'100' ಸಿನಿಮಾ ನೋಡಿ ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಹೇಳಿದ್ದೇನು?

ನವೆಂಬರ್ 19 ಸ್ಯಾಂಡಲ್‌ವುಡ್ ಸಿನಿಪ್ರಿಯರಿಗೆ ಸಿನಿಮಾಗಳದ್ದೇ ಹಬ್ಬ. ಒಂದರ ಹಿಂದೊಂದರಂತೆ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಈ ವಾರ ಬರೋಬ್ಬರಿ 5 ಸಿನಿಮಾಗಳು ಬಿಡುಗಡೆ ಸಜ್ಜಾಗಿ ನಿಂತಿವೆ. ಕ್ರೇಜಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಸಿನಿಮಾ ಮುಗಿಲ್‌ಪೇಟೆ, ರಿಷಬ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ನಟನೆಯ ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. ಇದರೊಂದಿಗೆ ರಮೇಶ್ ಅರವಿಂದ್ ನಟನೆಯ 100 ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.

ಈ ಸಲುವಾಗಿ ನಟ ರಮೇಶ್ ಅರವಿಂದ್ ಕರ್ನಾಟಕದ ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ಅವರ ಅಧಿಕಾರಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದರು. ನವೆಂಬರ್ 17ರಂದು ಬಿಡುವು ಮಾಡಿಕೊಂಡು ಸಿನಿಮಾ ತಮ್ಮ ಅಧಿಕಾರಿಗಳ ಜೊತೆ ಸಿನಿಮಾ ನೋಡಿ, ರಮೇಶ್ ಅರವಿಂದ್ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪರಾಧ ತಡೆಯಲು '100' ಬೇಕು

ಅಪರಾಧ ತಡೆಯಲು '100' ಬೇಕು

ನಟ- ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶಿಸಿದ '100' ಸಿನಿಮಾ ನವೆಂಬರ್ 19ರಂದು ಬಿಡುಗಡೆಯಾಗುತ್ತಿದ್ದು, ಕೆಲವು ದಿನಗಳಿಂದ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಈ ಸಿನಿಮಾ ಪ್ರಮುಖವಾಗಿ ಸೈಬರ್ ಕ್ರೈಂ ಆಧರಿಸಿದ ಸಿನಿಮಾ ಆಗಿದ್ದರಿಂದ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೆ ಸಿನಿಮಾ ತೋರಿಸಲು ಮುಂದಾಗಿದ್ದರು. ಕೆಲವು ದಿನಗಳ ಹಿಂದೆ ಸಿನಿಮಾ ನೋಡವಂತೆ ಆಹ್ವಾನ ನೀಡಲಾಗಿತ್ತು. ಈ ರಮೇಶ್ ಅರವಿಂದ್ ಕೋರಿಕೆ ಮೇರೆಗೆ ಸಚಿವರು ತಮ್ಮ ಅಧಿಕಾರಿಗಳ ಜೊತೆ '100' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಸೋಶಿಯಲ್ ಮೀಡಿಯಾದಲ್ಲಿ ಯುವ ಜನಾಂಗ ಮುಳುಗಿರುತ್ತೆ. ಇದರಿಂದ ಏನಾಲ್ಲಾ ತೊಂದರೆ ಆಗುತ್ತೆ ಅಂತಾ ಬಹಳ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇಂದು ಕೇವಲ ಮನೋರಂಜನೆ ಅಷ್ಟೇ ಅಲ್ಲಾ. ಅಪರಾಧ ಜಗತ್ತನ್ನು ಮಟ್ಟ ಹಾಕೋದಿಕ್ಕೆ ಈ ಸಿನಿಮಾ ಬಹಳ ಸಹಕಾರಿಯಾಗಲಿ." ಅಂತಾ ಗೃಹ ಸಚಿವ ಅರಗ ಜ್ಞಾನೇಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಚಿವರ ಜೊತೆ ಅಧಿಕಾರಿಗಳ ವೀಕ್ಷಣೆ

ಸಚಿವರ ಜೊತೆ ಅಧಿಕಾರಿಗಳ ವೀಕ್ಷಣೆ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಸಿಓಡಿ ಡಿಜಿ ಅಧಿಕಾರಿಗಳು '100' ಸಿನಿಮಾ‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಐ ಎ ಎಸ್ ಅಧಿಕಾರಿ ಶಾಲಿನಿ ರಜನೀಶ್ ಕೂಡ ಗೃಹ ಸಚಿವರೊಂದಿಗೆ '100' ಸಿನಿಮಾ ವೀಕ್ಷಿಸಿದ್ದಾರೆ. ಸೋಷಿಯಲ್ ಮೀಡಿಯಾ ಒಂದು ವರ ಅದನ್ನ ಶಾಪವಾಗಿ ಮಾಡಬೇಡಿ. ಸೈಬರ್ ಕ್ರೈಂ ಹೇಗೆ ನಡೆಯುತ್ತೆ ಅನ್ನುವುದನ್ನು ಮನದಟ್ಟಾಗುವಂತೆ ತೋರಿಸಿದ್ದಾರೆಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ರಮೇಶ್ ಡೈರೆಕ್ಷನ್ ಸೂಪರ್

ರಮೇಶ್ ಡೈರೆಕ್ಷನ್ ಸೂಪರ್

ರಮೇಶ್ ಅರವಿಂದ್ ನಟನೆ ಜೊತೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಮುಖ ಆಕರ್ಷಣೆ ರಚಿತರಾಮ್. ಪುಷ್ಪಕ ವಿಮಾನ ಸಿನಿಮಾದ ಬಳಿಕ ರಚಿತಾ ಹಾಗೂ ರಚಿತಾ ಜೋಡಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದೆ. ಆದರೆ, ಪ್ರೇಮಿಗಳಾಗಿ ಅಲ್ಲ. ಬದಲಾಗಿ, ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಸೋದರಿಯಾಗಿ ಡಿಂಪಲ್ ಕ್ವೀನ್ ನಟಿಸಿದ್ದಾರೆ. 100 ಇಡೀ ಸಿನಿಮಾ ರಚಿತಾ ಹಾಗೂ ರಮೇಶ್ ಅರವಿಂದ್ ಸುತ್ತಲೇ ಸಾಗುತ್ತೆ. ಹೇಳಿ-ಕೇಳಿ ಸೈಬರ ಕ್ರೈಂ ಸ್ಟೋರಿ ಆಗಿದ್ದರಿಂದ ಇಂದಿನ ಯುವ ಪೀಳಿಗೆಗೆ ಇಷ್ಟ ಆಗುತ್ತೆ ಅನ್ನುವ ನಂಬಿಕೆಯಲ್ಲಿದ್ದಾರೆ.

'100' ಸಿನಿಮಾ 4 ಭರ್ಜರಿ ಫೈಟ್ ಇದೆ.

'100' ಸಿನಿಮಾ 4 ಭರ್ಜರಿ ಫೈಟ್ ಇದೆ.

ರಮೇಶ್ ಅರವಿಂದ್ ಸಿನಿಮಾ ಕ್ಲಾಸ್ ಆಗಿರುತ್ತೆ. ಫ್ಯಾಮಿಲಿ ಸಿನಿಮಾಗಳನ್ನೇ ಹೆಚ್ಚು ನಿರ್ದೇಶನ ಮಾಡುತ್ತಾರೆ ಅನ್ನುವ ನಂಬಿಕೆ ಇತ್ತು. ಆದರೆ, ಈ ಬಾರಿ ಕ್ಲಾಸ್‌ ಜೊತೆಗೆ ಮಾಸ್ ಎಲಿಮೆಂಟ್‌ಗಳನ್ನು ಮಿಕ್ಸ್ ಮಾಡಿದ್ದಾರೆ. ನಾಲ್ಕು ದುಬಾರಿ ಫೈಟ್‌ಗಳಿವೆ. ಒಂದಕ್ಕಿಂತ ಒಂದು ಥ್ರಿಲ್ಲಿಂಗ್ ಆಗಿದ್ಯಂತೆ. ಅದರಲ್ಲೂ ರವಿವರ್ಮಾ ನಿರ್ದೇಶನದಲ್ಲೊಂದು ಚೇಸಿಂಗ್ ಸೀನ್ '100' ಸಿನಿಮಾದ ಹೈಲೆಟ್ ಅಂತ ಈಗಾಗಲೇ ರಮೇಶ್ ಅರವಿಂದ್ ಹೇಳಿದ್ದಾರೆ.

More from Filmibeat

English summary
Karnataka home minister Araga Jnanendra watched Ramesh Aravind directed '100' movie. He says '100' is cyber crime based film youths should watch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X