'ಕರಾವಳಿ' ವಿವಾದ ಬೆನ್ನಲ್ಲೇ ನಿರ್ದೇಶಕರಿಂದ ರಾಜ್ ಬಿ ಶೆಟ್ಟಿ ಜೊತೆ ಇನ್ನೊಂದು ಸಿನಿಮಾ; 'ಜುಗಾರಿ ಕ್ರಾಸ್' ಶೀಘ್ರದಲ್ಲೇ ಶುರು

ಕನ್ನಡದ ಮತ್ತೊಂದು ಎಕ್ಸ್‌ಪೆಕ್ಟೆಡ್ ಸಿನಿಮಾ 'ಕರಾವಳಿ' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಹೀಗಾಗಿ ಇಡೀ ತಂಡ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಈ ಗ್ಯಾಪ್‌ನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಗುರುದತ್ ಗಾಣಿಗ ನಡುವಿನ ವೈಮನಸ್ಸಿನಿಂದ ಇಬ್ಬರ ನಡುವೆ ವಿವಾದ ಏರ್ಪಟ್ಟಿತ್ತು. ಅದು ಬೀದಿ ರಂಪಾ ಆಗಿದ್ದು ಎರಡೂ ಕಡೆಗೆ ವಾದ-ವಿವಾದದವರೆಗೂ ಹೋಗಿತ್ತು. ಸದ್ಯಕ್ಕೀಗ ವಿವಾದವನ್ನು ಬಗೆ ಹರಿಸಿಕೊಂಡಿದ್ದು, ಸಿನಿಮಾ ತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ.

'ಕರಾವಳಿ' ಹೆಸರೇ ಹೇಳುವಂತೆ ಕರ್ನಾಟಕದ ಕರಾವಳಿ ಭಾಗದ ಕಥೆ. ಕಂಬಳ ಹಾಗೂ ಅದರ ಸುತ್ತಮುತ್ತ ಸಾಗುವ ಕಥೆಯಾಗಿದ್ದು, ಅಲ್ಲಿನ ಆಚಾರ-ವಿಚಾರ, ಸಂಸ್ಕೃತಿಯ ಅನಾವಣವನ್ನು ಮಾಡಲಾಗಿದೆ. ಜೊತೆಗೆ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರಾ ಸೇರಿದಂತೆ ಜನಪ್ರಿಯ ತಾರಾಗಣವೇ ಇರುವುದರಿಂದ ಈ ಸಿನಿಮಾನಾದರೂ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಬಹುದೇ? ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

Karavali director Gurudatt Ganiga confirmed to do movie with Raj B Shetty Jugari Cross By Poornachandra Tejaswi

ಒಂದ್ಕಡೆ ಸಿನಿಮಾ ಟ್ರೈಲರ್, ಸಾಂಗ್‌ಗಳು ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ವಿವಾದ ದೊಡ್ಡ ಮಟ್ಟಕ್ಕೆ ಹಲ್‌ಚಲ್ ಎಬ್ಬಿಸಿತ್ತು. ಸದ್ಯ ನಿರ್ದೇಶಕ ಗುರುದತ್ ಗಾಣಿಗ ಹಾಗೂ ರಾಜ್ ಬಿ ಶೆಟ್ಟಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. 'ಕರಾವಳಿ' ಸಿನಿಮಾ ಮಾಡುವಾಗಲೇ ಕನ್ನಡ ಜನಪ್ರಿಯ ಲೇಖಕ ಪೂರ್ಣಚಂದ್ರ ತೇಜಸ್ವಿಯ ಸಸ್ಪೆನ್ಸ್, ಥ್ರಿಲ್ಲರ್ ಕಾದಂಬರಿ 'ಜುಗಾರಿ ಕ್ರಾಸ್' ಆಧರಿಸಿ ಸಿನಿಮಾ ಮಾಡುತ್ತಿರುವ ಬಗ್ಗೆ ಸುದ್ದಿ ಹರಿದಾಡಿತ್ತು. ಅದೀಗ ಕನ್ಫರ್ಮ್ ಆಗಿದೆ.

Also Read
ಹೀರೋಗಳ ಡಬ್ಬಿಂಗ್ ಸಮಸ್ಯೆ.. 'ಕರಾವಳಿ'ನೇ ಮೊದಲಲ್ಲ.. ಕನ್ನಡ ಚಿತ್ರರಂಗಕ್ಕೆ ಇದು ಕಾಮನ್
ಹೀರೋಗಳ ಡಬ್ಬಿಂಗ್ ಸಮಸ್ಯೆ.. 'ಕರಾವಳಿ'ನೇ ಮೊದಲಲ್ಲ.. ಕನ್ನಡ ಚಿತ್ರರಂಗಕ್ಕೆ ಇದು ಕಾಮನ್

'ಕರಾವಳಿ' ಬಳಿಕ ಏನು?

ಕನ್ನಡದ ನಿರೀಕ್ಷಿತ ಸಿನಿಮಾಗಳಲ್ಲಿ 'ಕರಾವಳಿ' ಕೂಡ ಇದೆ. ಈ ಸಿನಿಮಾದ ಕೆಲಸ ಇನ್ನೇನು ಮುಗಿದಿದ್ದು, ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಸಿನಿಮಾದ ಮೇಕಿಂಗ್ ವೇಳೆ ನಿರ್ದೇಶಕ ಗುರುದತ್ ಗಾಣಿಗ ಹಾಗೂ ರಾಜ್ ಬಿ ಶೆಟ್ಟಿ ಸೇರಿ ಒಟ್ಟಿಗೆ ಮತ್ತೊಂದು ಸಿನಿಮಾ ಮಾಡುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಅದುವೇ 'ಜುಗಾರಿ ಕ್ರಾಸ್'. ಕನ್ನಡ ಜನಪ್ರಿಯ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರೆದ ಈ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿತ್ತು. ಹಾಗೇ ಕಳೆದ ವರ್ಷ ಪೋಸ್ಟರ್‌ ಅನ್ನು ರಿವೀಲ್ ಮಾಡಲಾಗಿತ್ತು. ಆ ಬಳಿಕ ಮತ್ತೆ ಸುದ್ದಿಯಿರಲಿಲ್ಲ.

Recommended For You
'ಜುಗಾರಿ ಕ್ರಾಸ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ
'ಜುಗಾರಿ ಕ್ರಾಸ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

'ಜುಗಾರಿ ಕ್ರಾಸ್' ಈಗ ಕನ್ಫರ್ಮ್

'ಜುಗಾರಿ ಕ್ರಾಸ್' ಅನೌನ್ಸ್ ಮಾಡಿದ ವೇಳೆ ಕೆಲ ಪೋಸ್ಟರ್‌ಗಳನ್ನು ರಿವೀಲ್ ಮಾಡಿದ್ದಷ್ಟೇ. ಆದರೆ, ಸಿನಿಮಾ ಪ್ರಮುಖ ಪಾತ್ರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಆದ್ರೀಗ ಗಲಾಟಾ ಪ್ಲಸ್ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಗುರುದತ್ ಗಾಣಿಗ 'ಜುಗಾರಿ ಕ್ರಾಸ್' ಸಿನಿಮಾ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಮೂಲಕ 'ಕರಾವಳಿ' ಜೋಡಿ 'ಜುಗಾರಿ ಕ್ರಾಸ್‌'ಗೂ ಮುಂದುವರೆದಿದೆ.

Karavali director Gurudatt Ganiga confirmed to do movie with Raj B Shetty Jugari Cross By Poornachandra Tejaswi

ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳು ಫುಲ್ ಖುಷ್

ಕನ್ನಡದ ಜನಪ್ರಿಯ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಬರಹಗಳಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರ ಥ್ರಿಲ್ಲರ್ ಸಸ್ಪೆನ್ಸ್ ಕಾದಂಬರಿಗಳು ಅಸಂಖ್ಯಾತ ಓದುಗರನ್ನು ಹುಟ್ಟಾಕಿದೆ. ಈ ಹಿಂದೆ ಕೂಡ ಇವರ ಕಾದಂಬರಿಗಳನ್ನು ಸಿನಿಮಾ ಮಾಡಿ ಗೆದ್ದಿದ್ದಾರೆ. 'ಕಿರುಗೂರಿನ ಗಯ್ಯಾಳಿಗಳು' ಅದರಲ್ಲಿ ಒಂದು. ಈಗ ಅವರದ್ದೇ ಜನಪ್ರಿಯ ಕಾದಂಬರಿ 'ಜುಗಾರಿ ಕ್ರಾಸ್' ಸಿನಿಮಾ ಆಗುತ್ತಿರುವ ಸುದ್ದಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಹೀಗಾಗಿ ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ನಾಗಾಭರಣ ಸಿನಿಮಾ ಮಾಡಬೇಕಿತ್ತು

ಈ ಸಿನಿಮಾಗೂ ಮುನ್ನವೇ 'ಜುಗಾರಿ ಕ್ರಾಸ್'ವನ್ನು ಟಿ.ಎಸ್. ನಾಗಾಭರಣ ಕೂಡ ಮಾಡಬೇಕಿತ್ತು. ಚಿರಂಜೀವಿ ಸರ್ಜಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ, ಆ ಸಿನಿಮಾ ಅನೌನ್ಸ್ ಆಗಿದ್ದಷ್ಟೇ. ಆದರೆ ಸೆಟ್ಟೇರಲಿಲ್ಲ. ಈಗ ಮತ್ತೆ 'ಜುಗಾರಿ ಕ್ರಾಸ್' ಅನೌನ್ಸ್ ಆಗಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

English summary
Karavali director Gurudatt Ganiga confirmed to do movie Jugari Cross with Raj B Shetty based on Poornachandra Tejaswi.
Read more about: raj b shetty kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X