'ಕರಳೆ' ಪೋಸ್ಟರ್‌ ವಿವಾದ; ಅದರಲ್ಲಿರೋದು ನಾನಲ್ಲ ಅಂತ ಹೀರೋಯಿನ್, ಒಪ್ಪಿದ ಡೈರೆಕ್ಟರ್.. ಮುಂದೇನಾಯ್ತು?

ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾ 'ಕರಳೆ' ಪೋಸ್ಟರ್ ವಿವಾದಕ್ಕೆ ಎಬ್ಬಿಸಿದೆ. ಈ ಪೋಸ್ಟರ್ ಸಂಬಂಧ ಸಿನಿಮಾದ ನಾಯಕಿ ಕುಂಕುಮ್ ಹಾಗೂ ನಿರ್ದೇಶಕ ಅವಿರಾಮ್ ಕಂಠೀರವ ನಡುವೆ ವೈಮನಸ್ಸು ಎದ್ದಿದೆ. ಇದು ಸುದ್ದಿ ವಾಹಿನಿಯಲ್ಲಿ ಚರ್ಚೆಯಾಗುವ ಮಟ್ಟಕ್ಕೂ ಹೋಗಿದೆ. ಇಂತಹ ವಿವಾದಗಳು ಕನ್ನಡ ಚಿತ್ರರಂಗಕ್ಕೆ ಹೊಸತೇನು ಅಲ್ಲ. ಕೊನೆಗೆ ಅದು ಗಣ್ಯರ ಮಧ್ಯಸ್ಥಿಕೆಯಲ್ಲಿ ಬಗೆಹರಿದಿದೆ.

ಆದರೆ, ಸಿನಿಮಾ ವಿವಾದಗಳು ಎದ್ದಾಗ, ಇದು ಅಸಲಿನಾ? ಇಲ್ಲ ಪ್ರಚಾರಕ್ಕೊಸ್ಕರ ಮಾಡಿದ್ದಾ? ಅನ್ನೋ ಪ್ರಶ್ನೆ ಎದ್ದೇಳುತ್ತೆ. 'ಕರಳೆ' ಪೋಸ್ಟರ್ ವಿವಾದ ಕೂಡ ಇಂತಹದ್ದೇ ಒಂದು ಅನುಮಾನವನ್ನಂತೂ ಹುಟ್ಟಾಕಿದೆ. ಅದನ್ನು ಪಕ್ಕಕ್ಕಿಟ್ಟು ವಿವಾದ ಏನು ಅಂತ ನೋಡೋಣ.

Karale movie controversy actress Kumkum allegation against director Aviram Kanteerava

'ಕನ್ನಡ ದೇಶದೊಳ್' ಹಾಗೂ 'ಕಲಿವೀರ'ದಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಅವಿರಾಮ್ ಕಂಠೀರವ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದರು. ಅದುವೇ 'ಕರಳೆ' ಇದು ನಿರ್ದೇಶಕರೇ ಹೇಳಿಕೊಂಡಂತೆ ಕನ್ನಡ ಹಾಗೂ ಚೈನೀಸ್ ಎರಡೂ ಭಾಷೆಯಲ್ಲಿ ನಿರ್ಮಾಣ ಆಗುತ್ತಿದ್ದು, ಬಿಡುಗಡೆ ಕೂಡ ಆಗಲಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕುಂಕುಮ್ ನಟಿಸುತ್ತಿದ್ದಾರೆ. ಸದ್ಯ ನಿರ್ದೇಶಕರ ಮೇಲೆ ಈ ನಟಿ ಗಂಭೀರ ಆರೋಪ ಮಾಡಿದ್ದಾರೆ.

ನಾಲ್ಕು ದಿನಗಳ ಹಿಂದೆ ಕುಂಕುಮ್ 'ಕರಳೆ' ಪೋಸ್ಟರ್ ಬಗ್ಗೆ ತಕರಾರು ಎತ್ತಿದ್ದರು. ನಿರ್ದೇಶಕರು ರಿಲೀಸ್ ಮಾಡಿರುವ ಸಿನಿಮಾದ ಪೋಸ್ಟರ್‌ನಲ್ಲಿ ಇರುವುದು ನಾನಲ್ಲ. ಈ ಪೋಸ್ಟರ್ ಹೊರ ಬಿದ್ದ ಬಳಿಕ ಕೆಲವರು ಕೆಟ್ಟದಾಗಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ, ನಿರ್ದೇಶಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಸರಿಯಾದ ಉತ್ತರ ಕೊಡುತ್ತಿಲ್ಲ ಎಂದು ವಿಡಿಯೋ ಮಾಡಿದ್ದರು. ಆ ಬಳಿಕ 'ಕರಳೆ' ಪೋಸ್ಟರ್ ವಿವಾದಕ್ಕೆ ಸಿಲುಕಿದೆ.

ಅಷ್ಟಕ್ಕೂ ಪೋಸ್ಟರ್‌ನಲ್ಲಿ ಆಗ ತಾನೆ ಜನ್ಮ ನೀಡಿದ ಮಹಿಳೆಯ ಮೇಲೆ ಮಗುವನ್ನು ಮಲಗಿಸಿರುವ ಪೋಸ್ಟರ್. ಇದರಲ್ಲಿ ಇರುವುದು ನಟಿ ಕುಂಕುಮ್ ಅಂತಲೇ ಅವರ ಆತ್ಮೀಯರು, ಸಂಬಂಧಿಗಳು ನಂಬಿದ್ದು, ಪ್ರಶ್ನೆಗಳನ್ನು ಮಾಡುತ್ತಿದ್ದಾರಂತೆ. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಶೇರ್ ಆದಲ್ಲಿಂದ ಕೆಟ್ಟ ಕಮೆಂಟ್‌ಗಳು ಬರುವುದಕ್ಕೆ ಆರಂಭ ಆಗಿದ್ದು, ನಿರ್ದೇಶಕರು ಈ ಬೋಲ್ಡ್ ಪೋಸ್ಟರ್‌ನಲ್ಲಿ ಇರುವುದು ತಾನಲ್ಲ ಅಂತ ಕ್ಲಾರಿಟಿ ಕೊಡಬೇಕು. ಇಲ್ಲದೇ ಹೋದಲ್ಲಿ , ಫಿಲ್ಮ್ ಚೇಂಬರ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.

ಇತ್ತ ನಿರ್ದೇಶಕರು ನಾಯಕಿಯ ಮಾತುಗಳಿಗೆ ಉತ್ತರ ಕೊಡುತ್ತಿಲ್ಲ. ಆ ಪೋಸ್ಟರ್‌ನಲ್ಲಿ ಇರುವುದು ನಾಯಕಿ ಕುಂಕುಮ್ ಅಲ್ಲ ಅಂತ ಹೇಳುತ್ತಿಲ್ಲ. ಸಿನಿಮಾ ಮಾಡುವಾಗಲೇ ಬೋಲ್ಡ್ ಆಗಿರುತ್ತೆ ಅಂತ ಅಗ್ರಿಮೆಂಟ್ ಆಗಿದೆ. ಫಿಲ್ಮ್ ಚೇಂಬರ್‌ನಲ್ಲಿಯೇ ಈ ವಿವಾದ ಬಗೆ ಹರಿಯಲಿ ಎಂದು ಹೇಳುತ್ತಿದ್ದಾರೆ. ಸದ್ಯ 'ಕರಳೆ' ಬೋಲ್ಡ್ ಪೋಸ್ಟರ್‌ಗೆ ಕ್ಲಾರಿಟಿ ಸಿಗೋವರೆಗೂ ನಟಿಸಲ್ಲ ಅಂತ ನಟಿ. ಅತ್ತ ವಿವಾದ ಫಿಲ್ಮ್ ಚೇಂಬರ್‌ನಲ್ಲಿಯೇ ಬಗೆ ಹರಿಯಲಿ ಅಂತ ನಿರ್ದೇಶಕ. ಅಷ್ಟೇ ಅಲ್ಲದೆ ಇನ್ನೂ ಬೋಲ್ಡ್ ಪೋಸ್ಟರ್ ರಿಲೀಸ್ ಆಗುತ್ತೆ ಅಂತ ನಿರ್ದೇಶಕರು ಹೇಳಿದ್ದಾರಂತೆ. ಅದು ನಾಯಕಿಯ ಎದೆ ಬಡಿತ ಹೆಚ್ಚು ಮಾಡುತ್ತೆ. ಈ ವಿವಾದ ಮುಂದೇನಾಗುತ್ತೋ ಕಾಯಬೇಕಷ್ಟೇ.

'ಕರಳೆ' ಪೋಸ್ಟರ್ ರಿಲೀಸ್ ಆಗಿ ಹೆಚ್ಚು ಕಡಿಮೆ ಒಂದು ತಿಂಗಳು ಆಗಿದೆ. ಆಗಲೇ ಯಾಕೆ ಪ್ರತಿಭಟಿಸಲಿಲ್ಲ. ಒಂದು ತಿಂಗಳ ಬಳಿಕ ಯಾಕೆ ವಿವಾದ ಎಬ್ಬಿಸಿದ್ದಾರೆ ಅನ್ನೋದು ಮೊದಲ ಪ್ರಶ್ನೆ. ಇನ್ನು ನಿರ್ದೇಶಕರು ಈ ವಿವಾದವನ್ನು ನೇರವಾಗಿ ಈ ಪೋಸ್ಟರ್‌ನಲ್ಲಿ ಇರೋದು ನಾಯಕಿ ಕುಂಕುಮ್ ಹೌದೋ ಅಲ್ಲವೋ ಅಂತ ಹೇಳಿದರೆ ಮುಗೀತು. ಆದರೆ, ಯಾಕೆ ಕ್ಲಾರಿಟಿ ಕೊಡುತ್ತಿಲ್ಲ ಅನ್ನೋದು ಎರಡನೇ ಪ್ರಶ್ನೆ. ಇವೆಲ್ಲವನ್ನೂ ನೋಡಿದರೆ, ಈ ಹಿಂದೆ ಕೆಲವು ಸಿನಿಮಾಗಳು ಪಬ್ಲಿಸಿಟಿ ಗಿಮಿಕ್ ಮಾಡಿದಂತೆ 'ಕರಳೆ' ತಂಡ ಕೂಡ ಮಾಡುತ್ತಿದೆಯೇ? ಸದ್ಯಕ್ಕೆ ಇದು ಸಿನಿ ಪ್ರಿಯರ ಮುಂದಿರುವ ಪ್ರಶ್ನೆ.

More from Filmibeat

English summary
Karale movie actress Kumkum allegation against director Aviram Kanteerava;
Read more about: controversy actress sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X