Darshan Bail:'ಕಾಟೇರ'ನಿಗೆ ರಿಲೀಫ್ ಸಿಗುತ್ತಾ? ಇಲ್ವಾ? ರಾಜ್ಯ ಸರ್ಕಾರದ ಪರ ವಕೀಲರ ವಾದವೇನು?
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಏಳು ಆರೋಪಿಗಳ ಜಾಮೀನು ರದ್ದು ಮಾಡುವ ವಿಚಾರಣೆ ನಡೆದಿದೆ. ರಾಜ್ಯ ಸರ್ಕಾರ ಪರ ವಕೀಲರಾದ ಸಿದ್ಧಾರ್ಥ್ ಲೂತ್ರಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ವಿವರಣೆಯನ್ನು ಕೊಟ್ಟಿದ್ದಾರೆ.
ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನನ್ನು ರದ್ದು ಮಾಡಬೇಕೆಂದು ರಾಜ್ಯ ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಿತ್ತು. ಈ ಅರ್ಜಿಗೆ ಸಂಬಂಧಿಸಿದಂತೆ ಇಂದು (ಜುಲೈ 24)ರಾಜ್ಯದ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂತ್ರಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ವಿವರಣೆಯನ್ನು ನೀಡಿದ್ದಾರೆ. ಜಡ್ಜ್ ಕೇಳಿದ ಪ್ರಮುಖ ಪ್ರಶ್ನೆಗಳು ಹಾಗೂ ರಾಜ್ಯ ಸರ್ಕಾರದ ಪರ ವಕೀಲರು ನೀಡಿದ ಉತ್ತರದ ವಿವರಣೆ ಇಲ್ಲಿದೆ.

ಜಡ್ಜ್ ಪ್ರಶ್ನೆ: 17 ಜನರಲ್ಲಿ ಕೇವಲ 7 ಜನರಿಗೆ ಮಾತ್ರ ಜಾಮೀನು ರದ್ದಾಗಬೇಕು ಎಂದು ಕೇಳುತ್ತಿದ್ದೀರಾ?
ಉತ್ತರ: ಮೊದಲು 7 ಜನರ ಜಾಮೀನು ಆದ ಬಳಿಕ ಉಳಿದವರ ಬಗ್ಗೆ ಆಮೇಲೆ ಸರ್ಜಿಯನ್ನು ಸಲ್ಲಿಸುತ್ತೇವೆ.
ಜಡ್ಜ್ ಪ್ರಶ್ನೆ: ಕೇವಲ ಸಾಂದಾರ್ಭಿಕ ಸಾಕ್ಷಿಯಾ ಆಧಾರದ ಮೇಲೆ ಕೇಸ್ ದಾಖಲಾಯ್ತಾ?
ಉತ್ತರ: ಇಲ್ಲ ಸರ್.. ಪ್ರತ್ಯಕ್ಷ ದರ್ಶಿಗಳು ಕೂಡ ಇದ್ದಾರೆ. ಫೋಟೋಗಳು ಕೂಡ ಇವೆ.
ಜಡ್ಜ್ ಪ್ರಶ್ನೆ: ಈ ಕೊಲೆಯ ಹಿಂದಿರುವ ಉದ್ದೇಶವೇನು?
ಉತ್ತರ: ರೇಣುಕಾಸ್ವಾಮಿ ದರ್ಶನ್ ಫ್ಯಾನ್ ಆಗಿದ್ದ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶವನ್ನು ಕಳಿಸುತ್ತಿದ್ದ. ದರ್ಶನ್ ಮತ್ತು ಪವಿತ್ರಾ ಗೌಡ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು. ದರ್ಶನ್ ಗೆಳತಿಯಾಗಿದ್ದಂತಹ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶವನ್ನು ಕಳುತ್ತಿದ್ದ. ಪವಿತ್ರಾ ಗೌಡ ಎ3 ಗೆ ತಿಳಿಸಿದ್ದಳು. ಅಲ್ಲಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆದುಕೊಂಡು ಬಂದಿದ್ದರು. ಆ ಬಳಿಕ ಅವರ ಕೊಲೆ ಆಯ್ತು. ದರ್ಶನ್‌ಗೆ ಕ್ರಿಮಿನಲ್ ಹಿನ್ನೆಲೆಯಿದೆ. ಜೈಲಿನಲ್ಲಿ ಹೋದಾಗ ಅಪರಾಧಿಗಳ ಜೊತೆ ಸಿಗರೇಟ್ ಸೇದುತ್ತಿದ್ದರು. ಜಾಮೀನಿನ ಮೇಲೆ ಹೊರ ಬಂದಾಗಲೂ ಸಾಕ್ಷಿಯ ಜೊತೆಗೆ ಇದ್ದರು.

ಜಡ್ಜ್ ಪ್ರಶ್ನೆ: ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ ಅಲ್ಲವೇ? ಕೊಲೆಯಲ್ಲಿ ಪ್ರತಿಯೊಬ್ಬರ ಪಾತ್ರವನ್ನು ವಿವರಿಸಿ
ಉತ್ತರ: ಎಲ್ಲರೂ ಜಾಮೀನ ಮೇಲೆ ಈಗ ಹೊರಗಿದ್ದಾರೆ. ಪ್ರತಿಯೊಬ್ಬರ ಪಾತ್ರದ ಬಗ್ಗೆನೂ ಲಿಖಿತ ವಾದಾಂಶವನ್ನು ಸಲ್ಲಿಸಲಾಗಿದೆ. ದೋಷಾರೋಪವನ್ನು ಇನ್ನೂ ಹೊರಿಸಲಾಗಿಲ್ಲ ಎಂದು ವಕೀಲರು ಉತ್ತರ ಕೊಟ್ಟಿದ್ದಾರೆ. ಸಿಸಿಟಿಯಲ್ಲಿ ವಾಹನಗಳು ಓಡಾಡಿರುವುದು ಸೆರೆಯಾಗಿದೆ ಸತ್ವ ಅಪಾರ್ಟ್‌ಮೆಂಟ್ ಬಳಿ ಸ್ಕಾರ್ಪಿಯೋ ಮತ್ತಿತರ ವಾಹನ ಓಡಾಟ ಸೆರೆಯಾಗಿದೆ. ಜೀಪ್ ರಾಂಗ್ಲರ್, ಬಿಳಿ ಸ್ಕಾರ್ಪಿಯೋ ಓಡಾಡಿದೆ.
ಜಡ್ಜ್ ಪ್ರಶ್ನೆ: ಈ ಆರೋಪಿಗಳು ಸಾಕ್ಷಿಯನ್ನು ನಾಶ ಮಾಡುವುದಕ್ಕೆ ಯತ್ನಿಸಿದ್ದಾರೆ ಅಲ್ಲವೇ? ಇವರ ಜಾಮೀನಿಗೂ ಅರ್ಜಿ ಸಲ್ಲಿಸಿದ್ದೀರಾ?
ಉತ್ತರ: ವಾಹನದಲ್ಲಿದ್ದ ಆರೋಪಿಗಳನ್ನು ಸಹ ಗುರುತಿಸಲಾಗಿದೆ. ಅವರಿಗೂ ಜಾಮೀನು ಸಿಕ್ಕಿದೆ. ಜೀಪ್ ರಾಂಗ್ಲರ್ ವಿನಯ್ ಎಂಬುವವರಿಗೆ ಸೇರಿದ್ದು. ಆತ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಗೆ ಮಾಲೀಕರಾಗಿದ್ದು ಅವರಿಗೆ ಸೇರಿದೆ. 3 ಜನರು ತಾವೇ ಕೊಲೆ ಮಾಡಿದ್ದಾಗಿ ಶರಣಾಗಿದ್ದರು. ಮೂರು ಮಂದಿ ನಾವೇ ಕೊಲೆ ಮಾಡಿದ್ದೇವೆ ಎಂದು ಶರಣಾಗಿದ್ದರು.
ನಾಲ್ಕನೇ ಆರೋಪಿ ಸಿಡಿಆರ್ ಪರಿಶೀಲಿಸಿದಾಗ 45 ಬಾರಿ ಕಾಲ್ ಮಾಡಿರುವುದು ಗೊತ್ತಾಯ್ತು. ಈ ಘಟನೆ ವೇಳೆ ನಾಗರಾಜ್‌ಗೂ ಮೆಸೇಜ್ ಮಾಡಿದ್ದು ಗೊತ್ತಾಯ್ತು. ಪವನ್ ಸೂಚನೆ ಮೇಲೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿತ್ತು. ದರ್ಶನ್, ಪವಿತ್ರಾ ಗೌಡ ಶೆಡ್‌ಗೆ ಬಂದು ಕೊಲೆ ಮಾಡಿದ್ದಾರೆ. ಆ ಬಳಿಕ ರೇಣುಕಾಸ್ವಾಮಿ ಸಾವನ್ನಪ್ಪುತ್ತಾನೆ.
ಜಡ್ಜ್ ಪ್ರಶ್ನೆ: ಹಲ್ಲೆ ಮಾಡಿದ ಅಪರಾಧಿಗಳಲ್ಲಿ ಎಷ್ಟು ಜನರ ಅರ್ಜಿ ನಮ್ಮ ಮುಂದಿದೆ?
ಉತ್ತರ: ಎ1, ಎ2, ಎ6, ಎ7,ಎ11,ಎ12,ಎ14, ಜಾಮೀನು ರದ್ಧತಿಗೆ ಅರ್ಜಿ ಸಲ್ಲಿಸಲಾಗಿದೆ.
ಜಡ್ಜ್ ಪ್ರಶ್ನೆ:ಹಲ್ಲೆಯ ಪ್ರತ್ಯಕ್ಷದರ್ಶಿ ಯಾರಾದರೂ ಇದ್ದಾರಾ?
ಉತ್ತರ: ಪುನೀತ್ ಹಾಗೂ ಕಿರಣ್ ಈ ಘಟನೆಯ ಪ್ರತ್ಯಕ್ಷ ಸಾಕ್ಷಿಗಳು
ಜಡ್ಜ್ ಪ್ರಶ್ನೆ: ನೀವು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ಯಾವಾಗ ಪತ್ತೆ ಹಚ್ಚಿದ್ರಿ?
ಉತ್ತರ: ಒಬ್ಬನ ಹೇಳಿಕೆಯನ್ನು 7 ದಿನಗಳಲ್ಲಿ ದಾಖಲಿಸಿದ್ದೇವೆ. ಇನ್ನೊಬ್ಬರ ಹೇಳಿಕೆಯನ್ನು 20 ದಿನಗಳಲ್ಲಿ ದಾಖಲಿಸಲಾಗಿದೆ. ಇವರು ಶೆಡ್‌ನಲ್ಲಿ ಕೆಲಸಗಾರರಾಗಿದ್ದರು. 7 ದಿನಗಳಲ್ಲಿ ಕಿರಣ್, 12 ದಿನಗಳಲ್ಲಿ ಪುನೀತ್ ಹೇಳಿಕೆ ದಾಖಲಿಸಲಾಗಿದೆ.
ಜಡ್ಜ್ ಪ್ರಶ್ನೆ: ಆರೋಪಿ ಸ್ಥಾನದಲ್ಲಿ ಇರುವ ದರ್ಶನ್ ಫೇಮಸ್ ಹೌದೋ ಅಲ್ಲವೋ? ಅನ್ನೋದು ಬೇಡ. ಆದರೆ, ಈ ಆರೋಪಿಯನ್ನು ಗುರುತಿಸಿದ್ದಾರಾ?
ಉತ್ತರ: ಹೌದು, ದರ್ಶನ್‌ರನ್ನು ಪುನೀತ್ ಗುರುತಿಸಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು ಅವನು ವಿವರಿಸಿದ್ದಾನೆ.
ಜಡ್ಜ್ ಪ್ರಶ್ನೆ: ಇದರಲ್ಲಿ ಎ1 ಪವಿತ್ರಾ ಗೌಡ, ಎ2 ದರ್ಶನ್ ಪಾತ್ರವೇನು?
ಉತ್ತರ: ರೇಣುಕಾಸ್ವಾಮಿಗೆ ಹೊಡೆದ ಫೋಟೊ, ವಿಡಿಯೋವನ್ನು ಕಳುಹಿಸಿದರು. ಆ ವಿಡಿಯೋ ಈಗ ಡಿಲೀಟ್ ಆಗಿದೆ. ಬ್ಲಾಕ್ ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಬಂದಿದ್ದರು. ದರ್ಶನ್ ಬಂದ ಕೂಡಲೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ.
ಜಡ್ಜ್ ಪ್ರಶ್ನೆ: ಪ್ರತ್ಯದರ್ಶಿ ಹೇಳಿಕೆಗೆ ಪೂರಕ ಸಾಕ್ಷ್ಯಗಳು ಇವೆಯೇ?
ಉತ್ತರ: ಸಾಂದರ್ಭಿಕ ಸಾಕ್ಷಿಗಳು ಇವೆ. ಫೊರೆನ್ಸಿಕ್ ರಿಪೋರ್ಟ್‌ನಲ್ಲಿರೋ ಗಾಯದ ಗುರುತು. ಅಶೋಕ್ ಲೈಲ್ಯಾಂಡ್ ಫೋಟೊ, ಘಟನೆ ಬಳಿಕ ದರ್ಶನ್ ಅದೇ ಜಾಗದಲ್ಲಿ ಇದ್ದ ಫೋಟೊ ಲಭ್ಯವಿದೆ.


Click it and Unblock the Notifications











