ಹಾಲಿವುಡ್ ಸಿನಿಮಾದ ಕಲೆಕ್ಷನ್ ಅನ್ನೂ ಹಿಂದಿಕ್ಕಿದ 'ಕಾಂತಾರ': 16ನೇ ದಿನದ ಕಲೆಕ್ಷನ್ ಎಷ್ಟು?
ಕನ್ನಡದ ಮತ್ತೊಂದು ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದುವೇ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ'. ಎಲ್ಲಾ ಕಡೆನೂ 'ಕಾಂತಾರ' ಸಿನಿಮಾ ಬಗ್ಗೆನೇ ಚರ್ಚೆ. ಈ ಮಧ್ಯೆ ರಿಷಬ್ ಶೆಟ್ಟಿ ಹೊಸ ಹೊಸ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.
ರಿಷಬ್ ಶೆಟ್ಟಿ ಹಿಂದಿ ಬೆಲ್ಟ್‌ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಾಲಿವುಡ್‌ನಲ್ಲಿ 'ರಾಮ್ ಸೇತು', 'ಥ್ಯಾಂಕ್ ಗಾಡ್' ಅಂತಹ ಹೊಸ ಸಿನಿಮಾಗಳು ರಿಲೀಸ್ ಆಗಿವೆ. ಹೀಗಿದ್ದರೂ, 'ಕಾಂತಾರ' ಕಲೆಕ್ಷನ್ ಸ್ಟಡಿಯಾಗಿಯೇ ಇದೆ.
ಸದ್ಯ 'ಕಾಂತಾರ' ಹೊಸ ದಾಖಲೆಯನ್ನು ಬರೆದಿದ್ದು, ಹಾಲಿವುಡ್ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ನಟಿಸಿದ್ದ 'ಟಾಪ್ ಗನ್: ಮೆವೆರಿಕ್' ಗಳಿಕೆಯನ್ನು ಬೀಟ್ ಮಾಡಿದೆ. ಅಷ್ಟಕ್ಕೂ 'ಕಾಂತಾರ' ಹಾಲಿವುಡ್ ಸಿನಿಮಾವನ್ನು ಹಿಂದಿಕ್ಕಿದ್ದು ಹೇಗೆ? ಅನ್ನೋ ಡಿಟೈಲ್ಸ್ ಇಲ್ಲಿದೆ ನೋಡಿ.

'ಟಾಪ್ ಗನ್' Vs 'ಕಾಂತಾರ'
ಟಾಮ್ ಕ್ರೂಸ್ ಸಿನಿಮಾ 'ಟಾಪ್ ಗನ್: ಮೆವೆರಿಕ್' ಭಾರತದಲ್ಲಿ ಸುಮಾರು 35 ಕೋಟಿ ರೂಪಾಯಿಯನ್ನು ಕಲೆ ಹಾಕಿತ್ತು. ಹಾಲಿವುಡ್ ಸಿನಿಮಾ ಲೈಫ್ ಟೈಮ್ ಕಲೆಕ್ಷನ್ ಇದಾಗಿತ್ತು. ಆದರೆ, ನಿನ್ನೆ (ಅಕ್ಟೋಬರ್ 29) ಕೇವಲ ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ಹಾಲಿವುಡ್ ಸಿನಿಮಾದ ಗಳಿಕೆಯನ್ನು ಹಿಂದಿಕ್ಕಿದೆ. 16ನೇ ದಿನ ಹಿಂದಿ ಬಾಕ್ಸಾಫೀಸ್‌ನಲ್ಲಿ ಸುಮಾರು 36.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಕೇವಲ ಹಿಂದಿಯಲ್ಲಷ್ಟೇ ಹಾಲಿವುಡ್ ಸಿನಿಮಾವನ್ನು ಗಳಿಕೆಯಲ್ಲಿ ಹಿಂದಿಕ್ಕಿರುವ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

ಮುಂದಿನ ಟಾರ್ಗೆಟ್ ಯಾವುದು?
'ಕಾಂತಾರ' ಬಾಕ್ಸಾಫೀಸ್ ಫೈಟ್ ಇಲ್ಲಿಗೆ ನಿಂತಿಲ್ಲ. ಟಾರ್ಗೆಟ್ ಲಿಸ್ಟ್ ದೊಡ್ಡದೇ ಇದೆ. ಸದ್ಯ 'ಕಾಂತಾರ'ಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ, ಮುಂದಿನ ಟಾರ್ಗೆಟ್ 'ಏಕ್ ವಿಲನ್ಸ್ ರಿಟರ್ನ್ಸ್'. ಈ ಬಾಲಿವುಡ್ ಸಿನಿಮಾದ ಒಟ್ಟು ಗಳಿಕೆ 41.49 ಕೋಟಿ ರೂಪಾಯಿ. ಇದರ ಜೊತೆನೇ 'ಕಾರ್ತಿಕೇಯ 2' ಹಿಂದಿ ಬಾಕ್ಸಾಫೀಸ್ ಕಲೆಕ್ಷನ್ ಅನ್ನೂ ಬೀಟ್ ಮಾಡಿದೆ ಎನ್ನಲಾಗಿದೆ. ಸದ್ಯ ದೀಪಾವಳಿ ರಿಲೀಸ್ ಆಗಿದ್ದ 'ರಾಮ್ ಸೇತು' ಹಾಗೂ 'ಥ್ಯಾಂಕ್ ಗಾಡ್' ಸಿನಿಮಾದ ಕಲೆಕ್ಷನ್ ಡ್ರಾಪ್ ಆಗಿದೆ. ಈ ಎರಡೂ ಸಿನಿಮಾಗಳ ಕಲೆಕ್ಷನ್ ಡ್ರಾಪ್ ಆದರೂ ಅಚ್ಚರಿಯಿಲ್ಲ.

'ಕಾಂತಾರ' ಕಲೆಕ್ಷನ್ ಎಲ್ಲೆಲ್ಲಿ ಹೇಗಿದೆ?
ರಿಷಬ್ ಶೆಟ್ಟಿಯ ಸಿನಿಮಾಗೆ ಬಾಲಿವುಡ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ದೀಪಾವಳಿ ರಜೆ ಮುಗಿದ ಬಳಿಕವೂ ಸಿನಿಮಾ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಿದೆ. ಮಹಾರಾಷ್ಟ್ರ, ದೆಹಲಿ, ಗುರ್‌ಗಾವ್ ಕಡೆಗಳಲ್ಲಿ ಸಿನಿಮಾ ಕಲೆಕ್ಷನ್ ಜೋರಾಗಿದೆ. ನಿನ್ನೆ (ಅಕ್ಟೋಬರ್ 30) ಸುಮಾರು 3 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ 'ಕಾಂತಾರ' ಕಲೆಕ್ಷನ್ ಎಷ್ಟು?
ಕರ್ನಾಟಕದಲ್ಲೂ 'ಕಾಂತಾರ' ಆರ್ಭಟ ಇನ್ನೂ ಮುಂದುವರೆದಿದೆ. ರಿಷಬ್ ಶೆಟ್ಟಿ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಪೂರೈಸಿದೆ. ಈ ಒಂದು ತಿಂಗಳಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಸುಮಾರು 143 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ನಿರ್ಮಾಣ ಸಂಸ್ಥೆಯಾಗಿಲಿ, ಅಥವಾ ವಿತರಣಾ ಸಂಸ್ಥೆಯಾಗಲಿ ಇದೂವರೆಗೂ ನಿಖರವಾದ ಮಾಹಿತಿಯನ್ನು ಹೊರಹಾಕಿಲ್ಲ. ಇದು ಟ್ರೇಡ್ ಎಕ್ಸ್‌ಪರ್ಟ್ಸ್ ಹಾಗೂ ವಿತರಕರ ಲೆಕ್ಕಾಚಾರ.


Click it and Unblock the Notifications











