'ಕಾಂತಾರ 1'ರ ಈ ಸೈಲೆಂಟ್ ಸುಂದರಿ ರಶ್ಮಿಕಾ ಜೊತೆ ಸ್ಪರ್ಧಿಸಿದ್ದು ಗೊತ್ತೇ? ಯಾರಿದು ಐರಾ ಕೃಷ್ಣ?

ರಿಷಶ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಥಿಯೇಟರ್‌ನಲ್ಲಿ ಅಬ್ಬರಿಸಿ, ಓಟಿಟಿಗೂ ಲಗ್ಗೆ ಇಟ್ಟಿದೆ. ಇಷ್ಟೇ ಅಲ್ಲದೆ ವಿದೇಶದಲ್ಲಿ ಸ್ಪಾನಿಷ್ ಭಾಷೆಯಲ್ಲಿ ರಿಲೀಸ್ ಆಗಿದ್ದು ಹೊಸ ದಾಖಲೆಯನ್ನು ಸೃಷ್ಟಿಸುವ ಉತ್ಸಾಹದಲ್ಲಿದೆ. ಈ ಸಿನಿಮಾದಲ್ಲಿ ನಟಿಸಿದವರೆಲ್ಲರಿಗೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಒಳ್ಳೆಯ ಹೆಸರು ಬಂದಿದೆ. ಅವಕಾಶಗಳನ್ನು ಹುಡುಕಿಕೊಂಡು ಬರುತ್ತಿವೆ. ಇಂತಹವರಲ್ಲಿ ಸೈಲೆಂಟ್‌ ಸುಂದರಿ ಕೂಡ ಒಬ್ಬರು.

'ಕಾಂತಾರ ಚಾಪ್ಟರ್ 1' ಸಿನಿಮಾದ ಸೈಲೆಂಟ್ ಸುಂದರಿ ಎಂದೇ ಫೇಮಸ್ ಆಗಿರುವ ನಟಿ ಐರಾ ಕೃಷ್ಣ. ಅಷ್ಟಕ್ಕೂ ಇವರನ್ನು ಸೈಲೆಂಟ್ ಸುಂದರಿ ಅಂತ ಯಾಕೆ ಕರೀತಾರೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. 'ಕಾಂತಾರ'ದ ಕುಲಶೇಖರನ ಪತ್ನಿ ಯುವರಾಣಿಯಾಗಿ ನಟಿಸಿರುವ ಐರಾ ತನ್ನ ಎಕ್ಸ್‌ಪ್ರೆಷನ್‌ನಿಂದಲೇ ಗಮನ ಸೆಳೆದಿದ್ದರು. ಸಿನಿಮಾದಲ್ಲಿ ಒಂದೇ ಒಂದು ಡೈಲಾಗ್ ಇಲ್ಲದೆ ಇದ್ದರೂ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

Kantara Chapter 1 actress Ayra Krishna Competed with Rashmika Mandanna In Model Hunt

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಸಿನಿಮಾ ಐರಾ ಕೃಷ್ಣ ಕರಿಯರ್‌ಗೆ ಹೊಸ ಹುರುಷು ಕೊಟ್ಟಿದೆ. 'ಕಾಂತಾರ ಚಾಪ್ಟರ್ 1' ಯುವರಾಣಿ ಫಿಲ್ಮ್ ಮೇಕರ್‌ಗಳ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈಕೆ ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಜೊತೆ ಮಾಡಲ್‌ ಹಂಟ್‌ನಲ್ಲಿ ಸ್ಪರ್ಧಿಸಿದ್ದರು ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿಯಿದೆ. ಅಲ್ಲದೇ 'ಕಾಂತಾರ' ಬಳಿಕ ಅವರ ವೃತ್ತಿ ಬದುಕು ಬದಲಾಗಿದೆ. ಅದ್ಹೇಗೆ ಅಂತ ತಿಳಿಯುವುದಕ್ಕೆ ಮುಂದೆ ಓದಿ.

'ಕಾಂತಾರ' ಸಿನಿಮಾದ ಸೈಲೆಂಟ್ ಸುಂದರಿ ಎಂದೇ ಕರೆಯುವ ಐರಾ ಕೃಷ್ಣ ತಮಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿಕ್ಕ ಪಾತ್ರವಿದ್ದರೂ ಕುಲಶೇಖರ ಪಾತ್ರದಲ್ಲಿ ನಟಿಸಿರುವ ಗುಲ್ಶನ್ ಗ್ರೋವರ್ ಪತ್ನಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಸಿನಿಮಾದ ಪ್ಯಾನ್ ಇಂಡಿಯಾ ಗೆಲುವು ಅವರಿಗೆ ವರದಾನವಾಗಿದೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ಇನ್ನು ಐರಾ ಕೃಷ್ಣ 'ಕಾಂತಾರ' ಮೊದಲ ಸಿನಿಮಾವೇನೂ ಅಲ್ಲ. ಈಗಾಗಲೇ ಕನ್ನಡ ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲತಃ ಭಟ್ಕಳದವರಾದರ ಇವರು ಮಾಡಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಟಾಪ್ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಇವರೊಂದಿಗೆ ಪೈಪೋಟಿ ಮಾಡಿದ್ದರು. ಇದರಲ್ಲಿ ಐರಾ ಕೃಷ್ಣಗೆ ದ್ವಿತೀಯ ಸ್ಥಾನ ಸಿಕ್ಕಿತ್ತು. ಹಾಗೇ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ ಲಿಸ್ಟ್‌ವರೆಗೂ ಹೋಗಿದ್ದರು.

Kantara Chapter 1 actress Ayra Krishna Competed with Rashmika Mandanna In Model Hunt

ಇಲ್ಲಿಂದ ಐರಾ ಕೃಷ್ಣ ನಟನೆ ಕಡೆ ಮುಖ ಮಾಡಿದ್ದರು. ಹಲವು ಕಿರುಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಐರಾ ಜರ್ನಿ ಶುರುವಾಗಿ ಈಗ‌ 'ಕಾಂತಾರ ಚಾಪ್ಟರ್ 1' ಯಶಸ್ಸಿನವರೆಗೂ ಬಂದು ನಿಂತಿದೆ. ಅಷ್ಟಕ್ಕೂ 'ಕಾಂತಾರ ಚಾಪ್ಟರ್ 1'ಗೆ ಹೊಂಬಾಳೆ ಫಿಲ್ಮ್ಸ್ ನಡೆಸಿದ ಸ್ಕ್ರೀನ್ ಟೆಸ್ಟ್‌ನಲ್ಲಿ ಪಾಸಾಗಿದ್ದರು. ಇದರಲ್ಲಿ ಚಿಕ್ಕ ಪಾತ್ರ ಸಿಕ್ಕಿದ್ದರೂ, ಅದರಿಂದ ಅವರಿಗೆ ಸಾಕಷ್ಟು ಆಫರ್‌ಗಳು ಬರುತ್ತಿವೆಯಂತೆ.

ಇನ್ನು ಐರಾ ಕೃಷ್ಣ ಈಗಾಗಲೇ ಕನ್ನಡ ಸೇರಿದಂತೆ, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ 'ನನ್ನ ಪ್ರಕಾರ', 'ಧರಣಿ ಮಂಡಳ ಮಧ್ಯಗೊಳಗೆ', 'ನೋಡಿದವರು ಏನೆಂತಾರೆ' ಅಂತಹ ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಹಾಗೇ ತಮಿಳಿನಲ್ಲಿ 'ರೆಬಲ್', 'ನಿರಮ್ ಮಾರುಮ್ ಉಳಗಿಲ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೊಂದು ಸಿನಿಮಾ 'ಫೋರ್ ವಿಂಡೋಸ್' ಬಿಡುಗಡೆ ಸಜ್ಜಾಗಿ ನಿಂತಿದೆ.

ಇದರೊಂದಿಗೆ ಜಾಹೀರಾತುಗಳಲ್ಲಿಯೂ ಐರಾ ನಟಿಸಿದ್ದಾರೆ. 'ಟ್ಯಾಲಿ', 'ಎವಿಟಿ ಚಹಾ', 'ಅಮುಲ್ ಇಂಡಿಯಾ', 'ಹಿಮಾಲಯ', 'ಪೀಟರ್ ಇಂಗ್ಲೆಂಡ್' ಅಂತರಾಷ್ಟ್ರೀಯ ಮಟ್ಟದ ಕಂಪನಿಗಳ‌ ಜಾಹೀರಾತುಗಳಲ್ಲಿಯೂ ಐರಾ ಕೃಷ್ಣ ನಟಿಸಿರೋದು ವಿಶೇಷ. ಈಗ 'ಕಾಂತಾರ ಚಾಪ್ಟರ್ 1' ಮೂಲಕ ಬೇರೆ ಬೇರೆ ಭಾಷೆಯಿಂದ ಆಫರ್‌ಗಳು ಇವರನ್ನು ಹುಡುಕಿಕೊಂಡು ಬಂದಿವೆ.

More from Filmibeat

English summary
Kantara Chapter 1 actress Ayra Krishna Competed with Rashmika Mandanna In Model Hunt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X