"ಅಪ್ಪುಗಿಂತ ಸೀನಿಯರ್ ವಿಷ್ಣು ಸರ್.. ಮುಂಚೆನೇ ಕರ್ನಾಟಕ ರತ್ನ ಕೊಡ್ಬೇಕಿತ್ತು"; ರವಿಚೇತನ್ ಹೇಳಿಕೆ ಫ್ಯಾನ್ಸ್ ಕಿಡಿ

ನಾಳೆ (ಸೆಪ್ಟೆಂಬರ್ 18) ಡಾ.ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬ. ಅಭಿಮಾನಿಗಳಿಗೆ ಈ ಬಾರಿ ನಿರಾಸೆಯಾಗಿದೆ. ಅಭಿಮಾನ್ ಸ್ಟುಡಿಯೋದಲ್ಲಿ ಸಾಹಸ ಸಿಂಹ ಬರ್ತ್‌ಡೇ ಸಂಭ್ರಮಕ್ಕೆ ಕೋರ್ಟ್ ತಡೆ ನೀಡಿದೆ. ಹೀಗಾಗಿ ಅಲ್ಲೇ ಪಕ್ಕದಲ್ಲಿಯೇ ಒಲ್ಲದ ಮನಸ್ಸಿನಿಂದಲೇ ಫ್ಯಾನ್ಸ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಮಧ್ಯೆ ನಟ ರವಿಚೇತನ್ ಕೊಟ್ಟ ಒಂದು ಹೇಳಿಕೆ ಮತ್ತೆ ವಿಷ್ಣುದಾದ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಮಧ್ಯೆ ಕಂದಕ ಸೃಷ್ಟಿಯಾಗುವಂತೆ ಮಾಡಿದೆ.

ವಿಷ್ಣುದಾದ ಹುಟ್ಟುಹಬ್ಬಕ್ಕೂ ಮುನ್ನ ಕರ್ನಾಟಕ ಸರ್ಕಾರ ಅವರ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ನೀಡಿತ್ತು. ಅಭಿಮಾನಿಗಳ ಬಹುದಿನದಿಂದ ಕರ್ನಾಟಕ ರತ್ನ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು. ಈಗ ಅವರ ಅಗಲಿದ 16 ವರ್ಷಗಳ ಬಳಿಕ ಕರ್ನಾಟಕ ರತ್ನ ಘೋಷಣೆಯಾಗಿದೆ. ಅಭಿಮಾನ್ ಸ್ಟುಡಿಯೋ ವಿವಾದದ ಬೇಸರವಿದ್ದರೂ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದ ಖುಷಿಯಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ಮಧ್ಯೆ ರವಿಚೇತನ್ ಬೇಡದ ಹೇಳಿಕೆ ಟೀಕೆಗೆ ಗುರಿಯಾಗುವಂತೆ ಮಾಡಿದೆ.

Karnataka Ratna Deserved Vishnuvardhan Before Puneeth Rajkumar fans angry on Ravi Chethan Statement

ಇತ್ತೀಚೆಗೆ ನಟ ರವಿಚೇತನ್ ಅಶ್ವವೇಗ ಸುದ್ಧಿ ವಾಹಿನಿಯ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಡಾ.ವಿಷ್ಣುವರ್ಧನ್ ಅವರ ಸ್ವಭಾವದ ಬಗ್ಗೆ ಭಾವನಾತ್ಮಕವಾಗಿ ಮಾತಾಡಿದ್ದಾರೆ. ಹಾಗೇ ಅವರಿಗೆ ಇತ್ತೀಚೆಗೆ ನೀಡಿದ್ದ ಕರ್ನಾಟಕ ರತ್ನ ಪ್ರಶಸ್ತಿ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಪುನೀತ್ ರಾಜ್‌ಕುಮಾರ್ ಅವರನ್ನು ಮಧ್ಯೆ ಎಳೆದು ತಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ರವಿಚೇತನ್ ಹೇಳಿದ್ದೇನು? ನೆಟ್ಟಿಗರು ಹೇಳುತ್ತಿರೋದೇನು? ತಿಳಿಯುವುದಕ್ಕೆ ಮುಂದೆ ಓದಿ.

ಮುಂದೆ ಓದಿ
ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಈ ಹಿಂದೆನೇ ಬರಬೇಕಿತ್ತು
ಕರ್ನಾಟಕ ರತ್ನ ಕೊಡಲು ಅಗಲಿದ 16-17 ವರ್ಷ ಬೇಕಿತ್ತಾ
ಅಪ್ಪು ಸರ್‌ಗಿಂತ ವಿಷ್ಣು ಸರ್ ಸೀನಿಯರ್.. ಮುಂಚೆನೇ ಕೊಡಬೇಕಿತ್ತು

ರವಿಚೇತನ್ ಸಂದರ್ಶನದಲ್ಲಿ ವಿಷ್ಣುದಾದಗೆ ಇಷ್ಟು ವರ್ಷಗಳಾದ್ಮೇಲೆ ಕರ್ನಾಟಕ ರತ್ನ ಸಿಕ್ಕಿದ್ದಕ್ಕೆ ಬೇಸರ ಹೊರ ಹಾಕಿದ್ದರು. ಅದರಲ್ಲಿ ಯಾವುದೇ ತಪ್ಪು ಇರಲಿಲ್ಲ. ವಿಷ್ಣುವರ್ಧನ್ ಕುಟುಂಬ, ಅಭಿಮಾನಿಗಳು, ಚಿತ್ರರಂಗದ ಸತತ ಪ್ರಯತ್ನ ಪಟ್ಟ ಬಳಿಕ ಕರ್ನಾಟಕ ರತ್ನ ನೀಡಲಾಗಿದೆ. ಈ ಮುಂಚೆನೇ ಈ ಪ್ರಶಸ್ತಿ ಸಿಗಬೇಕಿತ್ತು. ಅದರಲ್ಲಿ ಎರಡು ಮಾಡುತ್ತಿಲ್ಲ. ಆದರೆ, ಭಾವನಾತ್ಮಕವಾಗಿ ಮಾತಾಡುವ ಭರಾಟೆಯಲ್ಲಿ ಪುನೀತ್ ರಾಜ್‌ಕುಮಾರ್ ಹೆಸರನ್ನು ಮಧ್ಯೆ ತಂದಿದ್ದು, ಫ್ಯಾನ್ಸ್‌ಗೆ ಹಾಗೂ ನೆಟ್ಟಿಗರಿ ಸರಿ ಕಾಣುತ್ತಿಲ್ಲ. ಅಷ್ಟಕ್ಕೂ ಸಂದರ್ಶನಲ್ಲಿ ಏನು ಹೇಳಿದ್ದಾರೆಂದು ನೋಡುವುದಾರೇ,

ಇಷ್ಟು ಬೇಡಿಕೊಳ್ಳುವ ಅವಶ್ಯಕತೆ ಇತ್ತಾ?

"ಅವರಾಯ್ತು.. ಅವರ ಕೆಲಸ ಆಯ್ತು. ಬೇರೆ ಯಾವುದಕ್ಕೂ ಆಸೆ ಪಟ್ಟವರೇ ಅಲ್ಲ. ಸರ್ಕಾರ ಅವರು ಇದ್ದಾಗ ಗುರುತಿಸಿ ಕೊಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು. ಅವರು ಹೋದ ಮೇಲೂ ಬೇಗನೇ ಕೊಟ್ಟಿದ್ದರೂ ಚೆನ್ನಾಗಿ ಇರುತ್ತಿತ್ತು. 16-17 ವರ್ಷ ಆದ್ಮೇಲೆ ಹೋಗಿ ರಿಕ್ವೆಸ್ಟ್ ಮಾಡಿಕೊಂಡು, ನಮ್ಮ ಶ್ರೀನಿವಾಸ್ ಅವರು ಹಿಂದೆ ಬಿದ್ದಿದ್ದರು. ಕೆಲವು ಸಂಘ ಸಂಸ್ಥೆಗಳು, ಅಭಿಮಾನಿ ಸಂಘಗಳು ರಿಕ್ವೆಸ್ಟ್ ಮಾಡಿಕೊಂಡಿದ್ದರು. ಅಂತಹ ಒಬ್ಬ ವ್ಯಕ್ತಿಗೆ ಇಷ್ಟೊಂದು ಬೇಡಿಕೊಳ್ಳುವ ಅವಶ್ಯಕತೆ ಇತ್ತಾ? ಅಂತ ನನಗೆ ಬೇಜಾರು ಇದೆ." ಎಂದು ರವಿಚೇತನ್ ಹೇಳಿದ್ದಾರೆ. ಈ ಬಗ್ಗೆ ನೆಟ್ಟಿಗರದ್ದು ಯಾವುದೇ ಆಕ್ಷೇಪವಿಲ್ಲ. ಆದರೆ, ಈ ಹೇಳಿಕೆಯನ್ನು ಖಂಡಿಸಿದ್ದಾರೆ.

Karnataka Ratna Deserved Vishnuvardhan Before Puneeth Rajkumar fans angry on Ravi Chethan Statement

"ಅಪ್ಪುಗಿಂತ ಸೀನಿಯರ್ ವಿಷ್ಣು ಸರ್"

"ಇದಕ್ಕಿಂತ ಮುನ್ನ ಅಪ್ಪು ಸರ್‌ಗೆ ಕೊಟ್ರು. ಅಪ್ಪುಗಿಂತ ಸೀನಿಯರ್ ಅಲ್ವಾ ನಮ್ಮ ವಿಷ್ಣು ಸರ್. ಮುಂಚೆನೇ ಕೊಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು. ಹೀಗಾಗಿ ಅವರು ಕಾಂಟ್ರವರ್ಸಿ ನಾಯಕನಾಗಿ ಹೋದರು. ಅದು ತುಂಬಾನೇ ಬೇಜಾರಾಯ್ತು. ಅವರು ಇದ್ದಾಗ ಒಂದು ರೀತಿ ಇತ್ತು. ಅವರು ಇಲ್ಲದೇ ಇರುವಾಗ ಒಂದು ರೀತಿ ಇತ್ತು. ಅವರು ಇಲ್ಲದೇ ಇದ್ದಾಗ ಹೇಗೆ ಬಣ್ಣ ಬದಲಾಯಿಸಿದರು ಅನ್ನೋದನ್ನು ನೋಡಿಕೊಂಡಿದ್ದೀವಿ." ಎಂದು ರವಿಚೇತನ್ ಹೇಳಿದ್ದಾರೆ. ಇದು ಕೆಲವರಿಗೆ ಆಕ್ರೋಶಕ್ಕೆ ಕಾರಣವಾಗಿದೆ.

ನೆಟ್ಟಿಗರ ಹೇಳಿದ್ದೇನು?

ರವಿಚೇತನ್ ಕೇಳಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಖಂಡಿಸಲಾಗುತ್ತಿದೆ. "ಅಪ್ಪು ಅಂತ ಹೆಸರು ಹೇಳಕ್ಕೆ ಯೋಗ ಮತ್ತು ಯೋಗ್ಯತೆ ಬೇಕು" ಅಂತ ಒಬ್ಬರು ಹೇಳಿದ್ದರು. ಇನ್ನೊಬ್ಬರು "ಕರ್ನಾಟಕ ರತ್ನ ಸಿಕ್ಕಿರೋದು ಖುಷಿ ಇದೆ. ಅಪ್ಪು ಅವ್ರ ಬಗ್ಗೆ ಯಾಕೆ ಮಾತಾಡ್ತೀರಾ?" ಅಂತ ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. "ವಿಷ್ಣುವರ್ಧನ್ ಅವರಿಗೆ ಕೊಡ್ಲೇಬೇಕು. ಬಟ್ ಅಪ್ಪು ಅವರಿಗೆ ಕೊಟ್ಟಿರೋದು ನಟನೆಗೆ ಕೊಟ್ಟಿಲ್ಲ. ಸಮಾಜ ಸೇವೆಗೆ ಕರ್ನಾಟಕ ರತ್ನ ಕೊಟ್ಟಿರೋದು" ಎಂದು ಇನ್ನೊಬ್ಬರು ಹೇಳಿದ್ದಾರೆ. "ದಾದಾಗೆ ಕೊಟ್ಟಿದ್ದು ಖುಷಿಯಿದೆ.. ಇದ್ರಲ್ಲಿ ಅಪ್ಪು ಬಾಸ್ ಹೆಸರು ಯಾಕ್ ತರ್ತೀರಾ? ತಿಂದ ಅನ್ನ ಅರಗುವುದಿಲ್ವಾ ನಿಮಗೆ?" ಎಂದು ಕಿಡಿಕಾರಿದ್ದಾರೆ.

More from Filmibeat

English summary
Karnataka Ratna Deserved Vishnuvardhan Before Puneeth Rajkumar fans angry on Ravi Chethan Statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X