ನಿನ್ನ ಪ್ರತಿ ಹೆಜ್ಜೆಯಲ್ಲಿ ನನ್ನ ಪಾಲಿದೆ ಎನ್ನುತ್ತಲೇ ಅಶೋಕನ ಜೊತೆ ಹೊರಟ ಸಪ್ತಮಿ ಗೌಡ

'ಕಾಂತಾರ' ಬ್ಯೂಟಿ ಸಪ್ತಮಿ ಗೌಡ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮತ್ತೆ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸುತ್ತಿದ್ದಾರೆ. ಆ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಹೊಸ ಅಧ್ಯಾಯ ಆರಂಭ ಎನ್ನುತ್ತಿದ್ದಾರೆ ಸಪ್ತಮಿ ಗೌಡ. ಈಗಾಗಲೇ ಡಾಲಿ ಧನಂಜಯ್ ಜೊತೆನೂ ನಟಿಸುತ್ತಿರುವ 'ಕಾಂತಾರ' ಬ್ಯೂಟಿ ಮತ್ತೆ ಡಿ ಗ್ಲಾಮರ್ ಲುಕ್‌ನಲ್ಲಿ ಸೆಳೆಯುತ್ತಿದ್ದಾರೆ.

ಸತೀಶ್ ನೀನಾಸಂ ನಟಿಸುತ್ತಿರುವ 'ದಿ ರೈಸ್ ಆಫ್ ಅಶೋಕ' ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೇ ಸಿನಿಮಾದಲ್ಲಿ ಸಪ್ತಮಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ಟೀಮ್ ಸಪ್ತಮಿಯ ಫಸ್ಟ್‌ ಲುಕ್ ರಿಲೀಸ್ ಮಾಡಿದ್ದು, ಈ ನಟಿಯರ ಪಾತ್ರದ ಹೆಸರು ಅಂಬಿಕಾ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸತೀಶ್ ನೀನಾಸಂ ರಗಡ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Kantara fame Sapthami Gowda new movie The Rise of Ashoka with Sathish Ninasam poster out

ಅಂದ್ಹಾಗೆ, ವಿನೋದ್ ದೊಂಡಾಲೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾಗೆ ಮೊದಲ 'ಅಶೋಕ ಬ್ಲೇಡ್' ಅನ್ನುವ ಟೈಟಲ್ ಇಡಲಾಗಿತ್ತು. ಆದರೆ, ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ಬಳಿಕ ಸಿನಿಮಾದ ಟೈಟಲ್ ಅನ್ನು ಬದಲಾಯಿಸಲಾಯ್ತು. 'ಅಶೋಕ ಬ್ಲೇಡ್' ಬದಲು 'ಡಿ ರೈಸ್ ಆಫ್ ಅಶೋಕ' ಎಂದು ಇಟ್ಟು, ಸಿನಿಮಾದ ಚಿತ್ರೀಕರಣವನ್ನು ಮುಂದುವರೆಸಿದ್ದಾರೆ. ಇದೇ ಬೆನ್ನಲ್ಲೇ ಸಪ್ತಮಿ ಗೌಡ ಅವರ ಅಂಬಿಕಾ ಪಾತ್ರವನ್ನು ಪರಿಚಯಿಸಲಾಗಿದೆ.

ನಟಿ ಸಪ್ತಮಿ ಗೌಡ ಕೂಡ ಈ ಪಾತ್ರದ ಬಗ್ಗೆ ಥ್ರಿಲ್ ಆಗಿದ್ದಂತೆ ಕಾಣುತ್ತಿದೆ. ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ದಿ ರೈಸ್ ಆಫ್ ಅಶೋಕ' ಸಿನಿಮಾದ ಫೋಸ್ಟರ್ ಅನ್ನು ಹಂಚಿಕೊಂಡಿದ್ದು, ತಮ್ಮ ಪಾತ್ರದ ಬಗ್ಗೆ ಪವರ್‌ಫುಲ್ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅಶೋಕನಿಗೆ ಅಂಬಿಕಾ ಹೇಳಿದ ಸಾಲುಗಳನ್ನು ಪೋಸ್ಟರ್ ಜೊತೆಗೆ ಹಂಚಿಕೊಂಡಿದ್ದಾರೆ. "ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ.. ಒಂದು ನಿಂದಾದರೆ ಮತ್ತೊಂದು ನಂದು -ಅಂಬಿಕಾ" ಎಂಬ ಸಾಲುಗಳು ಅವರ ಪಾತ್ರದ ಬಗ್ಗೆ ಮಾತಾಡುತ್ತಿದೆ.

Take a Poll

ಇನ್ನು ಸತೀಶ್ ನೀನಾಸಂ ನಟಿಸುತ್ತಿರುವ ಈ ಸಿನಿಮಾ ಹಲವು ಅಡೆತಡೆಗಳನ್ನು ಎದುರಿಸಿ, ಸಿನಿಮಾ ಶೂಟಿಂಗ್ ಮುಗಿಸುವ ಹಂತಕ್ಕೆ ಬಂದಿದೆ. ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣಾಗಿದ್ದರು. ಶೇ.80ರಷ್ಟು ಸಿನಿಮಾದ ಚಿತ್ರೀಕಣ ಮುಗಿದಿತ್ತು. ಹೀಗಿರುವಾಗ ಸಿನಿಮಾ ಕಥೆಯೇನು ಅಂದುಕೊಳ್ಳುವಾಗಲೇ ಸತೀಶ್ ಅವರೇ ಸಿನಿಮಾವನ್ನು ಟೇಕಾಫ್ ಮಾಡಿದ್ದರು. 'ಅಶೋಕ ಬ್ಲೇಡ್' ಅನ್ನುವ ಟೈಟಲ್ ಅನ್ನು 'ದಿ ರೈಸ್ ಆಫ್ ಅಶೋಕ' ಅಂತ ಬದಲಾಯಿಸಿದ್ದರು.

ಇತ್ತೀಚೆಗೆ 'ದಿ ರೈಸ್ ಆಫ್ ಅಶೋಕ' ಸಿನಿಮಾದ ಸತೀಶ್ ನೀನಾಸಂ ಪಾತ್ರದ ಪೋಸ್ಟ್‌ ರಿಲೀಸ್ ಮಾಡಲಾಗಿತ್ತು. ರಕ್ತ ಅಂಟಿಕೊಂಡಿದ್ದ ಮಚ್ಚು ಅನ್ನು ಹಿಡಿದು ರಗಡ್ ಲುಕ್‌ನಲ್ಲಿ ಮಾಸ್ ಫೀಲ್ ಕೊಟ್ಟಿದ್ದರು. ಪೋಸ್ಟರ್ ನೋಡಿದವರು ಈ ಸಿನಿಮಾ ಕೂಡ 80, 90ರ ದಶಕದ ಕತೆಯನ್ನು ಹೇಳುವುದಕ್ಕೆ ಹೊರಟಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಇದೇ ಬೆನ್ನಲ್ಲೇ ನಾಯಕ ಬಂಡಾಯ ಎದ್ದೇಳುವ ಕತೆ ಎಂದೂ ಹೇಳಲಾಗಿತ್ತು. ಈ ಸಿನಿಮಾದಲ್ಲಿ ಸತೀಶ್ ಹಾಗೂ ಸಪ್ತಮಿಗೌಡ ಲುಕ್ ಹಾಗೂ ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ. ಈ ಜೋಡಿ ಗಂಭೀರ ಕತೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಬಹುದೆಂಬ ನಿರೀಕ್ಷೆಯಿದೆ.

ಇನ್ನು ವಿನೋದ್ ದೊಂಡಾಲೆಯವರು ಬಿಟ್ಟು ಹೋದ ಇನ್ನು ಶೇ.20ರಷ್ಟು ಸಿನಿಮಾವನ್ನು 'ಚಮಕ್', 'ಕ್ಷೇತ್ರಪತಿ', 'ಅವತಾರ ಪುರುಷ'ದಂತಹ ಸಿನಿಮಾಗಳಲ್ಲಿ ಸಂಕಲನಗಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲೂ ಬಿಡುಗಡೆಯಾಗಲಿದೆ. ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡ ಹಣ ಹೂಡಿಕೆ ಮಾಡಿದ್ದು, ಇದೇ ವರ್ಷ ರಿಲೀಸ್ ಆಗಲಿದೆ.

More from Filmibeat

English summary
Kantara actress Sapthami Gowda new movie The Rise of Ashoka with Sathish Ninasam poster out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X