"ಒಂದು ಸೆರಗು ಜಾರುವ ಸೀನ್ ಇದೆ ಅಷ್ಟೇ,ಬೋಲ್ಡ್ ಸೀನ್‌ನಲ್ಲಿ ನಟಿಸಿಲ್ಲ"; 'ಕರಳೆ' ನಾಯಕಿ ಕುಂಕುಮ್

ಕಳೆದ ಕೆಲವು ದಿನಗಳಿಂದ 'ಕರಳೆ' ಸಿನಿಮಾದ ಪೋಸ್ಟರ್ ವಿವಾದವನ್ನು ಹುಟ್ಟಾಕಿದೆ. ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಶೂಟಿಂಗ್ ಮುಗಿಯುವುದಕ್ಕೂ ಮುನ್ನವೇ ಕಾಂಟ್ರವರ್ಸಿಯನ್ನು ಮೈ ಮೇಲೆ ಎಳೆದುಕೊಂಡಿದೆ. ಇತ್ತೀಚೆಗೆ ನಿರ್ದೇಶಕರು ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು. ಅದರಲ್ಲಿ ಬೆತ್ತಲೆಯಾಗಿರುವ ಮಹಿಳೆಯ ಮೇಲೆ ಮಗು ಮಲಗಿದೆ. ಈ ಪೋಸ್ಟರ್ ವಿರುದ್ಧ ನಾಯಕಿ ನಟಿ ಕುಂಕುಮ್ ಆಕ್ಷೇಪ ವ್ಯಕ್ತ ಪಡಿಸಿದ್ದರು.

ಈ ಪೋಸ್ಟರ್‌ನಲ್ಲಿ ಇರುವುದು ನಾನಲ್ಲ. ಬೇರೆಯವರನ್ನು ಇಟ್ಟುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. ಆ ಬಗ್ಗೆ ನಿರ್ದೇಶಕರು ಕ್ಲಾರಿಟಿ ಕೊಡುತ್ತಿಲ್ಲ ಎಂದು ಆರೋಪಿಸಿದ್ದರು. ಈ ಸಂಬಂಧ ನಟಿ ಕುಂಕುಮ್ ಹಾಗೂ ನಿರ್ದೇಶಕ ಅವಿರಾಮ್ ಕಂಠೀರವ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಹಾಗೇ ಈ ನಟಿಯ ಬೋಲ್ಡ್ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವುದಾಗಿ ಕೇಳಿ ಕೊಟ್ಟಿದ್ದು, ಅಂತಹ ದೃಶ್ಯಗಳಲ್ಲಿ ನಾನು ನಟಿಸಿಲ್ಲ ಎನ್ನುತ್ತಿದ್ದಾರೆ ಕುಂಕುಮ್. ಈ ವಿವಾದದ ಬಗ್ಗೆ ಕುಂಕುಮ್ ಫಿಲ್ಮಿ ಬೀಟ್ ಕನ್ನಡದ ಜೊತೆ ಮಾತಾಡಿದ್ದು, ಈ ಪೋಸ್ಟರ್‌ನಲ್ಲಿ ಬೆತ್ತಲಾಗಿದ್ದು ನಾನಲ್ಲ. ಒಬ್ಬರು ಮಾಡೆಲ್ ಎಂದಿದ್ದಾರೆ. ಈ ಸಂದರ್ಶನದ ಒಂದು ಝಲಕ್ ಇಲ್ಲಿದೆ.

Karale movie poster controversy kumkum clarifies that the woman in the poster is not me but model

ಈ ಪೋಸ್ಟರ್ ಬಗ್ಗೆ ಗೊತ್ತಿರಲಿಲ್ಲ

"ಮಹಿಳಾ ದಿನಾಚರಣೆ ಒಂದು ಪೋಸ್ಟರ್ ಅನ್ನು ರಿಲೀಸ್ ಮಾಡಿದ್ರು. ಈತರ ಪೋಸ್ಟರ್ ರಿಲೀಸ್ ಮಾಡುತ್ತಾರೆ ಅನ್ನೋದು ನನಗೆ ಗೊತ್ತಿರಲಿಲ್ಲ. ಅವತ್ತೇ ನಾನು ಫೋನ್ ಮಾಡಿ ಏನಿದು ನೀವು ಈತರ ಪೋಸ್ಟರ್ ರಿಲೀಸ್ ಮಾಡಿದ್ದೀರಲ್ಲ ಅದಕ್ಕೆ ಕ್ಲಾರಿಟಿ ಕೊಡಿ. ಆ ಹುಡುಗಿ ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿಲ್ಲ ಅಂತ ಹೇಳಿ ಅಂದೆ. ಅದಕ್ಕೆ ಅವರು ಕೊಡೋಣ ಇರಿ. ನನಗೆ ಏನು ಮಾಡಬೇಕು ಅಂತ ಗೊತ್ತು ಅಂದರು. ಆಮೇಲೆ ನ್ಯೂಸ್ ಚಾನೆಲ್‌ಗೆ ಹೋಗಿ ಆ ಹುಡುಗಿನೇ ಬೇರೆ. ನಮ್ಮ ಸಿನಿಮಾದ ಹೀರೋಯಿನ್ ಬೇರೆ ಅಂತ ಹೇಳಿದರು. ಯಾಕೆ ಅಷ್ಟು ದಿನ ಬೇಕಾಯ್ತು. ನನಗೆ ಬರುತ್ತಿದ್ದ ಕಮೆಂಟ್ಸ್ , ಕಾಲ್‌ಗಳು, ಮೆಸೇಜ್ ಆಗಿರಬಹುದು ಅದಕ್ಕೆ ಉತ್ತರ ಕೊಡುವವರು ಯಾರು?" ಎಂದು ಕರಳೆ ಸಿನಿಮಾದ ನಾಯಕಿ ಕುಂಕುಮ್ ಪ್ರಶ್ನೆ ಮಾಡಿದ್ದಾರೆ.

ಬೋಲ್ಡ್ ಪೋಸ್ಟರ್‌ಗೆ ನನ್ನ ಒಪ್ಪಿಗೆ ಇಲ್ಲ

"ಈ ಪೋಸ್ಟರ್ ಅನ್ನು ನೋಡುವಾಗ ತುಂಬಾ ರೀತಿಯಾದಂತಹ ಆಲೋಚನೆಗಳು ಬರುತ್ತೆ. ಯಾಕೆ ರೀತಿಯಿದೆ. ಅದರ ಮೀನಿಂಗ್ ಎಷ್ಟು ಆಳವಾಗಿದೆ ಅನ್ನೋ ಆಲೋಚನೆ ಬರುತ್ತೆ. ಈಗ ಸಾಮಾನ್ಯ ಜನರು ಏನಂತ ಅಂದುಕೊಳ್ಳುತ್ತಾರೆ. ಯಾಕೆ ಈ ರೀತಿ ಬೆತ್ತಲೆ ಹುಡುಗಿಯನ್ನು ಮಲಗಿಸಿದ್ದಾರೆ. ಅದರ ಮೇಲೆ ಮಗು ಮಲಗಿಸಿದ್ದಾರೆ. ಯಾಕೆ ಈ ರೀತಿ ಪೋಸ್ಟರ್ ಅಂತ ಚೆಕ್ ಮಾಡುತ್ತಾರೆ. ಇನ್ನು ನನ್ನ ಫಸ್ಟ್ ಲುಕ್ ರಿಲೀಸ್ ಮಾಡುತ್ತೇನೆ ಅಂದರು. ಅದೂ ಬೋಲ್ಡ್ ಆಗಿಯೇ ಇರುತ್ತೆ ಅಂದರು. ಇವರ ಬೋಲ್ಡ್‌ ಹೇಗಿರುತ್ತೆ ಅನ್ನೋದು ಪೋಸ್ಟರ್ ಮೂಲಕ ನೋಡಿದ್ದೀವಿ. ನನ್ನ ಒಪ್ಪಿಗೆ ಇಲ್ಲದೆ ಬೋಲ್ಡ್ ಪೋಸ್ಟರ್ ಅನ್ನು ಯಾವ ರೀತಿ ಮಾಡುತ್ತಾರೆ ಅನ್ನೋದು ನನ್ನ ಪ್ರಶ್ನೆ. ಅದಕ್ಕೆ ಅವರ ಕಡೆಯಿಂದ ಯಾವುದೇ ಉತ್ತರವಿಲ್ಲ." ಎನ್ನುತ್ತಾರೆ.

Karale movie poster controversy kumkum clarifies that the woman in the poster is not me but model

ನಿಮಗ್ಯಾಕೆ ಹೇಳಬೇಕು ಅಂತಾರೆ

"ನೀವು ಸಿನಿಮಾದ ಹೀರೋಯಿನ್. ನಿಮಗೆ ನಾನು ಯಾಕೆ ಹೇಳಬೇಕು. ಆಕ್ಟ್ ಮಾಡಿ, ದುಡ್ಡು ತಗೊಳ್ಳಿ ಹೋಗಿ. ಸಿನಿಮಾ ಪೋಸ್ಟರ್ ಎಲ್ಲಾ ನಮಗೆ ಬಿಟ್ಟಿದ್ದು. ಅದು ನಾವು ಏನು ಮಾಡಬೇಕು ಅಂತ ಗೊತ್ತು. ಅದನ್ನು ನಾನು ರಿಲೀಸ್ ಮಾಡಿಕೊಳ್ಳುತ್ತೇವೆ ಅಂತಾರೆ. ಪೋಸ್ಟರ್ ರಿಲೀಸ್ ಆದಾಗಲೇ ಕೇಳಿದ್ದೆ. ಅವರ ಕಡೆಯಿಂದ ಸರಿಯಾದ ರೆಸ್ಪಾನ್ಸ್ ಬಂದಿಲ್ಲ. ಹೀಗೆಲ್ಲ ಆಗಬಾರದು ಅಂತ ತುಂಬಾ ದಿನ ಅವರಿಗೆ ಸಂಪರ್ಕ ಮಾಡುತ್ತಲೇ ಇದ್ದೆ. ಆದರೆ, ಅವರಿಂದ ಪ್ರತಿಕ್ರಿಯೆ ಸಿಕ್ಕಿಲ್ಲ." ಎನ್ನುತ್ತಾರೆ ನಟಿ ಕುಂಕುಮ್.

ನನ್ನ ಒಪ್ಪಿಗೆ ಇಲ್ಲ

"ಕರಳೆ ಪೋಸ್ಟರ್ ಬಗ್ಗೆ ಬಂದು ಕ್ಲಾರಿಟಿ ಕೊಟ್ಟಿದ್ದು ಆಗಿದೆ. ಆ ಪೋಸ್ಟರ್‌ನಲ್ಲಿ ಇರುವುದು ನಾನಲ್ಲ ಅಂತ. ಅದು ಆಯ್ತು. ಆದರೂ ಸಮಸ್ಯೆ ಏನು ಕಮ್ಮಿಯಾಗಿಲ್ಲ. ಈ ಫಸ್ಟ್ ಲುಕ್ ರಿಲೀಸ್ ಮಾಡುತ್ತಾರೆ. ಅದು ಇನ್ನೂ ಬೋಲ್ಡ್ ಆಗಿರುತ್ತೆ ಅಂದಾಗ, ಅದರಲ್ಲಿ ಕಾಣಿಸಿಕೊಳ್ಳುವುದು ನಾನಾಗಿರುತ್ತೇನೆ. ಸೋ ನನ್ನ ಒಪ್ಪಿಗೆ ಇಲ್ಲದೆ, ನನಗೆ ತೋರಿಸದೇ ಅವರು ಹೇಗೆ ರಿಲೀಸ್ ಮಾಡುತ್ತಾರೆ." ಎಂದು ಕುಂಕುಮ್ ಪ್ರಶ್ನೆ ಮಾಡಿದ್ದಾರೆ.

ಒಂದು ಸೆರಗು ಬೀಳುವ ಸೀನ್ ಇದೆ ಅಷ್ಟೇ

"ಕರಳೆ ರಿಯಲ್ ಸ್ಟೋರಿ. ಬೋಲ್ಡ್ ಆಗಿರುತ್ತೆ ಅಂತ ಹೇಳಿದ್ದರು. ಆದರೆ, ಯಾವ ರೀತಿ ಬೋಲ್ಡ್ ಅಂತಾನೂ ಹೇಳಿದ್ದರು. ಒಂದಿಷ್ಟು ಬ್ಲಡ್ ಇರಬಹುದು ಅಂದಿದ್ದರು. ಅಗ್ರಿಮೆಂಟ್‌ನಲ್ಲೂ ಕೂಡ ಹಾಗೇ ಇತ್ತು. ನಿಮ್ಮನ್ನು ಎಕ್ಸ್‌ಪೋಸ್ ಮಾಡುತ್ತೇವೆ. ನಿಮ್ಮನ್ನು ಹೀಗೆ ತೋರಿಸುತ್ತೇವೆ. ಹಾಗೆ ತೋರಿಸುತ್ತೇವೆ ಅನ್ನೋದನ್ನು ಹೇಳಿರಲಿಲ್ಲ. ಈಗ ಸಿನಿಮಾ 70 ರಿಂದ 80ರಷ್ಟು ಆಗಿದೆ. ಅದರಲ್ಲಿ ಅಂತಹದ್ದು ಯಾವುದೂ ಬೋಲ್ಡ್ ಆಗಿಲ್ಲ. ಒಂದರಲ್ಲಿ ಮಾತ್ರ ನನ್ನ ಸೆರಗು ಬಿದ್ದಿದೆ. ಎಂಟರಿಂದ ಒಂಬತ್ತು ತಿಂಗಳು ಪ್ರೆಗ್ನೆಂಟ್ ಇರುವ ದೃಶ್ಯ. ಅದು ಹೊಟ್ಟೆ ಕಾಣಿಸಲಿ ಅಂತ ಸೆರಗು ಬೀಳಿಸಿದ್ದಾರೆ. ಅದರಲ್ಲಿ ಯಾವುದನ್ನಾದರೂ ಸ್ಟಿಲ್ ಫೋಟೊಗ್ರಾಫರ್ ತೆಗೆದುಕೊಂಡಿರಬಹುದು ಅನ್ನೋದು ನನ್ನ ಅನಿಸಿಕೆ. ಅದು ಬಿಟ್ಟರೆ ಯಾವುದೂ ಇಲ್ಲ." ಎನ್ನುತ್ತಾರೆ ನಟಿ ಕುಂಕುಮ್.


ಎಐ ಅಲ್ಲ ಪೋಸ್ಟರ್‌ನಲ್ಲಿ ಇರೋದು ಮಾಡೆಲ್

"ಅದು ಎಐ ತಂತ್ರಜ್ಞಾನದಿಂದ ಮಾಡಿದ್ದು ಅಲ್ಲ. ಒಬ್ಬ ಮಾಡೆಲ್‌ ಅನ್ನು ಕರೆದುಕೊಂಡು ಬಂದು ಫೋಟೋಶೂಟ್ ಮಾಡಿಸಿದ್ದಾರಂತೆ. ಅದು ನನಗೆ ರಿಲೀಸ್ ಆದ್ಮೇಲೆ ಗೊತ್ತಾಯ್ತು. ಪೋಸ್ಟರ್ ರಿಲೀಸ್ ಮಾಡಲಿ. ಆ ಪೋಸ್ಟರ್ ಇದಕ್ಕಿಂತ ಬೋಲ್ಡ್ ಆಗಿ ಇದೆ ಅಂದರೆ, ಸರಿಯಾದ ಕಾರಣ ಕೊಡಬೇಕು. ಇಲ್ಲಾ ಅಂದರೆ, ಕುಂಕುಮ್ ಅನ್ನೋರು ಇದೇ ಬ್ರ್ಯಾಂಡ್‌ನ ಒಂದು ಸಿನಿಮಾ ಮಾಡುತ್ತಾರೆ ಅನ್ನೋದು ಆಗಿ ಹೋಗುತ್ತೆ. ಅದು ನನಗೆ ಇಷ್ಟ ಇಲ್ಲ. ಅವರು ಏನೇ ಮಾಡಿದರೂ ನಾನು ಸಪೋರ್ಟ್‌ಗೆ ನಿಂತುಕೊಳ್ಳುತ್ತೇನೆ." ಎನ್ನುತ್ತಾರೆ ನಟಿ ಕುಂಕುಮ್.

ಚೇಂಬರ್‌ನಲ್ಲಿ ದೂರು

"ಚೇಂಬರ್‌ನವರು ಏನು ಹೇಳುತ್ತಿದ್ದಾರೆ ಅಂದರೆ, ಅವರ ಸೀಲ್ ಇಲ್ಲ ಇಲ್ಲಿ. ಅದಕ್ಕೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ ಅಂತಿದ್ದಾರೆ. ಹಾಗೇ ಆಕ್ಷನ್ ತಗೋತೀನಿ ಅಂತಾನೂ ಹೇಳಿದ್ದಾರೆ. ಚೇಂಬರ್‌ಗೆ ಕರೆಸುತ್ತೇನೆ ಅಂತಾನೂ ಹೇಳಿದ್ದಾರೆ. ಇಲ್ಲಿಗೆ ಬಂದು ಇವರ ಮುಂದೆನಾದರೂ ಕ್ಲಾರಿಟಿ ಕೊಟ್ಟರೆ, ನನಗೆ ತುಂಬಾನೇ ಖುಷಿ. ಇನ್ನೂ ಸಿನಿಮಾದ ಶೂಟಿಂಗ್ ಬಾಕಿಯಿದೆ. ತುಂಬಾ ಚೆನ್ನಾಗಿ ನಡೆಸಿಕೊಂಡು ಹೋಗಬಹುದು. ಇಲ್ಲಾ ಅಂದರೆ, ನಾನು ದೂರನ್ನು ಕೊಡಲೇಬೇಕಾಗುತ್ತೆ. ಅದರ ಮೇಲೆ ಅವರ ಇಷ್ಟ."

ಶೂಟಿಂಗ್‌ಗೆ ಹೋಗ್ಬೇಕಾ?

"70 ಪರ್ಸೆಂಟ್‌ ಅಷ್ಟು ಸಿನಿಮಾ ಶೂಟ್ ಆಗಿದೆ. ಬೋಲ್ಡ್ ಅಂತ ಬಂದಾಗ ಒಂದೇ ಒಂದು ಸೀನ್‌ನಲ್ಲಿ ತುಂಬು ಗರ್ಭಿಣಿ ಆಗಿರುತ್ತೇನೆ. ಆಗ ಸೆರಗು ಬಿದ್ದಿರುತ್ತೆ. ಅದು ಬಿಟ್ಟರೆ, ಇನ್ಯಾವುದರಲ್ಲೂ ಬೋಲ್ಡ್. ಮುಜುಗರ ಆಗುತ್ತೆ ಸೀನ್ ನೋಡುವುದಕ್ಕೆ ಅನ್ನುವಂತಹದ್ದು ಯಾವುದೂ ಇಲ್ಲ. ಮುಂದಿನ ಹೆಜ್ಜೆ ಏನೂ ಅನ್ನೋದು ನನಗೂ ಗೊತ್ತಿಲ್ಲ. ಏನೇ ಆದರೂ ನಾನು ಸಿನಿಮಾದಲ್ಲಿ, ಪೋಸ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಏನೇ ಆದರೂ ನನಗೆ ಎಫೆಕ್ಟ್. ಹೀಗೆ ಮುಂದುವರೆದರೆ, ನಾನು ಶೂಟಿಂಗ್‌ಗೆ ಹೋಗಬೇಕಾ? ಬೇಡ್ವಾ? ಅನ್ನೋದನ್ನು ಯೋಚನೆ ಮಾಡಬೇಕಾಗುತ್ತೆ.

More from Filmibeat

English summary
Karale movie poster controversy Kumkum clarifies that the woman in the poster is not me but model;
Read more about: controversy poster sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X