Sapthami Gowda:ಬೆಂಗಳೂರಿನಲ್ಲಿ ಮಳೆ, ಅದೇ ಮೂಡ್‌ನಲ್ಲಿ ಕೂಲ್ ಆಗಿ ಮಿಂಚಿದ ಸಪ್ತಮಿಗೌಡ

'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದೇ ಮಾಡಿದ್ದು ಸಪ್ತಮಿ ಗೌಡ ಸ್ಟಾರ್ ಆಗಿಬಿಟ್ಟರು. ಇದೇ ಜೋಷ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾವನ್ನು ಮಾಡಿದ್ದರು. ಅದರಲ್ಲೊಂದು ಸಿನಿಮಾ ಸೋತರೆ, ಮತ್ತೊಂದು ಗೆದ್ದಿದೆ. ವಿಶೇಷ ಅಂದರೆ, ಕನ್ನಡದಲ್ಲಿ ನಟಿಸಿದ ಮೂರು ಸಿನಿಮಾಗಳೂ ಸದ್ದು ಮಾಡಿದೆ.

'ಪಾಪ್‌ಕಾರ್ನ್ ಮಂಕಿ ಟೈಗರ್' ಸಪ್ತಮಿ ಗೌಡ ನಟಿಸಿದ ಚೊಚ್ಚಲ ಸಿನಿಮಾ. ಸೂರಿ ನಿರ್ದೇಶಿಸಿದ ಈ ಚಿತ್ರ ಗೆಲುವಿನ ನಗೆ ಬೀರಿತ್ತು. ಬಳಿಕ ರಿಷಬ್ ಶೆಟ್ಟಿ ಜೊತೆ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜೋರಾಗಿ ಸದ್ದು ಮಾಡಿತ್ತು. ಎರಡನೇ ಸಿನಿಮಾಗೆ ಸಪ್ತಮಿ ಗೌಡ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದರು.

Kantara actress Sapthami Gowda new photoshoot with Bangalore rainy mood goes viral

'ಕಾಂತಾರ' ಬ್ಯೂಟಿ ಸಪ್ತಮಿ ಗೌಡ ಈಗ ಸಖತ್ ಮಾಡರ್ನ್ ಆಗಿದ್ದಾರೆ. 'ಯುವ' ರಿಲೀಸ್ ಬಳಿಕ ಜಾಲಿ ಮೂಡಿಗೆ ಜಾರಿದ್ದಾರೆ. ಹೊಸ ಸಿನಿಮಾಗಳ ಬಗ್ಗೆ ಅಪ್‌ಡೇಟ್ ಕೊಡದೇ ಹೋದರೂ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಸದ್ಯ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಸಪ್ತಮಿ ಗೌಡ ಶೇರ್ ಮಾಡಿಕೊಂಡಿರುವ ಫೋಟೊಗಳು ಸಖತ್ ಕೂಲ್ ಆಗಿವೆ. ಬೆಂಗಳೂರಿನಲ್ಲಿ ಮಳೆ ಸುರಿದು ತಂಪಾಗಿದೆ. ಈ ಕೂಲ್ ವಾತಾವರಣದಲ್ಲಿ ಅಷ್ಟೇ ಕೂಲ್ ಆಗಿ ಸಪ್ತಮಿ ಗೌಡ ಫೋಟೊಶೂಟ್ ಮಾಡಿಕೊಂಡಿದ್ದಾರೆ. ಬಿಳಿ ಟಾಪ್, ಕಡು ನೀಲಿ ಬಣ್ಣದ ಶಾರ್ಟ್ ತೊಟ್ಟು ಬೆಂಗಳೂರಿನ ರಸ್ತೆಯಲ್ಲಿ ನಿಂತು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.

ಕನ್ನಡದ ನಟಿ ಸಪ್ತಮಿ ಗೌಡ ಫೋಟೊಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ನಮಗೆ ಎಷ್ಟು ಹೊಟ್ಟೆ ಉರಿಸ್ತೀರಂದ್ರೆ.. ಅಯ್ಯೋ ದೇವರೇ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇ ಇನ್ನೊಬ್ಬರು "ಅದ್ಭುತ.. ಹಾಲಿವುಡ್ ಹೀರೋಯಿನ್ ಇಲ್ಲವೋ ಕೋರಿಯನ್ ಹೀರೋಯಿನ್ ಹಾಗೆ ಕಾಣಿಸುತ್ತಿದ್ದೀರ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು "ಬ್ಯೂಟಿಫುಲ್ ಪಿಕ್ಚರ್" ಎಂದು ಕಾಮೆಂಟ್ ಮಾಡಿದ್ದಾರೆ.

Kantara actress Sapthami Gowda new photoshoot with Bangalore rainy mood goes viral

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಯುವ ರಾಜ್‌ಕುಮಾರ್ ಜೊತೆ ನಟಿಸಿದ 'ಯುವ' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಯುವ' ಬಳಿಕ ಹೊಸ ಸಿನಿಮಾ ಬಗ್ಗೆ ಸಪ್ತಮಿ ಗೌಡ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಮುಂದಿನ ಸಿನಿಮಾ ಬಗ್ಗೆ ಕುತೂಹಲವಿದೆ.

ಈಗಾಗಲೇ ತೆಲುಗು ಸಿನಿಮಾವನ್ನು ಒಪ್ಪಿಕೊಂಡಿರೋದು ಗೊತ್ತೇ ಇದೆ. ಟಾಲಿವುಡ್ ನಟ, ಜಯಂ ಖ್ಯಾತಿಯ ನಿತಿನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಸದ್ಯ ನಡೆಯುತ್ತಿದೆ. ಸಪ್ತಮಿ ಗೌಡ ಆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗ್ಯಾಪ್ ಸಿಕ್ಕಾಗ ಹೊಸ ಹೊಸ ಫೋಟೊ ಶೂಟ್‌ಗಳನ್ನ ಮಾಡಿಸಿ, ತಮ್ಮ ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

More from Filmibeat

English summary
Sapthami Gowda new photoshoot goes viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X