For Quick Alerts
  ALLOW NOTIFICATIONS  
  For Daily Alerts

  ಸದಸ್ಯರಿಗೆ ಕಲ್ಯಾಣ ನಿಧಿಯಿಂದ ನೆರವು ಘೋಷಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ

  |

  ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ನೆರವು ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ. ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿಯಿಂದ ಪ್ರತಿ ಸದಸ್ಯರಿಗೂ ತಲಾ 15 ಸಾವಿರ ರೂ ನೀಡುವುದಾಗಿ ಘೋಷಿಸಿದೆ.

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರು, ವಿತರಕ ಮತ್ತು ಪ್ರದರ್ಶಕ ಎಂಬ ಮೂರು ವಲಯಗಳಿವೆ. ಈ ಮೂರೂ ವಲಯಗಳಿಂದ 14,000ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ಎಲ್ಲ ಸದಸ್ಯರಿಗೂ ಕಲ್ಯಾಣ ನಿಧಿಯಿಂದ ತಲಾ 15,000 ರೂ. ನೀಡಲು ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

  ಏಪ್ರಿಲ್‌ಅನ್ನು ಮಾಯವಾದ ತಿಂಗಳು ಎಂದು ಘೋಷಿಸಿ: ಸರ್ಕಾರಕ್ಕೆ ರಿಯಲ್ ಸ್ಟಾರ್ ಉಪ್ಪಿ ಸಲಹೆಏಪ್ರಿಲ್‌ಅನ್ನು ಮಾಯವಾದ ತಿಂಗಳು ಎಂದು ಘೋಷಿಸಿ: ಸರ್ಕಾರಕ್ಕೆ ರಿಯಲ್ ಸ್ಟಾರ್ ಉಪ್ಪಿ ಸಲಹೆ

  ಪ್ರತಿವರ್ಷ ಸದಸ್ಯತ್ವ ನವೀಕರಿಸುತ್ತಿರುವ ಸದಸ್ಯರಿಗೆ ಈ ನೆರವು ಸಿಗಲಿದೆ. ಈಗಾಗಲೇ ಕಲ್ಯಾಣ ನಿಧಿಯಿಂದ ಹಣ ಪಡೆದವರಿಗೆ ಈ ಅವಕಾಶ ಸಿಗುವುದಿಲ್ಲ. ಉಳಿದವರು ಹಣಕಾಸಿನ ನೆರವಿನ ಅಗತ್ಯವಿದ್ದರೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ.

  'ದೇಣಿಗೆ ಯಾಕೆ ನೀಡಿಲ್ಲ' ಎಂದವರಿಗೆ ನಟಿ ತಾಪ್ಸಿ ಪನ್ನು ಉತ್ತರ 'ದೇಣಿಗೆ ಯಾಕೆ ನೀಡಿಲ್ಲ' ಎಂದವರಿಗೆ ನಟಿ ತಾಪ್ಸಿ ಪನ್ನು ಉತ್ತರ

  ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ದಿನಗೂಲಿ ನೌಕರರಿಗೆ ನೆರವು ನೀಡುವಂತೆ ಚಿತ್ರರಂಗದ ನಿಯೋಗವೊಂದ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.

  English summary
  Karnataka Film Chamber has announced to give Rs 15,000 each for its members.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X