆ.

'ಲೋಕಾ' ಸಿನಿಮಾದಲ್ಲಿ ಪೊಲೀಸ್ ಪಾತ್ರವೊಂದು ನೆಗೆಟಿವ್ ಶೇಡ್‌ನಲ್ಲಿ ನಟಿಸಿದ್ದಾರೆ. ಇದರಲ್ಲಿ ಬೆಂಗಳೂರಿನ ಹುಡುಗಿಯರನ್ನು 'ಡಗಾರ್‌ಗಳು' ಎಂದು ಕರೆಯುವ ಸೀನ್‌ಗಳಿವೆ. ಇದೇ ಸೀನ್‌ಗಳಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ದೃಶ್ಯದಲ್ಲಿ ಪೊಲೀಸ್ ಪಾತ್ರವು ತನ್ನ ತಾಯಿಯೊಂದಿಗೆ ಮಾತನಾಡುತ್ತಾ, "ನಾನು ಮದ್ವೆ ಆಗಲ್ಲ ಅಂತ ಹೇಳ್ತಿಲ್ಲ. ಆದರೆ, ಈ ಊರಿನ ಹುಡುಗಿಯರನ್ನ ಮದುವೆ ಆಗಲ್ಲ ಅಂತ ಹೇಳ್ತಿರೋದು. ಯಾಕಂದರೆ, ಈ ಊರಲ್ಲಿರೋ ಹುಡ್ಗೀರೆಲ್ಲ 'ಡಗಾರ್‌ಗಳು' ಎಂದು ಡೈಲಾಗ್ ಹೇಳಿಸಲಾಗಿದೆ. ಈ ಡೈಲಾಗ್ ಕೇಳಿದ ತಕ್ಷಣ ತಮಗೆ ತೀವ್ರ ಕೋಪ ಬಂದಿತೆಂದು ಕೆಲವರು ಸೋಶೀಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಿದ್ದಾರೆ.

ಇನ್ನು ಇತ್ತೀಚೆಗೆ ಇದೇ ಮಲಯಾಳಿಗಳು ಬಾಲಿವುಡ್ ಸಿನಿಮಾ 'ಪರಮ್ ಸುಂದರಿ'ಯಲ್ಲಿ ತಮ್ಮ ಸಂಸ್ಕೃತಿಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಆಕ್ಷೇಪ ಮಾಡಿದ್ದರು. ಇಷ್ಟೇ ಅಲ್ಲದೆ ರೀಲ್ಸ್‌ಗಳ ಮೂಲಕವೂ ಪ್ರತಿಭಟಿಸಿದ್ದರು. ಇನ್ನೊಬ್ಬರ ತಪ್ಪುಗಳನ್ನು ವಿರೋಧಿಸುವವರು ಏನು ಮಾಡುತ್ತಿದ್ದಾರೆ ಹಲವು ವರ್ಷಗಳಿಂದ ಬೆಂಗಳೂರಿನ ಕಥೆಗಳನ್ನು ಆಧರಿಸಿ ಚಿತ್ರಗಳನ್ನು ನಿರ್ಮಿಸುತ್ತಿದ್ದರೂ, ಇಲ್ಲಿನ ಜನ ಜೀವನವನ್ನು ಅರ್ಥಮಾಡಿಕೊಳ್ಳದಿರುವುದು ವಿಷಾದನೀಯ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೆ ಕೆಲವರು 'ಲೋಕಾ'ದಲ್ಲಿ ಬರುವ ಪಾತ್ರಗಳ ಬಗ್ಗೆನೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಬ್ಬಿಂಗ್ ಕೂಡ ಚೆನ್ನಾಗಿಲ್ಲ. ಈ ವರ್ಷನ್‌ನಲ್ಲಿ ಕನ್ನಡ ಪಾತ್ರಗಳು ಮಾತನಾಡುವ ಭಾಷೆ ಕೂಡ ಅಸಹ್ಯಕರವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತಮಿಳುನಾಡಿನ ಕಥೆಗಳಿಗೆ ತಮಿಳು ನಟರನ್ನು ಆಯ್ಕೆ ಮಾಡುವವರು, ಬೆಂಗಳೂರಿನ ಕಥೆಗಳಿಗೆ ಕನ್ನಡ ಗೊತ್ತಿರುವ ನಟರನ್ನು ಏಕೆ ಬಳಸುವುದಿಲ್ಲ ಎಂದೂ ಪ್ರಶ್ನೆ ಹಾಕಿದ್ದಾರೆ. ಇದರ ಜೊತೆಗೆ ಮಲಯಾಳಿಗೆ ಬೆಂಗಳೂರು ಎಂದರೆ ಕೋರಮಂಗಲ, ಎಚ್‌ಎಸ್‌ಆರ್, ವೈಟ್‌ಫೀಲ್ಡ್, ಪಾರ್ಟಿ, ಪಬ್ ಮತ್ತು ಗಾಂಜಾ ಸೇವೆಗೆ ಸೀಮಿತವಾಗಿದೆಯೇ ಎಂದು ಕೆಲವರು ಆಕ್ಷೇಪಿಸಿದ್ದಾರೆ.

More from Filmibeat

Read more about: malayalam controversy bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X