ಕಾಂತಾರ ಗುರುವನ ಹೊಸ ಸಿನಿಮಾ 'ನೆತ್ತರೆಕೆರೆ' ಸೆಟ್ಟಿಗೆ ಬೆಂಕಿ: ಮಂಗಳೂರಿನಲ್ಲಿ ಘಟನೆ
Mangaluru: 'ಕಾಂತಾರ' ಸಿನಿಮಾದಲ್ಲಿ ಗುರುವ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಸ್ವರಾಜ್ ಶೆಟ್ಟಿ ತುಳು ಸಿನಿಮಾದಲ್ಲಿ ನಟಿಸುತ್ತಿದ್ದರು. ಬಹುಭಾಷಾ ನಟ ಸುಮನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ನೆತ್ತರೆಕೆರೆ' ಅನ್ನುವ ಸಿನಿಮಾದ ಶೂಟಿಂಗ್ ಮಂಗಳೂರಿನಲ್ಲಿ ನಡೆಯುತ್ತಿದೆ. ಈ ಸಿನಿಮಾದ ಶೂಟಿಂಗ್‌ಗಾಗಿ ಬಾರ್ ಸೆಟ್ ಅನ್ನು ಹಾಕಲಾಗಿತ್ತು. ಇಂದು (ಜನವರಿ 28) ಈ ಸಿನಿಮಾದ ಸೆಟ್ಟಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
'ನೆತ್ತರೆಕೆರೆ' ಸಿನಿಮಾವನ್ನು ಕನ್ನಡ ಹಾಗೂ ತುಳು ಎರಡೂ ಭಾಷೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಸಿನಿಮಾದ ದೃಶ್ಯವೊಂದರಕ್ಕಾಗಿ ಮಂಗಳೂರಿನ ಹೊರವಲಯದಲ್ಲಿ ಬಾರ್ ಸೆಟ್ ಒಂದನ್ನು ಹಾಕಲಾಗಿತ್ತು. ಇದೇ ಸೆಟ್‌ನಲ್ಲಿ ದಿಢೀರನೇ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಮಂಗಳೂರಿನ ಹೊರ ವಲಯದಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಹೀಗಾಗಿ ಅಕ್ಕ ಪಕ್ಕ ಮನೆಗಳು ಇಲ್ಲದೆ ಇದ್ದಿದ್ದರಿಂದ ಆತಂಕ ಪಡಬೇಕಾಗಿರಲಿಲ್ಲ. ಆದರೆ, ಚಿತ್ರತಂಡ ಹಾಕಿದ ಬಾರ್‌ನ ಒಂದು ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನಲಾಗಿದೆ. ಮೊದಲು ಬಾರ್ ಸೆಟ್ಟಿನ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದನ್ನು ಟ್ಯಾಂಕರ್‌ನಲ್ಲಿ ನೀರು ತಂದು ಆರಿಸಲಾಗಿದೆ.


Click it and Unblock the Notifications











