ಶ್ರೀರಂಗ ಪಟ್ಟಣದಲ್ಲಿ ದರ್ಶನ್ ವಿವಾದಾತ್ಮಕ ಹೇಳಿಕೆ ಆರೋಪ; ಮಹಿಳಾ ಆಯೋಗದಿಂದ ನೋಟಿಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತ ಸುತ್ತಿಕೊಂಡಿರೋ ವಿವಾದಗಳೇನು ಕಮ್ಮಿಯಿಲ್ಲ. ಇತ್ತೀಚೆಗೆ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ನಡುವಿನ 'ಕಾಟೇರ' ಟೈಟಲ್ ವಿವಾದ ಬೇರೆ ಕಡೆಗೆ ತಿರುಗಿತ್ತು. ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದರ್ಶನ್ ಕೊಟ್ಟ ಹೇಳಿಕೆ ವಿರುದ್ಧ ಮಹಿಳಾ ಸಂಘಟನೆಯೊಂದು ಆಕ್ರೋಶ ಹೊರಹಾಕಿತ್ತು.

ದರ್ಶನ್ ತಮ್ಮ 25ನೇ ವರ್ಷದ ಸಿನಿ ಜರ್ನಿ ಸಂಭ್ರಮದ ವೇಳೆ "ಇವತ್ತು ಇವಳು ಇರುತ್ತಾಳೆ.. ನಾಳೆ ಅವಳು ಇರುತ್ತಾಳೆ" ಅಂತ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಯನ್ನು ಗೌಡತಿಯರ ಸೇನೆಯ ಮಹಿಳೆಯರು ಖಂಡಿಸಿದ್ದರು. ಅಷ್ಟೇ ಅಲ್ಲದೆ ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರನ್ನೂ ನೀಡಿದ್ದರು. ದರ್ಶನ್ ಕೊಟ್ಟ ಹೇಳಿಕೆಗಳಿಂದ ಮಹಿಳೆಯರಿಗೆ ಸಾರ್ವಜನಿಕವಾಗಿ ಅವಮಾನ ಆಗಿದೆ ಎಂದು ಆ ದೂರಿನಲ್ಲಿ ತಿಳಿಸಲಾಗಿತ್ತು.

Karnataka State women commission sent notice to Darshan in Srirangapatna Statement

ಈ ಸಂಬಂಧ ಇಂದು (ಮಾರ್ಚ್ 1) ಕರ್ನಾಟಕ ರಾಜ್ಯ ಮಹಿಳಾ ಆಯೋಗ ದರ್ಶನ್‌ಗೆ ನೋಟಿಸ್ ನೀಡಿದೆ. ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ ಮಾಡಿ ದೂರು ನೀಡಿದ್ದರಿಂದ ದರ್ಶನ್‌ಗೆ ಈ ನೋಟಿಸ್ ಜಾರಿಯಾಗಿದೆ. ಈ ನೋಟಿಸ್ ತಲುಪಿದ ಒಂದು ವಾರದೊಳಗೆ ಆಯೋಗದ ಕಚೇರಿಗೆ ಬಂದು ವಿವರಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಚಾಲೆಂಜಿಂಗ್ ಸ್ಟಾರ್‌ಗೆ ನೋಟಿಸ್ ಕಳುಹಿಸಿದೆ.

More from Filmibeat

English summary
Karnataka State Women Commission notice to Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X