ಜೂನ್ 1ರಿಂದ ಶಾಪಿಂಗ್ ಮಾಲ್, ಚಿತ್ರಮಂದಿರ ತೆರೆಯಲು ಅನುಮತಿ?

ಲಾಕ್ ಡೌನ್ ಆರಂಭವಾದಾಗಿನಿಂದ ಚಿತ್ರಮಂದಿರಗಳು, ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು ಬಂದ್ ಆಗಿವೆ. ಈಗ ಹಂತಹಂತವಾಗಿ ಲಾಕ್ ಡೌನ್ ಸಡಿಲಿಸುತ್ತಿರುವುದರಿಂದ ಮತ್ತು ಅನೇಕ ವಲಯಗಳಿಗೆ ನಿರ್ಬಂಧ ಸಡಿಲಿಸಿರುವುದರಿಂದ, ತಮಗೂ ವಿನಾಯಿತಿ ನೀಡಬೇಕು ಎಂದು ಶಾಪಿಂಗ್ ಮಾಲ್‌ಗಳು, ಹೋಟೆಲ್ ಹಾಗೂ ಚಿತ್ರಮಂದಿರಗಳ ಮಾಲೀಕರು ಬೇಡಿಕೆ ಇರಿಸಿದ್ದಾರೆ.

Recommended Video

ಇಂದು ಚಿತ್ರರಂಗಕ್ಕೆ ಕಾಡುತ್ತಿದೆ ಅಂಬರೀಷ್ ಅನುಪಸ್ಥಿತಿ | Ambareesh We miss You

ಲಾಕ್ ಡೌನ್ 4.0 ಮೇ 31ರಂದು ಅಂತ್ಯಗೊಳ್ಳಲಿದ್ದು, ಅದರ ಬಳಿಕ ಮಾಲ್‌ಗಳು, ಸಿನಿಮಾ ಮಂದಿರ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಎಲ್ಲ ಚಟುವಟಕೆಗಳಿಗೂ ಅವಕಾಶ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಲು ಸಿದ್ಧ. ಅನುಮತಿ ನೀಡಿದರೆ 24 ಗಂಟೆಯೊಳಗೆ ನಮ್ಮ ವಹಿವಾಟು ಆರಂಭಿಸುತ್ತೇವೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್ ಬೇಕಿದೆ. ಮುಂದೆ ಓದಿ...

ಯಡಿಯೂರಪ್ಪ ಭರವಸೆ

ಯಡಿಯೂರಪ್ಪ ಭರವಸೆ

ಹೋಟೆಲ್, ರೆಸ್ಟೋರೆಂಟ್ ಮತ್ತು ಮಾಲ್‌ಗಳನ್ನು ತೆರೆಯಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ. ನಮಗೆ ಅನುಮತಿ ನೀಡಲಿದೆ ಎಂಬ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದರು.

ವ್ಯಾಪಾರ ವಹಿವಾಟು ಆರಂಭ

ವ್ಯಾಪಾರ ವಹಿವಾಟು ಆರಂಭ

ಮಾಲ್‌ಗಳು, ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ತೆರೆಯಲು ಇನ್ನೂ ಅನುಮತಿ ನೀಡಿಲ್ಲ. ಆದರೆ ಪ್ರತ್ಯೇಕವಾಗಿರುವ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಶೇ 60ರಷ್ಟು ಅಂಗಡಿ ಮಳಿಗೆಗಳು ವ್ಯಾಪಾರ ವಹಿವಾಟು ಆರಂಭಿಸಿವೆ.

ಮಾರ್ಗಸೂಚಿ ಪಾಲನೆ

ಮಾರ್ಗಸೂಚಿ ಪಾಲನೆ

ಮಂಗಳವಾರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಶಾಪಿಂಗ್ ಸೆಂಟರ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಸಿಎಐ), ಶಾಪಿಂಗ್ ಕೇಂದ್ರಗಳು ಮತ್ತು ಮಾಲ್‌ಗಳನ್ನು ಕೂಡಲೇ ಒಪ್ಪಿಗೆ ನೀಡುವಂತೆ ಮನವಿ ಸಲ್ಲಿಸಿತ್ತು. ಮಾಲ್‌ಗಳಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದಾಗಿ ಭರವಸೆ ನೀಡಿತ್ತು. ಸರ್ಕಾರ ಈಗ ಅನುಮತಿ ನೀಡಿದದರೆ ಜೂನ್ 1ರ ಬಳಿಕ ಮಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ತೆರೆಯುವ ಸಾಧ್ಯತೆ ಇದೆ.

ಸಾಮಾಜಿಕ ಅಂತರ

ಸಾಮಾಜಿಕ ಅಂತರ

ಮಾಲ್‌ಗಳ ಕ್ಯಾಶ್ ಕೌಂಟರ್, ಫುಡ್ ಕೋರ್ಟ್‌ ಮುಂತಾದೆಡೆ ಅಂತರ ಕಾಪಾಡಿಕೊಳ್ಳುವ ಸೂಚನೆಗಳನ್ನು ಅಳವಡಿಸಲಾಗುತ್ತದೆ. ಎಸ್ಕಲೇಟರ್‌ಗಳಲ್ಲಿ ಒಟ್ಟಿಗೆ ಪ್ರಯಾಣಿಸಲು ಅವಕಾಶವಿಲ್ಲ. ಎರಡು ಮೆಟ್ಟಿಲುಗಳಿಗೆ ಒಬ್ಬರಂತೆ ಜಿಕ್ ಜಾಕ್ ಸ್ವರೂಪದಲ್ಲಿ ನಿಂತು ಸಾಗಬೇಕು.

ನಿರಂತರ ಸ್ಯಾನಿಟೈಸ್

ನಿರಂತರ ಸ್ಯಾನಿಟೈಸ್

ಫುಡ್ ಕೋರ್ಟ್‌ಗಳಲ್ಲಿ ಒಟ್ಟಿಗೆ ಕುಳಿತು ತಿನ್ನಲು ಅವಕಾಶವಿಲ್ಲ. ಅಲ್ಲಿ ಕೂಡ ಸಾಮಾಜಿಕ ಅಂತರ ಕಾಪಾಡಲು ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುತ್ತದೆ. ಶೇ 50ರಷ್ಟು ಮಾತ್ರ ವಾಹನ ನಿಲ್ದಾಣಗಳಿಗೆ ಅವಕಾಶ ನೀಡಲಾಗುವುದು. ಜನರು ಸ್ಪರ್ಶಿಸಬಹುದಾದ ಪ್ರತಿ ಸ್ಥಳವನ್ನೂ ಸತತವಾಗಿ ಸ್ಯಾನಿಟೈಸ್ ಮಾಡುತ್ತಿರಬೇಕು. ವ್ಯಾಪಾರ ಚಟುವಟಿಕೆಗಳ ಹೊರತು ಮಾಲ್‌ಗಳಲ್ಲಿ ಸಂಗೀತ ಕಾರ್ಯಕ್ರಮ, ಮುಕ್ತ ವ್ಯಾಪಾರ ಮುಂತಾದ ಜನರು ಗುಂಪುಗೂಡುವ ಚಟುವಟಿಕೆಗಳಿಗೆ ಅವಕಾಶವಿಲ್ಲ ಮುಂತಾದ ನಿಬಂಧನೆಗಳೊಂದಿಗೆ ಮಾಲ್‌ಗಳನ್ನು ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದೆ.

More from Filmibeat

English summary
Shopping Centres Association of India (SCAI) awaiting for government's permission to open shopping centres and malls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X