ವಿಂಟೇಜ್ ಲುಕ್ ಆಯ್ತು.. ಈಗ ಗುಲಾಬಿ ಹಿಡಿದು ಪೋಸ್ ಕೊಟ್ಟ ಸಪ್ತಮಿ ಗೌಡ; "ಅಂದಕ್ಕೂ ಅಸೂಯೆ" ಎಂದ ನೆಟ್ಟಿಗರು!

'ಕಾಂತಾರ' ಬ್ಯೂಟಿ ಸಪ್ತಮಿ ಗೌಡ ಇತ್ತೀಚೆಗಷ್ಟೇ ವಿಂಟೇಜ್ ಲುಕ್ ಕೊಟ್ಟಿದ್ದರು. ಅಪ್ಪಟ ರೇಷ್ಮೆ ಸೀರೆಯುಟ್ಟು ಕ್ಯಾಮರಾಗೆ ವಿಭಿನ್ನ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದರು. ಆ ಫೋಟೊಗಳನ್ನು ಕಳೆದು ಹೋಗಿದ್ದ ನೆಟ್ಟಿಗರ ಮತ್ತೆ ಗುಲಾಬಿ ಹಿಡಿದು ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ಈ ಫೋಟೊಗಳು ಕೂಡ ಅವರ ಅಭಿಮಾನಿಗಳ ಹೃದಯ ಗೆದ್ದಿದೆ.

ಸಪ್ತಮಿ ಗೌಡ ಸ್ಯಾಂಡಲ್‌ವುಡ್‌ನ ಬೇಡಿಕೆಯ ನಟಿ. 'ಕಾಂತಾರ' ಬಳಿಕ ಸಪ್ತಮಿ ಗೌಡ ಲಕ್ ಬದಲಾಗಿತ್ತು. ಆದರೆ, ಇತ್ತೀಚೆಗೆ ಹೊಸ ಸಿನಿಮಾಗಳನ್ನು ಹೆಚ್ಚಾಗಿ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಇದಕ್ಕೆ ನಿಖರವಾದ ಕಾರಣ ಕೂಡ ಗೊತ್ತಿಲ್ಲ. ಸದ್ಯ ಡಾಲಿ ಧನಂಜಯ್ ನಟಿಸುತ್ತಿರುವ ಹೊಸ ಸಿನಿಮಾಗೆ ಇವರೇ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಅದು ಬಿಟ್ಟರೆ, ಬೇರೆ ಪ್ರಾಜೆಕ್ಟ್‌ಗಳ ಬಗ್ಗೆ ಸುಳಿವು ಇಲ್ಲ.

Kantara actress Sapthami Gowda shared her new photos goes trendting

ಆದರೆ, ಸಿನಿಮಾ ಬಗ್ಗೆ ಸುದ್ದಿ ಇರದೇ ಹೋದರೂ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೊಶೂಟ್ ಮಾಡಿಸಿಕೊಂಡು ಅದನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇದ್ದಾರೆ. ಈ ಬಾರಿ ಹಂಚಿಕೊಂಡ ಫೋಟೊಗಳು ಸಖತ್ ಇಂಟ್ರೆಸ್ಟಿಂಗ್ ಎನಿಸುತ್ತದೆ. ಸಪ್ತಮಿ ಗೌಡ ರೊಮ್ಯಾಂಟಿಕ್ ಮೂಡ್‌ನಲ್ಲಿ ಇರುವಂತೆ ಕೊಟ್ಟಿರುವ ಪೋಸ್‌ಗೆ ನೆಟ್ಟಿಗರು ಕಾಮೆಂಟ್ ಕೂಡ ಸಖತ್ ಆಗಿಯೇ ಇದೆ.

ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಳ್ಳುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೂಡ ಹಲವು ಹೀಗೆ ಹಲವು ರೀತಿಯಲ್ಲಿ ಫೋಟೊಶೂಟ್‌ಗಳನ್ನು ಮಾಡಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಅವುಗಳಿಗೆ ಅವರ ಫಾಲೋವರ್ಸ್‌ ಕೂಡ ಕಾಮೆಂಡ್‌ಗಳನ್ನು ಮಾಡುತ್ತಾರೆ.

ಈ ಬಾರಿ ಶೇರ್ ಮಾಡಿಕೊಂಡಿರುವ ಫೋಟೊಗಳು ಅವರ ಅಭಿಮಾನಿಗಳಿಗೆ ಇಷ್ಟ ಆಗಿದೆ. ಈ ಹಿಂದೆ ರೆಟ್ರೋ ಸ್ಟೈಲ್‌ನಲ್ಲಿ ಮಿಂಚಿದ್ದ ಸಪ್ತಮಿ ಗೌಡ ಈ ಬಾರಿ ರೊಮ್ಯಾಂಟಿಕ್ ಫೀಲ್‌ನಲ್ಲಿ ಮಿಂಚಿದ್ದಾರೆ. ಸಪ್ತಮಿ ಗೌಡ ಸೌಂದರ್ಯವನ್ನು ನೋಡಿ ಅಭಿಮಾನಿಗಳಂತೂ ಕವಿಗಳಾಗಿ ಬಿಟ್ಟಿದ್ದಾರೆ. ಸೆಮಿ ಮಾಡರ್ನ್ ಡ್ರೆಸ್‌ನಲ್ಲಿ ಗುಲಾಬಿ ಕ್ಯಾಮರಾಗೆ ಪೋಸ್‌ ಕೊಟ್ಟ ಸಪ್ತಮಿ ಗೌಡ ಅವರ ಫ್ಯಾನ್ಸ್‌ಗೆ ಇಷ್ಟ ಆಗುತ್ತಿದ್ದಾರೆ.

Kantara actress Sapthami Gowda shared her new photos goes trendting

ಇನ್ನು ನೆಟ್ಟಿಗರ ಕಾಮೆಂಟ್‌ಗಳು ಕೂಡ ಅಷ್ಟೇ ಮಜವಾಗಿದೆ. ನೆಟ್ಟಿಗರೊಬ್ಬರು ಈ ಫೋಟೊಗಳಿಗೆ "ಅಂದಕ್ಕೂ ಅಸೂಯೆ ತಂದ.. ನಗುವಿಗೂ ನಾಚಿಕೆ ತಂದ ಸೌಂದರ್ಯದ ಗಣಿಯೊಂದಕ್ಕೆ ಜೀವ ಬಂದಂತಿದೆ" ಎಂದು ಕಾವ್ಯಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಬೆಲೆ ಕಟ್ಟಲಾಗದ ಗೋಲ್ಡ್" ಎಂದು ಕಾಮೆಂಟ್ ಮಾಡಿದ್ದರೆ. ಮತ್ತೊಬ್ಬರು "ಯುವರಾಜನ ಯುವರಾಣಿ ಮೇಡಂ ನೀವು" ಎಂದು ಹೇಳಿದ್ದಾರೆ.

ಇನ್ನು ಸಪ್ತಮಿ ಗೌಡ ಸಿನಿಮಾ ವಿಷಯಕ್ಕೆ ಬರೋದಾರೆ, ಡಾಲಿ ಧನಂಜಯ್ ನಟಿಸುತ್ತಿರುವ 'ಹಲಗಲಿ' ಅನ್ನುವ ಸಿನಿಮಾಗೆ ಆಯ್ಕೆ ಆಗಿದ್ದಾರೆ. ಈ ಸಿನಿಮಾದಲ್ಲಿ ಸಪ್ತಮಿ ಗೌಡ ಹೊನ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಬಿಟ್ಟರೆ, ಬೇರೆ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲ. 'ಹಲಗಲಿ' ಸಿನಿಮಾದ ಬಗ್ಗೆನೂ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ. 'ಯುವ' ಬಳಿಕ ಸಪ್ತಮಿ ಗೌಡ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಸೈಲೆಂಟ್ ಆದಂತೆ ಇದೆ.

More from Filmibeat

English summary
Kantara actress Sapthami Gowda shared her new photoshoot goes trendting;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X