ಕನ್ನಡ ಯಾವ್ಯಾವ ತಾರೆಯರು ಎಲ್ಲೆಲ್ಲಿ ಮತಚಲಾಯಿಸಿದ್ರು? ವೋಟ್ ಮಾಡಿ ಏನಂದ್ರು?

ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಮತದಾನ ಆರಂಭ ಆಗಿದೆ. ಒಂದೇ ಹಂತದಲ್ಲಿ ರಾಜ್ಯಾದ್ಯಂತ ಮತದಾನ ನಡೆಯುತ್ತಿದೆ. ಬೆಳ್ಳಂಬೆಳಗ್ಗೆನೇ ಕೆಲವು ಸೆಲೆಬ್ರೆಟಿಗಳು ಕ್ಯೂನಲ್ಲಿ ನಿಂತು ಮತಚಲಾವಣೆ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ತಾರೆಯರು ವೋಟ್ ಮಾಡುವುದನ್ನು ಮಿಸ್ ಮಾಡೋದಿಲ್ಲ. ಕೆಲ ತಾರೆಯರು ಮುಂಜಾನೆಯೇ ತಮ್ಮ ಕುಟುಂಬದೊಂದಿಗೆ ತೆರಳಿ ಮತ ಚಲಾಯಿಸುತ್ತಾರೆ. ಈ ಮೂಲಕ ಸಾರ್ವಜನಿಕರಿಗೆ ಮತ ಚಲಾಯಿಸಲು ಉತ್ತೇಜನವನ್ನೂ ನೀಡುತ್ತಾರೆ.

 Karnataka Election 2023: Prakash Raj, Ramesh Aravind, Ganesh, Jaggesh Rakshit cast their votes

ಮತದಾನದ ದಿನವಾದ ಇಂದು (ಮೇ 10) ಕನ್ನಡದ ಯಾವ್ಯಾವ ಸೆಲೆಬ್ರೆಟ್ರಿ? ಎಲ್ಲೆಲ್ಲಿ? ಮತ ಚಲಾಯಿಸಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

"40% ಭ್ರಷ್ಟಾರಿಗಳ ವಿರುದ್ಧ ನನ್ನ ಮತ"- ಪ್ರಕಾಶ್ ರಾಜ್

ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಶುರುವಾಗಿದೆ. ಇಂದು (ಮೇ 10) ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಬಹುಭಾಷಾ ನಟ ಪ್ರಕಾಶ್‌ರಾಜ್‌ ಮತಚಲಾಯಿಸಿದ್ದಾರೆ. ಬೆಂಗಳೂರಿನ ಶಾಂತಿನಗರದ ಸೇಂಟ್‌ ಜೋಸೆಫ್‌ ಸ್ಕೂಲ್‌ನಲ್ಲಿ ವೋಟ್ ಮಾಡಿದ್ದಾರೆ. ಮತ ಚಲಾಯಿಸಿದ ಬಳಿಕ ಪ್ರಕ್ರಿಯೆ ನೀಡಿದ್ದು, "40% ಭ್ರಷ್ಟಾಚಾರಿಗಳ ವಿರುದ್ಧ ನನ್ನ ಮತ ಚಲಾಯಿಸಿದ್ದೇನೆ." ಎಂದು ಟ್ವೀಟ್ ಮಾಡಿದ್ದಾರೆ.

 Karnataka Election 2023: Prakash Raj, Ramesh Aravind, Ganesh, Jaggesh Rakshit cast their votes

"ನನ್ನ ಪ್ರೀತಿಯ ಕನ್ನಡಿಗರೆ.. ನಾನು ಮತೀಯ ರಾಜಕಾರಣದ ವಿರುದ್ಧ.. 40% ಭ್ರಷ್ಟಾಚಾರಿಗಳ ವಿರುದ್ಧ ನನ್ನ ಮತ ಚಲಾಯಿಸಿದ್ದೇನೆ. ನೀವು ನಿಮ್ಮ ಮನಃಸಾಕ್ಷಿಯಿಂದ.. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಲು ನಿಮ್ಮ ಮತವನ್ನು ಚಲಾಯಿಸಿ." ಎಂದು ಟ್ವೀಟ್ ಮಾಡಿದ್ದಾರೆ.

"ಮತದಾನ ನಮ್ಮ ಭವಿಷ್ಯ ಕಾಪಾಡುತ್ತೆ" ಉಪೇಂದ್ರ

ರಿಯಲ್ ಸ್ಟಾರ್ ಹಾಗೂ ಪ್ರಜಾಕೀಯ ಪಕ್ಷದ ಮುಖ್ಯಸ್ಥ ಉಪೇಂದ್ರ ಕೂಡ ಈಗಾಗಲೇ ಮತ ಚಲಾಯಿಸಿದ್ದಾರೆ. ವೋಟ್ ಮಾಡಿದ ಬಳಿಕ ಪೋಟೊವನ್ನು ಶೇರ್ ಮಾಡಿಕೊಂಡಿದ್ದು, ಮತದಾನ ಮಾಡುವಂತೆ ಕರೆ ನೀಡಿದ್ದಾರೆ.

 Karnataka Election 2023: Prakash Raj, Ramesh Aravind, Ganesh, Jaggesh Rakshit cast their votes

" ಮತದಾನ ನಮ್ಮ ಭವಿಷ್ಯ ಕಾಪಾಡುತ್ತೆ. ಇಡೀ ದೇಶದ ಭವಿಷ್ಯ ನಮ್ಮೆಲ್ಲರ ಭವಿಷ್ಯ ವೋಟಿಂಗ್‌ನಲ್ಲೆ ಇದೆ. ಈ ಸಲ 70 ಪರ್ಸೆಂಟ್ ವೋಟ್ ಆಗುತ್ತೆ ನೋಡಿ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ವೋಟ್ ಹಾಕದೆ ಆಮೇಲೆ ಸರ್ಕಾರವನ್ನು ಶಪಿಸುವುದು ಅಲ್ಲ." ಎಂದು ಯುವ ಜನತೆಗೆ ರಿಯಲ್ ಸ್ಟಾರ್ ಉಪೇಂದ್ರ ಸಂದೇಶ ನೀಡಿದ್ದಾರೆ."

1 ಗಂಟೆ ಸರದಿಯಲ್ಲಿ ನಿಂತು ಜಗ್ಗೇಶ ಮತದಾನ

ನವರಸ ನಾಯಕ ಜಗ್ಗೇಶ್ ಮಲ್ಲೇಶ್ವರಂ ಎಂ ಇ ಎಸ್ ಕಾಲೇಜಿನಲ್ಲಿ ಪತ್ನಿ ಪರಿಮಳಾ ಅವರೊಂದಿಗೆ ಹೋಗಿ ಮತದಾನ ಮಾಡಿದ್ದಾರೆ. ಹೆಚ್ಚು ಕಡಿಮೆ ಒಂದು ಗಂಟೆ ಕಾಲ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. " ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಬೇಕಾದ್ರೆ, ನಾವು ಅದನ್ನು ಅನುಸರಿಬೇಕು" ಎಂದು ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

 Karnataka Election 2023: Prakash Raj, Ramesh Aravind, Ganesh, Jaggesh Rakshit cast their votes

ದೊಡ್ಮನೆ ಕುಟುಂಬದಿಂದ ಮತದಾನ

ಸದಾಶಿವನಗರದಲ್ಲಿ ದೊಡ್ಮನೆ ಕುಟುಂಬ ಕೂಡ ಮತದಾನ ಮಾಡಿದೆ. ರಾಘಣ್ಣ, ಪತ್ನಿ ಮಂಗಳ, ಯುವರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೂತ್‌ಗೆ ತೆರಳಿ ಮತವನ್ನು ಚಲಾಯಿಸಿದ್ದಾರೆ. ಈ ವೇಳೆ ಅಪ್ಪು ಇಲ್ಲದೆ ಮತದಾನ ಮಾಡಿದ್ದು ನೋವಿದೆ ಎಂದು ರಾಘಣ್ಣ ಹೇಳಿದ್ದಾರೆ.

 Karnataka Election 2023: Prakash Raj, Ramesh Aravind, Ganesh, Jaggesh Rakshit cast their votes

"ಅಪ್ಪು ಇಲ್ಲದೆ ಮತದಾನ ಮಾಡಿದ್ದು ತುಂಬಾ ನೋವಿದೆ. ಅಪ್ಪ, ಅಮ್ಮ ಜೊತೆ ವೋಟ್ ಮಾಡೋಕೆ ಬರ್ತಿದ್ವಿ. ಆಮೇಲೆ ಶಿವಣ್ಣ, ನಾನು, ಅಪ್ಪು ಬರ್ತಿದ್ವಿ. ಈಗ ಅಪ್ಪು ಇಲ್ಲದೇ ಬಂದಿದ್ದೀವಿ. ಬೇಜಾರಿದೆ.. ಮತದಾನ ಎಲ್ಲರ ಹಕ್ಕು. ನಾನು ನನ್ನ ಹಕ್ಕು ಚಲಾಯಿಸಿದ್ದೇನೆ." ಎಲ್ಲರೂ ವೋಟ್ ಮಾಡಿ ಎಂದು ರಾಘಣ್ಣ ಹೇಳಿದ್ದಾರೆ.

ಪತ್ನಿ ಜೊತೆ ಗೋಲ್ಡನ್ ಸ್ಟಾರ್ ವೋಟ್

ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಜೊತೆ ಹೋಗಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಆರ್​.ಆರ್​.ನಗರದ ಮೌಂಟ್​ ಕಾರ್ಮೆಲ್​ ಕಾಲೇಜಿನಲ್ಲಿ ಮತಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ.

 Karnataka Election 2023: Prakash Raj, Ramesh Aravind, Ganesh, Jaggesh Rakshit cast their votes

ರಕ್ಷಿತ್, ರಮೇಶ್, ಅಮೂಲ್ಯ ಮತದಾನ

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಉಡುಪಿ ವಿಧಾನಸಭಾ ಕ್ಷೇತ್ರದ ಕುಕ್ಕಿಕಟ್ಟೆಯ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ. ರಮೇಶ್ ಅರವಿಂದ್ ಪತ್ನಿ ಅರ್ಚನಾ ಅವರ ಜೊತೆ ಜೆಪಿ ನಗರದಲ್ಲಿ ವೋಟ್ ಮಾಡಿದ್ದಾರೆ. ರಾಜರಾಜೇಶ್ವರಿನಗರದಲ್ಲಿ ಪತಿ ಜಗದೀಶ್ ಜೊತೆ ಅಮೂಲ್ಯ ಮತಚಲಾಯಿಸಿದ್ದಾರೆ.

 Karnataka Election 2023: Prakash Raj, Ramesh Aravind, Ganesh, Jaggesh Rakshit cast their votes

More from Filmibeat

English summary
Karnataka Election 2023: Prakash Raj, Ramesh Aravind, Ganesh, Jaggesh Rakshit cast their votes, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X