Exclusive: ಲೆಜೆಂಡ್ ಮಗನ ಜೊತೆ ಸಪ್ತಮಿ ಗೌಡ ಡ್ಯೂಯೆಟ್: ಇಷ್ಟಕ್ಕೆಲ್ಲಾ ಕಾರಣ 'ಕಾಂತಾರ' ಸಕ್ಸಸ್!

ಸರ್ಪ್ರೈಸ್ ಹಿಟ್ ಕೊಟ್ಟ 'ಕಾಂತಾರ' ಬಗ್ಗೆ ಇನ್ನೂ ಚರ್ಚೆ ನಿಂತಿಲ್ಲ. ದೇಶದ ಉದ್ದಕ್ಕೂ ರಿಷಬ್ ಶೆಟ್ಟಿಯ ಸಿನಿಮಾ ಪ್ರೇಕ್ಷಕರನ್ನು ಮನಗೆದ್ದಿದೆ. ಈ ಸಿನಿಮಾದಲ್ಲಿ ಬಂದ ಒಂದೊಂದು ಪಾತ್ರವೂ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಅದರಲ್ಲೂ ರಿಷಬ್ ಶೆಟ್ಟಿಯಂತೆಯೇ ಸಪ್ತಮಿ ಗೌಡ ಸಿನಿಪ್ರಿಯರಿಗೆ ಇಷ್ಟ ಆಗಿದ್ದಾರೆ.

'ಕಾಂತಾರ' ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದೆ. ಬಾಕ್ಸಾಫೀಸ್‌ನಲ್ಲಿ ಪ್ರತಿ ದಿನ ಒಂದಲ್ಲ ಒಂದು ದಾಖಲೆಗಳನ್ನು ಅಳಿಸಿ ಹಾಕುತ್ತಾ ಮುನ್ನುಗ್ಗುತ್ತಿದೆ. ಕನ್ನಡದ್ದೇ ಸಿನಿಮಾ 'ಕೆಜಿಎಫ್' ಸೃಷ್ಟಿಸಿದ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ.

ಇಷ್ಟೆಲ್ಲ ಸದ್ದು ಮಾಡಿದ ಮೇಲೆ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಮುಂದಿನ ಸಿನಿಮಾ ಯಾವುದು ಅನ್ನೋ ಬಗ್ಗೆ ಕುತೂಹಲ ಇದ್ದೇ ಇರುತ್ತೆ. ಸದ್ಯ ರಿಷಬ್ ಶೆಟ್ಟಿ ಸಾಲು ಸಾಲು ಸಿನಿಮಾ ಸೆಟ್ಟೇರಿದ್ದರೂ, ಈ ಯಶಸ್ಸಿನ ಬಳಿಕ ಏನಾಗುತ್ತೆ ಅನ್ನೋ ಮಾಹಿತಿ ಇಲ್ಲ. ಆದರೆ, ಸಪ್ತಮಿ ಗೌಡ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಶಿವನಷ್ಟೇ ಫೇಮಸ್ ಆಗಿದ್ದು ಲೀಲಾ!

ಶಿವನಷ್ಟೇ ಫೇಮಸ್ ಆಗಿದ್ದು ಲೀಲಾ!

ರಿಷಬ್ ಶೆಟ್ಟಿ ಅಭಿನಯದ ಶಿವನ ಪಾತ್ರ ಇಷ್ಟೊಂದು ಸದ್ದು ಮಾಡಬಹುದು ಅನ್ನೋದನ್ನು ಅವರೂ ಊಹಿಸಿರಲಿಲ್ಲ. ಅದೇ ಇನ್ನೊಂದು ಕಡೆ ಲೀಲಾ ಪಾತ್ರ ಕೂಡ ಸಿನಿಮಾದಲ್ಲಿ ಹಾಗೆ ಬಂದು, ಹೀಗೆ ಹೋಗಬಹುದೇನೋ ಅನ್ನೋ ಕಲ್ಪನೆ ಇತ್ತು. ಆದರೆ, ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರದಲ್ಲಿ ಎಂಟ್ರಿ ಕೊಟ್ಟ ಸಪ್ತಮಿ ಗೌಡ ಸಿನಿಪ್ರಿಯರ ಮನಸ್ಸು ಗೆದ್ದಿದ್ದರು. ಲೀಲಾ ಪಾತ್ರ ಕಂಡು ಪ್ರೇಕ್ಷಕರು ಭೇಷ್ ಎಂದಿದ್ದರು. ಇಲ್ಲಿಂದ ಮುಂದಿನ ಸಿನಿಮಾ ಯಾವುದು ಅನ್ನೋ ಬಗ್ಗೆ ಕುತೂಹಲ ಜನರಲ್ಲಿದೆ. ಈಗ ಅದಕ್ಕೆ ತೆರೆಬಿದ್ದಿದೆ.

ಲೆಜೆಂಡ್ ಮಗನ ಜೊತೆ ಸಪ್ತಮಿ ಗೌಡ ಡ್ಯೂಯೆಟ್

ಲೆಜೆಂಡ್ ಮಗನ ಜೊತೆ ಸಪ್ತಮಿ ಗೌಡ ಡ್ಯೂಯೆಟ್

ಸಪ್ತಮಿ ಗೌಡ ಸಿನಿಮಾರಂಗ ಹೊಸ ಸೆನ್ಸೇಷನ್. ಸಿನಿಪ್ರಿಯರ ಬಾಯಲ್ಲೀಗ ಸಪ್ತಮಿ ಗೌಡ ಹೆಸರು ಕೇಳೋಕೆ ಸಿಗುತ್ತಿದೆ. ಇನ್ನೊಂದು ಕಡೆ ಈ ನಟಿಗೆ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಕೂಡ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಯಾವ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋ ಕುತೂಹಲವಂತೂ ಇತ್ತು. ಅದಕ್ಕೀಗ ತೆರೆಬಿದ್ದಿದ್ದು. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಹೊಸ ಸಿನಿಮಾದಲ್ಲಿ ನಟಿಸೋಕೆ ಸಪ್ತಮಿ ಗೌಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

ಲೀಲಾ ಹೊಸ ಸಿನಿಮಾ 'ಕಾಳಿ'

ಲೀಲಾ ಹೊಸ ಸಿನಿಮಾ 'ಕಾಳಿ'

'ಕಾಂತಾರ' ಬಳಿಕ ಸಪ್ತಮಿ ಗೌಡ ಹೊಸ ಸಿನಿಮಾ 'ಕಾಳಿ'ಯಲ್ಲಿ ನಟಿಸುತ್ತಿದ್ದಾರೆ. 'ಪೈಲ್ವಾನ್' ಸಿನಿಮಾದ ನಿರ್ದೇಶಕ ಕೃಷ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ಲೀಡ್‌ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಹಾಗೂ ನಿರ್ದೇಶಕ ಕೃಷ್ಣ ಅಧಿಕೃತವಾಗಿ ಮಾಹಿತಿಯನ್ನು ನೀಡಬೇಕಿದೆ.

'ಕ'ದಿಂದಲೇ ಶುರು ಸಪ್ತಮಿ ಮತ್ತೊಂದು ಸಿನಿಮಾ

'ಕ'ದಿಂದಲೇ ಶುರು ಸಪ್ತಮಿ ಮತ್ತೊಂದು ಸಿನಿಮಾ

ಸಪ್ತಮಿ ಗೌಡ ಅಭಿನಯದ 'ಕಾಂತಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡೋದನ್ನು ಇನ್ನೂ ನಿಲ್ಲಿಸಿಲ್ಲ. ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಇದೂವರೆಗೂ ಸುಮಾರು 343 ಕೋಟಿ ರೂ. ಕಲೆಹಾಕಿದೆ. ಹಿಂದಿಯಲ್ಲೂ ಈ ಸಿನಿಮಾ 63 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ವಿಶೇಷ ಅಂದ್ರೆ, 'ಕಾಂತಾರ' ಬಳಿಕ ಸಪ್ತಮಿ ಗೌಡ ಹೊಸ ಸಿನಿಮಾ ಟೈಟಲ್ ಕೂಡ 'ಕ' ಅಕ್ಷರದಿಂದಲೇ ಆರಂಭ ಆಗುತ್ತಿದೆ. ಹೀಗಾಗಿ ಈ ಸಿನಿಮಾನೂ ನಿರೀಕ್ಷೆ ದುಪ್ಪಟ್ಟಾಗಿದೆ.

More from Filmibeat

English summary
Kantara Actress Sapthami Gowda New Movie With Abhishek Ambareesh In Kaali Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X