ಹೆಂಗಿದ್ರು..? ಹೆಂಗಾದ್ರು..? 'ಕಾಂತಾರ' ಬೆಡಗಿ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಹೇಗಿದ್ದರು? ಇಲ್ಲಿದೆ ಫೋಟೊಗಳು

ಸಿನಿಮಾ ಅನ್ನೋ ಗ್ಲಾಮರ್ ಲೋಕಕ್ಕೆ ಕಾಲಿಟ್ಟ ಮೇಲೆ ನಟ-ನಟಿಯರು ಸಂಪೂರ್ಣವಾಗಿ ಬದಲಾಗುತ್ತಾರೆ. ಅವರ ಡ್ರೆಸ್ಸಿಂಗ್ ಸೆನ್ಸ್‌ನಿಂದ ಹಿಡಿದು ಅವರು ನಡಿಗೆ ಕೂಡ ಅಷ್ಟೇ ಬದಲಾಗಿಬಿಡುತ್ತೆ. ಬಹುಬೇಗನೆ ಸಿನಿಮಾ ಲೋಕಕ್ಕೆ ಹೊಂದಿಕೊಳ್ಳುತ್ತಾರೆ. ಎಷ್ಟೋ ಬಾರಿ ಅವರ ಅಭಿಮಾನಿಗಳೇ ನಂಬಲಾರದಷ್ಟು ಬದಲಾಗಿಬಿಡುತ್ತಾರೆ. ಇವರು ಅವರೇನಾ? ಅನ್ನುವಷ್ಟು ಬದಲಾವಣೆ.

ಈ ಬದಲಾವಣೆ ತಪ್ಪೇನು ಅಲ್ಲ. ಗ್ಲಾಮರ್ ಲೋಕಕ್ಕೆ ಒಗ್ಗಿಕೊಳ್ಳಲೇ ಬೇಕು. ಹಾಗಿದ್ದರೇನೆ ಕಲಾವಿದರನ್ನು ಜನರು ಕೂಡ ಇಷ್ಟ ಪಡೋದು. ಎಲ್ಲಾ ಚಿತ್ರರಂಗದಲ್ಲೂ ನಟ-ನಟಿಯರು ನೋಡುವುದಕ್ಕೆ ಸಂಪೂರ್ಣವಾಗಿ ಬದಲಾಗಿರುತ್ತಾರೆ. ಅದರಲ್ಲೂ ನಟಿಯರು ಬಹುಬೇಗನೆ ಬದಲಾಗುತ್ತಾರೆ. ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಇದ್ದಂತೆ ಇರೋದಿಲ್ಲ. ಮುಖದಲ್ಲಿ ಸೌಂದರ್ಯ ತುಂಬಿ ತುಳುಕುತ್ತಿರುತ್ತೆ. ಸ್ಕಿನ್ ಪಳ ಪಳ ಅಂತ ಹೊಳೆಯುತ್ತಿರುತ್ತೆ. ದಪ್ಪಗಿದ್ದವರು ನಂಬರಾದಷ್ಟು ತೆಳ್ಳಗಾಗಿರುತ್ತಾರೆ.

Kantara Chapter 1 Actress Rukmini Vasanth Then and Now Stunning Transformation Here Are Photos

ಅಷ್ಟಕ್ಕೂ ಈಗ್ಯಾಕೆ ಈ ಮಾತು ಅಂದರೆ, ಅದಕ್ಕೆ ಕಾರಣ 'ಕಾಂತಾರ ಚಾಪ್ಟರ್ 1' ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರುವ ನಟಿ ರುಕ್ಮಿಣಿ ವಸಂತ್. ಈ ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು, ರುಕ್ಮಿಣಿ ವಸಂತ್ ಬಹುಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ದೇಶಾದ್ಯಂತ ಇವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದಾರೆ. ಸಿನಿಮಾ ಪ್ರೇಮಿಗಳ ಕ್ರಶ್ ಆಗಿದ್ದಾರೆ. ಇವರ ಸೌಂದರ್ಯಕ್ಕೆ ಅದೆಷ್ಟೋ ಮಂದಿ ಕ್ಲೀನ್ ಬೌಲ್ಡ್ ಆಗಿದ್ದಾರೆ. ಆದರೆ, ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ರುಕ್ಮಿಣಿ ಹೇಗಿದ್ದರು ನೋಡಿದ್ದೀರಾ?

ಅಪ್ಪಟ ಕನ್ನಡದ ಹುಡುಗಿ ರುಕ್ಮಿಣಿ ವಸಂತ್ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಶ್ರೀನಿ ಸಿನಿಮಾ 'ಬೀರಬಲ್ ಟ್ರೈಲಜಿ'ಯಲ್ಲಿ ನಾಯಕಿಯಾಗಿ ನಟಿಸಿದ್ದರು. ಇದು ರುಕ್ಮಿಣಿಯ ಚೊಚ್ಚಲ ಚಿತ್ರ. ಇಲ್ಲಿಂದ ಸಿನಿಮಾ ಪಯಣ ಆರಂಭ ಆಗಿತ್ತು. ಆದರೆ, 'ಬೀರಬಲ್' ಮುಗಿದ ಕೂಡಲೇ ಅವಕಾಶಗಳೇನು ಹುಡುಕಿಕೊಂಡು ಬರಲಿಲ್ಲ. ರಕ್ಷಿತ್ ಶೆಟ್ಟಿ ಜೊತೆ ನಟಿಸಿದ 'ಸಪ್ತಸಾಗರದಾಚೆ ಎಲ್ಲೋ' ಅವರ ಎರಡನೇ ಸಿನಿಮಾ ಆಯ್ತು. ಇದು 'ಬೀರಬಲ್' ತೆರೆಕಂಡ ನಾಲ್ಕು ವರ್ಷಗಳ ಬಳಿಕ ರಿಲೀಸ್ ಆಗಿತ್ತು. ಇಲ್ಲಿಂದ ರುಕ್ಮಿಣಿ ವಸಂತ್ ಕನ್ನಡಿಗರ ಮನಸ್ಸಿನಲ್ಲಿ ಕೂತ ಬಿಟ್ಟರು. ಇವರ ಸೀದಾ ಸಾದ ಲುಕ್ ಇಷ್ಟ ಆಯ್ತು. ಸಿಂಪಲ್ ಸೀರೆ, ಚೂಡಿದಾರ ಧರಿಸಿ ಮನ ಗೆದ್ದು ಬಿಟ್ಟರು.

Kantara Chapter 1 Actress Rukmini Vasanth Then and Now Stunning Transformation Here Are Photos

'ಬೀರ್‌ಬಲ್'ನಿಂದ 'ಸಪ್ತ ಸಾಗರದಾಚೆ ಎಲ್ಲೋ‌'ಗೆ ರುಕ್ಮಿಣಿ ವಸಂತ್ ಬದಲಾಗಿದ್ದರು. ಸಪ್ತ ಸಾಗರದಿಂದ 'ಕಾಂತಾರ ಚಾಪ್ಟರ್ 1' ಇವರ ಸೌಂದರ್ಯ ಮತ್ತಷ್ಟು ಹೆಚ್ಚಾಗಿದೆ. ರುಕ್ಮಿಣಿ ಸಿನಿಮಾದಿಂದ ಸಿನಿಮಾಗೆ ಬದಲಾಗುತ್ತಾ ಹೋಗುವುದನ್ನು ಗಮನಿಸಬಹುದು. ಆದರೆ, ಸಿನಿಮಾರಂಗಕ್ಕೆ ಬರುವುದಕ್ಕೂ ಮುನ್ನ ಅವರು ಹೇಗಿದ್ದರು? ಅನ್ನೋ ಕುತೂಹಲಕ್ಕೆ ಇಲ್ಲೊಂದಿಷ್ಟು ಫೋಟೊಗಳಿವೆ ನೋಡಿ.

Kantara Chapter 1 Actress Rukmini Vasanth Then and Now Stunning Transformation Here Are Photos

ರುಕ್ಮಿಣಿ ವಸಂತ್ ಟ್ರೈನ್ಡ್ ಆರ್ಟಿಸ್ಟ್. ಲಂಡನ್‌ನ 'ರಾಯಲ್ ಅಕಾಡೆಮಿ ಆಫ್ ಡ್ರಮಾಟಿಕ್ ಆರ್ಟ್ಸ್'ನಲ್ಲಿ ನಟನೆ ಬಗ್ಗೆ ತರಬೇತಿ ಪಡೆದು ಬಂದಿದ್ದಾರೆ. ಹೆಚ್ಚು ಕಡಿಮೆ ಆ ಸಮಯದಲ್ಲಿ ರುಕ್ಮಿಣಿ ವಸಂತ್ ಸ್ವಲ್ಪ ದಪ್ಪ ಇದ್ದಂತೆ ತೋರುತ್ತೆ. ಅದಕ್ಕೆ ಈ ಫೋಟೊನೇ ಸಾಕ್ಷಿ. ಹಾಗಂತ ಈ ಫೋಟೊ ನಿಖರವಾಗಿ ಎಂದಿನದ್ದು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ.

Kantara Chapter 1 Actress Rukmini Vasanth Then and Now Stunning Transformation Here Are Photos

ರುಕ್ಮಿಣಿ ವಸಂತ್ ಈಗ ಸೀರೆಯುಟ್ಟು ಬಂದರೆ, ಸಖತ್ ಸ್ಲಿಮ್ ಆಗಿದ್ದಾರಲ್ಲ ಅಂತ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತೀರಾ. ಆದರೆ, ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಯುವತಿಯರೊಂದಿಗೆ ಅವರು ಸೀರೆಯುಟ್ಟು ಫೋಟೊ ಕ್ಲಿಕ್ಕಿಸಿದ್ದಾರೆ. ಅದರಲ್ಲೂ ಕೊಂಚ ದಪ್ಪಗಿದ್ದಾರೆ ಅಂತ ಅನಿಸುತ್ತೆ.

ಇನ್ನೂ ತೀರಾ ಯಂಗ್ ಏಜ್‌ನಲ್ಲಿ ರುಕ್ಮಿಣಿ ವಸಂತ್ ಅವರನ್ನು ಗುರುತಿಸುವುದು ಕಷ್ಟ. ಇವರ ಹಳೆಯ ಫೋಟೊಗಳಿಗೂ, ಈಗ ಫೋಟೊಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಏನೇ ಇರಲಿ, ರುಕ್ಮಿಣಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಕಾಂತಾರ ಚಾಪ್ಟರ್ 1' ಬಳಿಕ ಯಶ್ ಜೊತೆ 'ಟಾಕ್ಸಿಕ್‌'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನಂತರ ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ 'ಡ್ರ್ಯಾಗನ್' ರಿಲೀಸ್‌ಗೆ ಆಗಲಿದೆ.

Take a Poll

More from Filmibeat

English summary
Kantara Chapter 1 Actress Rukmini Vasanth Then and Now: Stunning Transformation Here Are Photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X