'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ದೋಚಿದ್ದು ₹235 ಕೋಟಿ;ಸಿನಿಮಾ ನೋಡಿ ಹಿರಿ ಹಿರಿ ಹಿಗ್ಗಿದ ಅನುಪಮ್ ಖೇರ್
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ತೆರೆಕಂಡು ಜೋರಾಗಿ ಸದ್ದು ಮಾಡುತ್ತಿದೆ. ಮೊದಲ ದಿನದಿಂದಲೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದೆ. ಕಳೆದ ಮೂರು ದಿನಗಳಿಂದಲೂ ಗಲ್ಲಾಪಟ್ಟೆಗೆಯಲ್ಲಿ ಜಗ್ಗಲೇ ಇಲ್ಲ. ಹಾಗಂತ ಕಾಂತಾರ ಕೇವಲ ಭಾರತದಲ್ಲಷ್ಟೇ ಅಲ್ಲ. ವಿದೇಶದಲ್ಲೂ ರಿಲೀಸ್ ಆಗಿತ್ತು. ಅಲ್ಲಿಂದಲೂ ಉತ್ತಮ ಕಲೆಕ್ಷನ್ ಮಾಡಿದೆ.
ಮೂರು ವರ್ಷಗಳ ಹಿಂದೆ ತೆರೆಕಂಡಿದ್ದ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದಂತೆ ಪ್ರೀಕ್ವೆಲ್ ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಎಲ್ಲಾ ಭಾಷೆಯ ಜನರಿಗೂ ಇಷ್ಟ ಆಗುತ್ತಿದೆ. ಇದರೊಂದಿಗೆ ಬ್ಯಾಕ್ ಟು ಬ್ಯಾಕ್ ರಜೆಗಳು ಕೂಡ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಅದರಲ್ಲೂ ವೀಕೆಂಡ್‌ನಲ್ಲಿ ಈ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೊದಲ ಮೂರು ದಿನ ವಿಶ್ವದಾದ್ಯಂತ ಗೆದ್ದು ಬೀಗುತ್ತಿದೆ.

ಹೊಂಬಾಳೆ ಫಿಲ್ಮ್ಸ್ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ಮೆಗಾ ಹಿಟ್ ಆಗುವತ್ತ ಮುನ್ನುಗ್ಗುತ್ತಿದೆ. ಸದ್ಯ ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ, ಇನ್ನೊಂದು ವಾರದೊಳಗೆ ₹500 ಕೋಟಿ ಕ್ಲಬ್ ಸೇರುವ ಎಲ್ಲಾ ಲಕ್ಷಣಗಳು ಇವೆ. ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಅನೌನ್ಸ್ ಮಾಡಿದಂತೆ ಈ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ₹235 ಕೋಟಿ ಕಲೆಕ್ಷನ್ ಮಾಡಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಮತ್ತೊಂದು ದೊಡ್ಡ ಸಕ್ಸಸ್ ಎಂದೇ ಪರಿಗಣಿಸಲಾಗುತ್ತಿದೆ.
'ಕಾಂತಾರ ಚಾಪ್ಟರ್ 1' ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಬಿಗ್ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಸಿನಿಮಾ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 2 ರಂದು ರಿಲೀಸ್ ಆಗಿದ್ದ ಈ ಸಿನಿಮಾ ಅಕ್ಟೋಬರ್ 4ರವರೆಗೂ ಅಂದರೆ, ಮೂರು ದಿನಗಳ ಕಾಲ ಸಿನಿಮಾ ಬಾಕ್ಸಾಫೀಸ್ ಅನ್ನು ಶೇಕ್ ಮಾಡಿರೋದಂತೂ ನಿಜ.
ಇನ್ನೂ 'ಕಾಂತಾರ ಚಾಪ್ಟರ್ 1' ಸಿನಿಮಾ ತಾರೆಯರನ್ನೂ ಮೋಡಿ ಮಾಡಿದೆ. ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಬಾಲಿವುಡ್ ನಟ ಅನುಪಮ್ ಖೇರ್ 'ಕಾಂತಾರ ಚಾಪ್ಟರ್ 1' ನೋಡಿ ಮೂಕವಿಸ್ಮಿತರಾಗಿದ್ದಾರೆ. ತಾಯಿಯೊಂದಿಗೆ ಚಿತ್ರಮಂದಿರಕ್ಕೆ ಹೋಗಿ ಈ ಸಿನಿಮಾವನ್ನು ವೀಕ್ಷಿಸಿ ವಿಡಿಯೋ ಮೂಲಕ ರಿಷಬ್ ಶೆಟ್ಟಿ ಸಂದೇಶವನ್ನು ಕಳಿಸಿದ್ದಾರೆ.
Our hearts are full ❤️
— Hombale Films (@hombalefilms) October 5, 2025
Thank you so much @AnupamPKher sir.
So glad you and your family loved #KantaraChapter1. Your kind words mean a lot to us! #BlockbusterKantara in cinemas now 🔥#KantaraInCinemasNow #DivineBlockbusterKantara #KantaraEverywhere #Kantara @hombalefilms… pic.twitter.com/mX2U2PQYJ4
ಅನುಪಮ್ ಖೇರ್ ಮಾಡಿರುವ ವಿಡಿಯೋದಲ್ಲಿ "ನನ್ನ ಆತ್ಮೀಯರಾದ ರಿಷಬ್ ಶೆಟ್ಟಿಯವರೇ, ಈಗಷ್ಟೇ ಸಿನಿಮಾವನ್ನು ಕುಟುಂಬದೊಂದಿಗೆ ನೋಡಿದೆ. ನಮ್ಮ ಅಮ್ಮ, ನನ್ನ ಸಹೋದರ ಹಾಗೂ ಆತ್ಮೀಯರು ಇಲ್ಲಿದ್ದಾರೆ. ಸಿನಿಮಾ ಬಗ್ಗೆ ಒಂದು ಮಾತಿನಲ್ಲಿ ಹೇಳುವುದಾರೇ, ಸ್ಪೀಚ್‌ಲೆಸ್" ಎಂದು ಬಾಲಿವುಡ್ ಅನುಪಮ್ ಖೇರ್ ನಟ-ನಿರ್ದೇಶಕ ರಿಷಬ್ ಶೆಟ್ಟಿಯನ್ನು ಹಾಡಿ ಹೊಗಳಿದ್ದಾರೆ.
"ನನ್ನ ಅಮ್ಮನಿಗೆ ಸಿನಿಮಾ ಇಷ್ಟ ಆಗಿದೆ. ಈ ಸಿನಿಮಾವನ್ನು ನಂಬುವುದಕ್ಕೆ ಆಗುತ್ತಿಲ್ಲ. ಆದರೆ, ಸ್ಪೀಚ್‌ಲೆಸ್ ಅನ್ನೋದು ಒಳ್ಳೆಯ ಪದ ಎನ್ನಬಹುದು. ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದು ಬಾಲಿವುಡ್ ನಟ ಅನುಪಮ್ ಖೇರ್ ಹೇಳಿ ರಿಷಬ್ ಶೆಟ್ಟಿಯನ್ನು ಹೊಗಳಿದ್ದಾರೆ. ಇನ್ನು ಸಿನಿಮಾ ಎಲ್ಲೆಡೆ ಸಖತ್ ಆಗಿ ಪ್ರದರ್ಶನ ಕಾಣುತ್ತಿದೆ. ಇಂದು (ಅಕ್ಟೋಬರ್ 5) ಕೂಡ ಸಿನಿಮಾ ಬಹುತೇಕ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಭಾನುವಾರ ಕೂಡ 50 ರಿಂದ 60 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸಾಧ್ಯತೆಯಿದೆ.


Click it and Unblock the Notifications











