ರಾಕೇಶ್ ಪೂಜಾರಿ ಬಗ್ಗೆ ಮೌನ ಮುರಿದ ರಿಷಬ್ ಶೆಟ್ಟಿ; ಹೊರಗಡೆ ಏನೇ ಆದರೂ ಗೊತ್ತಾಗೋಕೆ ಮೂರು ದಿನ ಆಗ್ತಿತ್ತು

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಾಂತಾರ ಚಾಪ್ಟರ್ 1' ಬಿಡುಗಡಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ರಿಷಬ್ ಶೆಟ್ಟಿ ಈಗಾಗಲೇ ಸಿನಿಮಾ ಬಗ್ಗೆ ಮಾಹಿತಿ ನೀಡುವುದಕ್ಕೆ ಶುರು ಮಾಡಿದ್ದಾರೆ. ಬೇರೆ ಭಾಷೆಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ. ಸಿನಿಮಾ ಬಗ್ಗೆ ಮೇಕಿಂಗ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ರಾಕೇಶ್ ಪೂಜಾರಿ ಬಗ್ಗೆನೂ ಕೆಲವು ಭಾವನಾತ್ಮಕ ಅಂಶಗಳನ್ನು ರಿವೀಲ್ ಮಾಡಿದ್ದಾರೆ.

'ಕಾಂತಾರ ಚಾಪ್ಟರ್ 1' ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಹಲವು ಮಂದಿ ಕಲಾವಿದರು ನಟನೆ ಮಾಡಿದ್ದಾರೆ. ದೊಡ್ಡ ತಾರಾಗಣವನ್ನು ಇಟ್ಟುಕೊಂಡು ಸಿನಿಮಾವನ್ನು ಮಾಡಲಾಗಿದೆ. ಇದರಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿದ್ದ ಟ್ರೈಲರ್‌ನಲ್ಲೂ ರಾಕೇಶ್ ಪೂಜಾರಿಯನ್ನು ಕಾಣಬಹುದು.

Kantara Chapter 1 Rishab Shetty finally open up about Rakesh Poojari s demise

ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' ಮೇಕಿಂಗ್ ಮಾಡುವಾಗ ಸಿನಿಮಾಗೆ ಕೆಲಸ ಮಾಡುತ್ತಿದ್ದವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸಿನಿಮಾ ಸೆಟ್ಟಿನಲ್ಲಿ ಈ ಅವಘಡ ನಡೆಯದೇ ಹೋದರೂ, ಏನೋ ಸರಿಯಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಅದರಲ್ಲಿ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಇತ್ತೀಚೆಗೆ ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಾಕೇಶ್ ಪೂಜಾರಿ ಬಗ್ಗೆ ರಿಷಬ್ ಶೆಟ್ಟಿ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜೊತೆ ಅವರೇ ಪ್ರಾಣಾಪಾಯದಿಂದ ಪಾರಾಗಿದ್ದು ಹಾಗೂ ಶೂಟಿಂಗ್ ಅನುಭವಗಳನ್ನು ಮೆಲುಕು ಹಾಕಿದ್ದಾರೆ.

"ಶೂಟಿಂಗ್‌ ಸೆಟ್ಟಿಗೆ ಪದೇ ಪದೆ ಏನಾದರೂ ಅವಘಡಗಳಾಗುತ್ತಿದ್ದರೆ, ಸಿನಿಮಾ ಬಿಟ್ಟು ಹೊರಬರುವುದನ್ನು ನಾನು ಮಾಡುವುದಿಲ್ಲ. ಮಧ್ಯದಲ್ಲಿ ಹೀಗಾಗಬಹುದು ಎಂದು ಸೆನ್ಸ್ ಮಾಡಬಹುದು. ಕೂಡಲೇ ನಾನು ಸಂಬಂಧಪಟ್ಟರೊಂದಿಗೆ ಮಾತಾಡುತ್ತೇನೆ. ನಿರ್ಮಾಪಕರಿಗೆ ಮಾಹಿತಿಯನ್ನು ನೀಡುತ್ತೇನೆ. ಅಲ್ಲಿಗೆ ವಿಜಯಣ್ಣ ಬರುತ್ತಾರೆ. ಪ್ರತಿ ಶೆಡ್ಯೂಲ್‌ನಲ್ಲೂ ಬರುತ್ತಿದ್ದರು. ಮೀಟಿಂಗ್ ಸೆಟಪ್ ಮಾಡುತ್ತಿದ್ದರು. ನನ್ನ ಕೋರ್ ಟೀಮ್ ಜೊತೆ ಮಾತಾಡುತ್ತಿದ್ದರು. ಎಲ್ಲರೂ ಕೂಡ ಪ್ಲಾನ್ ಮಾಡುತ್ತಿದ್ವಿ. ಎರಡು ಚೆನ್ನಾಗಿ ನಡೆಯುತ್ತಿತ್ತು. ಮೂರನೇ ದಿನ ಮತ್ತೆ ಅದೇ ಸಮಸ್ಯೆ ಆಗುತ್ತಿತ್ತು. ಆದರೆ, ಏನೇ ಆಗಲಿ ಈ ಸಿನಿಮಾವನ್ನು ನಾನು ಈ ಸಿನಿಮಾವನ್ನು ನಿಲ್ಲಿಸುವುದಿಲ್ಲ ಎಂದು ತೀರ್ಮಾನ ಮಾಡಿದ್ದೆ" ಎಂದು ಹೇಳಿದ್ದಾರೆ.

ಇನ್ನು 'ಕಾಂತಾರ ಚಾಪ್ಟರ್ 1'ರಲ್ಲಿ ಕೆಲಸ ಮಾಡಿದ ಕೆಲವರು ಬೇರೆ ಬೇರೆ ಕಾರಣಗಳಿಗೆ ಸಾವನ್ನಪ್ಪಿದ್ದಾರೆ. ಕಾಂತಾರದಲ್ಲಿ ನಟಿಸಿದ್ದಕ್ಕೆ ಹೀಗಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಅದಕ್ಕೂ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. "ಈ ಸಿನಿಮಾದ ಮೇಕಿಂಗ್ ಸಮಯದಲ್ಲಿ ಏನು ಘಟನೆಗಳು ಆಗಿವೆ. ಅವೆಲ್ಲವೂ ಶೂಟಿಂಗ್ ಸೆಟ್ಟಿನಲ್ಲಿ ಆಗಿರಲಿಲ್ಲ. ಸೆಟ್ಟಿನಲ್ಲಿ ನಡೆದಿರೋದೆಲ್ಲ ನಮ್ಮ ಮೇಲೆ ಆಗಿತ್ತು." ಎಂದು ಹೇಳಿದ್ದಾರೆ.

ರಾಕೇಶ್ ಪೂಜಾರಿ ಬಗ್ಗೆ ಅಚ್ಚರಿ ಮೂಡಿಸುವಂತೆ ಹೇಳಿಕೆ ಕೊಟ್ಟಿದ್ದಾರೆ. "ರಾಕೇಶ್ ಪೂಜಾರಿ ಅಂತಹ ನಟ ನನಗೆ ಬಹಳ ದಿನಗಳ ಬಳಿಕ ಸಿಕ್ಕಿದ್ದರು. ಅವರು ನನ್ನೊಂದು ಕೆಲಸ ಮಾಡುತ್ತಿದ್ದಾಗ ಅವನ್ನು ಗಮನಿಸಿದೆ. ಅವರನ್ನು ನಾನು ಮುಂದಕ್ಕೆ ಕರೆದುಕೊಂಡು ಹೋಗುತ್ತೇನೆ. ನನಗೆ ಸಿಕ್ಕಿರುವ ಸಿನಿಮಾಗಳಲ್ಲಿ ಅವರೂ ಕಾಣಿಸಿಕೊಳ್ಳುಬೇಕು ಎಂದು ನಿರ್ಧರಿಸಿದ್ದೆ. ಈಗ ಪ್ರಕಾಶ್ ತುಮ್ಮಿನಾಡ್, ಶನೀಲ್ ಗೌತಮ್ ಅಂತಹವರು ಸಿಗುತ್ತಾರಲ್ಲ. ಅವರು ನಮಗೆ ಕಂಫರ್ಟೆಬಲ್ ಅನಿಸುತ್ತಾರೆ. ಇವರು ನಮ್ಮ ಗ್ಯಾಂಗ್ ಅನಿಸುತ್ತಾರೆ. ಶಿವ, ರಾಂಪ, ಬುಳ್ಳ ಈ ಮೂವರು ಬಂದು ಸ್ಕ್ರೀನ್ ಮೇಲೆ ನಿಂತರೆ, ನೋಡುವರಿಗೆ ನಗು ಬರುತ್ತೆ. ಹಾಗೇ ರಾಕೇಶ್ ಪೂಜಾರಿ ಒಂದು ಫೀಲ್ ಕೊಟ್ಟಿದ್ದರು." ಎಂದಿ ರಿಷಬ್ ಶೆಟ್ಟಿ ಹೇಳಿದ್ದಾರೆ.

Kantara Chapter 1 Rishab Shetty finally open up about Rakesh Poojari s demise

ರಾಕೇಶ್ ಪೂಜಾರಿ 'ಕಾಂತಾರ ಚಾಪ್ಟರ್ 1' ಶೂಟಿಂಗ್ ಮುಗಿಸಿದ್ದರು. ಡಬ್ಬಿಂಗ್ ಕೂಡ ಮಾಡಿದ್ದರು. ಇದೆಲ್ಲ ಆದ 15-20 ದಿನಗಳ ಬಳಿಕ ಅವರಿಗೆ ಹೃದಯಾಘಾತವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. "ರಾಕೇಶ್ ಪೂಜಾರಿ ಶೂಟಿಂಗ್ ಮುಗಿದಿತ್ತು. ಅವರು ಡಬ್ಬಿಂಗ್ ಕೂಡ ಮಾಡಿದ್ದರು. ಅವರಿಗೆ ಹೃದಯಾಘಾತ ಆಗುವುದಕ್ಕೂ ಮುನ್ನ ನಮ್ಮ ಸಿನಿಮಾ ಶೂಟಿಂಗ್ ಮುಗಿಸಿ 15 ರಿಂದ 20 ದಿನ ಆಗಿತ್ತು. ಇಡೀ ಸೆಟ್ಟಿಗೆ ಅವರು ನಗುವ ಮುಖವಷ್ಟೇ ಗೊತ್ತು. ಒಂದೇ ಒಂದು ಪರ್ಸೆಂಟ್ ನೆಗೆಟಿವಿಟಿ ಇರಲಿಲ್ಲ. ಅಷ್ಟು ಒಳ್ಳೆಯ ಹುಡುಗ." ಎನ್ನುತ್ತಾರೆ ರಿಷಬ್.

ಇನ್ನು ರಾಕೇಶ್ ಪೂಜಾರಿ ನಿಧನರಾದಾಗ ರಿಷಬ್ ಶೆಟ್ಟಿ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಅದಕ್ಕೆ ಕಾರಣ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಹೊರಗಡೆ ಮಾಹಿತಿ ಬರಲು ಮೂರು ದಿನಗಳಾಗುತ್ತಿತ್ತು ಎಂದಿದ್ದಾರೆ. "ನನಗೆ ಹೊರಗಡೆ ಏನಾಗುತ್ತಿದೆ ಅನ್ನೋ ಸುದ್ದಿ ಸಿಗುತ್ತಿತ್ತು. ಆದರೆ ಮೂರು ದಿನಗಳಾದ್ಮೇಲೆ ಬರುತ್ತಿತ್ತು. ಯಾಕಂದ್ರೆ ನಾವು ಶೂಟಿಂಗ್ ಮಾಡುತ್ತಿದ್ದ ಜಾಗದಲ್ಲಿ ನೆಟ್‌ವರ್ಕ್ ಇರಲಿಲ್ಲ. ಹೊರಗಡೆ ಏನು ಮಾತಾಡುತ್ತಿರೋ ಅದು ನಡೆದಿದ್ದಲ್ಲ. ನಿಜಕ್ಕೂ ಉಲ್ಟಾ ನಡೆದಿತ್ತು. ಕೆಲವು ಸನ್ನಿವೇಶಗಳಿಂದ ನಾನು ಹೊರಗೆ ಬಂದಿದ್ದಕ್ಕೆ ಆ ದೈವದ ಆಶೀರ್ವಾದವೇ ಕಾರಣ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

More from Filmibeat

English summary
Kantara Chapter 1: Rishab Shetty finally open up about Rakesh Poojari performance and his demise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X