Sudheendra Venkatesh: ಕನ್ನಡ ಸಿನಿಲೋಕದ ಜನಪ್ರಿಯ ಪ್ರಚಾರಕ ಸುಧೀಂದ್ರ ವೆಂಕಟೇಶ್
ಕನ್ನಡ ಸಿನಿ ಲೋಕದಲ್ಲಿ ನಿರ್ಮಾಪಕ, ನಿರ್ದೇಶಕ, ಸ್ಟಾರ್ ಹೀರೊಗಳು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಪತ್ರಿಕಾ ಸಂಪರ್ಕಾಧಿಕಾರಿ. ಪಿಆರ್‌ಓ ಇಲ್ಲದೆ ಹೋದರೆ ಆ ಸಿನಿಮಾ ಜನರಿಗೆ ತಲುಪುವುದು ಅನುಮಾನ. ಕನ್ನಡ ಸಿನಿಲೋಕದಲ್ಲಿ ಬ್ಯುಸಿಯಾಗಿರುವ ಪತ್ರಿಕಾ ಪ್ರಚಾರಕ ಸುಧೀಂದ್ರ ವೆಂಕಟೇಶ್.
ಸುಧೀಂದ್ರ ವೆಂಕಟೇಶ್ ಸಿನಿಮಾ ಜರ್ನಿ ಆರಂಭ ಮಾಡಿದ್ದು 1985ರಲ್ಲಿ. ದಿವಂಗತ ಸುಧೀಂದ್ರ ಅವರಿಗೆ ಸಹಾಯಕರಾಗಿ ವೃತ್ತಿ ಆರಂಭಿಸಿದ್ದರು. ಸುಧೀಂದ್ರ ಅವರೇ ಶ್ರೀ ರಾಘವೇಂದ್ರ ಚಿತ್ರವಾಣಿ ಎಂಬ ಸಂಸ್ಥೆಯನ್ನು ಆರಂಭಿಸಿದ್ದರು. ಸುಮಾರು ಮೂರು ದಶಕಗಳಿಂದ ಸುಧೀಂದ್ರ ವೆಂಕಟೇಶ್ ಪತ್ರಿಕಾ ಸಂಪರ್ಕಾಧಿಕಾರಿಯಾಗಿ ಇದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೆಸರು ತಂದುಕೊಟ್ಟ ಚಿತ್ರ ಮುಂಗಾರು ಮಳೆ, ದುನಿಯಾ
ಸುಧೀಂದ್ರ ವೆಂಕಟೇಶ್ ಸ್ವತಂತ್ರ ಪತ್ರಿಕಾ ಸಂಪರ್ಕಾಧಿಕಾರಿಯಾಗಿ ಕೆಲಸ ಆರಂಭಿಸಿದ ಮೇಲೆ ಉತ್ತಮ ಹೆಸರು ತಂದುಕೊಟ್ಟಿದ್ದು, 'ಮುಂಗಾರು ಮಳೆ' ಹಾಗೂ 'ದುನಿಯಾ'. ರಾಘವೇಂದ್ರ ಚಿತ್ರವಾಣಿಯ ಸಂಸ್ಥೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಲು ತನ್ನೆಲ್ಲಾ ಶ್ರಮವನ್ನು ಹಾಕುತ್ತಿದ್ದಾರೆ.

ಡಿಜೆ ವೆಂಕಟೇಶ್ ಸಿನಿಮಾವಲಯದಲ್ಲಿ ಸುಧೀಂದ್ರ ವೆಂಕಟೇಶ್ ಎಂದೇ ಫೇಮಸ್ ಆಗಿದ್ದಾರೆ. 1985 ರಿಂದ 2006 ರವರೆಗೆ ಸುಮಾರು 1200 ಸಿನಿಮಾಗಳಿಗೆ ಪ್ರಚಾರ ಮಾಡಿದ್ದಾರೆ. 2007ರಿಂದ 2021ರವರೆಗೆ ಸುಮಾರು 2000 ಸಿನಿಮಾಗಳಿಗೆ ಪತ್ರಿಕಾ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ ಅನುಭವವಿದೆ.

ಜನಪ್ರಿಯ ನಿರ್ಮಾಣ ಸಂಸ್ಥೆಯೊಂದಿಗೆ ಕೆಲಸ
52 ವರ್ಷದ ಸುಧೀಂದ್ರ ವೆಂಕಟೇಶ್ 35 ವರ್ಷಗಳ ಕಾಲ ಪತ್ರಿಕಾ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಕನ್ನಡ ಪ್ರಸಿದ್ಧ ಸಿನಿಮಾ ನಿರ್ಮಾಣ ಕಂಪನಿಗಳಿಗೆ ಕೆಲಸ ಮಾಡಿದ್ದಾರೆ. ಹೊಂಬಾಳೆ ಫಿಲಂಸ್, ರಾಜ್‌ಲೈನ್ ಪ್ರೊಡಕ್ಷನ್ಸ್, ಜಯಣ್ಣ ಕಂಬೈನ್ಸ್, ಶೈಲೆಂದ್ರ ಪ್ರೊಡಕ್ಷನ್ಸ್, ರಾಮೋಜಿ ಫಿಲಂಸ್, ಉಪೇಂದ್ರ ಪ್ರೊಡಕ್ಷನ್ಸ್, ಕಿಚ್ಚ ಕ್ರಿಯೇಷನ್ಸ್, ತೂಗುದೀಪ ಪ್ರೊಡಕ್ಷನ್ಸ್, ಪುಷ್ಕರ್ ಫಿಲಂಸ್, ಎಸ್ ವಿ ಪ್ರೊಡಕ್ಷನ್ಸ್ ಜೊತೆ ವೆಂಕಟೇಶ್ ಕೆಲಸ ಮಾಡಿದ್ದಾರೆ.

ಕೆಜಿಎಫ್ ಚಾಪ್ಟರ್ 1 & 2, ಕಬ್ಜ, ತ್ರಿಕೋನಾ, ಜೇಮ್ಸ್, ಈಗ, ಸೈರಾ ನರಸಿಂಹರೆಡ್ಡಿ, ನೋಟಾ, ಡಿಯರ್ ಕಾಮ್ರೇಡ್ ಅಂತ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ದರ್ಶನ್, ಉಪೇಂದ್ರ, ಸುದೀಪ್, ಪುನೀತ್ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ, ರವಿಚಂದ್ರನ್ ಅಂತ ದಿಗ್ಗಜರ ಸಿನಿಮಾಗಳಿಗೆ ವೆಂಕಟೇಶ್ ಕೆಲಸ ಮಾಡಿದ್ದಾರೆ.
ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಹಿಂದಿ ಭಾಷೆಯನ್ನು ಮಾತಾಡುತ್ತಿದ್ದಾರೆ. ಪ್ರಚಾರ ಪ್ರಭು, ಕನ್ನಡ ಯೂನಿಯನ್ ಪತ್ರಿಕಾ ಪ್ರಶಸ್ತಿ, ನಾಗರ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿಗಳನ್ನು ಇವರ ಸೇವೆಗಾಗಿ ನೀಡಲಾಗಿದೆ.


Click it and Unblock the Notifications











