Karnataka Budget 2023: ಕನ್ನಡ ಚಿತ್ರರಂಗಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಕೊಟ್ಟ ಕೊಡುಗೆಗಳೇನು?

ಸಿಎಂ ಬಸವರಾಜ ಬೊಮ್ಮಾಯಿ ಎರಡನೇ ಬಜೆಟ್ ಮಂಡನೆ ಮಾಡಿದ್ದಾಗಿದೆ. ಬಜೆಟ್ ಮಂಡನೆಗೂ ಮುನ್ನ ಚಿತ್ರರಂಗ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಈ ಬಾರಿ ಬಜೆಟ್‌ನಲ್ಲಿ ಆ ನಿರೀಕ್ಷೆಗಳೆಲ್ಲಾ ಈಡೇರಿದೆಯಾ? ಸ್ಯಾಂಡಲ್‌ವುಡ್‌ಗೆ ಏನೇನು ಸಿಕ್ಕಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಚಿತ್ರರಂಗದ ನಡುವೆ ಉತ್ತಮ ಬಾಂಧವ್ಯವಿದೆ. ಕನ್ನಡ ತಾರೆಯರೊಂದಿಗೆ ಒಡನಾಡ ಹೊಂದಿರುವ ಸಿಎಂ ಬಜೆಟ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಉತ್ತಮ ಕೊಡುಗೆ ನೀಡಲಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಹೇಳಿಕೊಳ್ಳುವಂತಹ ಅನೌನ್ಸ್‌ಮೆಂಟ್ ಏನೂ ಆಗಿಲ್ಲ.

Karnataka Budget 2023 : Key Announcements for Kannada Entertainment Industry

ರಾಜ್ಯ ಬಜೆಟ್ 2023ಯಲ್ಲಿ ಸ್ಯಾಂಡಲ್‌ವುಡ್‌ಗೆ ಸಿಕ್ಕಿದೇನು?

ಬಸವರಾಜ್ ಬೊಮ್ಮಾಯಿ ಕನ್ನಡ ಚಿತ್ರರಂಗಕ್ಕೆ ಕೊಟ್ಟು ಕೊಡದ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗದ ಏಳಿಗೆಗಳಿಗೆ ಬೇಕಾಗಿರೋ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

ಸಬ್ಸಿಡಿ, ಮಿನಿ ಥಿಯೇಟರ್‌ಗಳ ಸ್ಥಾಪನೆ ಬಜೆಟ್‌ನಲ್ಲಿ ಹೇಳಿದ್ದು, ಬಿಟ್ಟರೆ, ಬಹಳ ದಿನಗಳ ಬೇಡಿಕೆಯನ್ನು ಅವರು ಈಡೇರಿಸಿಲ್ಲ. ದಿವಂಗತ ನಟ, ನಿರ್ದೇಶಕ ಶಂಕರ್‌ನಾಗ್ ಅವರ ಹೆಸರಿನಲ್ಲಿ ಟ್ಯಾಕ್ಸಿ ಹಾಗೂ ಆಟೋ ಸ್ಟ್ಯಾಂಡ್‌ಗಳನ್ನು ರಾಜ್ಯಾದ್ಯಂತ ನಿರ್ಮಾಣ ಮಾಡುವುದಾಗಿ ಉಲ್ಲೇಖ ಮಾಡಲಾಗಿದೆ.

Karnataka Budget 2023 : Key Announcements for Kannada Entertainment Industry

ರಾಜ್ಯಾದ್ಯಂತ ಮಿನಿ ಥಿಯೇಟರ್, ಸಬ್ಸಿಡಿ

ಥಿಯೇಟರ್‌ಗಳಿಗೆ ಹೋಗಿ ಸಿನಿಮಾ ನೋಡುವ ಪರಿಕಲ್ಪನೆ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಅಲ್ಲದೆ ಟೈರ್ 2 ಏರಿಯಾಗಳಲ್ಲಿ ಕೆಲವೆಡೆ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಈ ಸಂಬಂಧ ರಾಜ್ಯ ಟೈರ್ 2 ಏರಿಯಾಗಳಲ್ಲಿ 100 ರಿಂದ 200 ಆಸನವುಳ್ಳ ಮಿನಿ ಥಿಯೇಟರ್‌ಗಳನ್ನು ನಿರ್ಮಾಣ ಮಾಡಲು ಪ್ರೋತ್ಸಾಹ ನೀಡುವುದಾಗಿ ಹೇಳಲಾಗಿದೆ.

ಹಾಗೆಯೇ ರಾಜ್ಯದ ಸರ್ಕಾರದಿಂದ ಕನ್ನಡ ಸಿನಿಮಾಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಈ ಬಾರಿ ಬಜೆಟ್‌ನಲ್ಲಿ ಸಬ್ಸಿಡಿ ಬಗ್ಗೆನೂ ನಮೂದಿಸಲಾಗಿದೆ. ಇದೇ ವರ್ಷದಿಂದ ಸುಮಾರು 200 ಸಿನಿಮಾಗಳಿಗೆ ಸಬ್ಸಿಡಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಹೇಳಿದ್ದಾರೆ. ಇದು ಬಿಟ್ಟರೆ, ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಬಜೆಟ್‌ನಲ್ಲಿ ಈಡೇರಿಸಲಾಗಿಲ್ಲ.

More from Filmibeat

English summary
Karnataka Budget 2023 : Key Announcements for Kannada Entertainment Industry, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X