ಶಿವಣ್ಣ,ಡಾಲಿಯ 'ಉತ್ತರಕಾಂಡ' ಶೂಟಿಂಗ್ ನಿಂತಿದ್ದೇಗೆ? ಕಾರ್ತಿಕ್ ಗೌಡ ಕೊಟ್ಟ ಕಾರಣವೇನು?

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಉತ್ತರಕಾಂಡ' ಕೂಡ ಒಂದಾಗಿತ್ತು. ಕೆಆರ್‌ಜಿ ಸ್ಟುಡಿಯೋ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಸದ್ಯದ ಶೂಟಿಂಗ್ ಕೂಡ ಆರಂಭ ಆಗಿತ್ತು. ಉತ್ತರ ಕರ್ನಾಟಕದ ರಗಡ್ ಸ್ಟೋರಿಗಳನ್ನು ತೆರೆಮೇಲೆ ತರುವುದಕ್ಕೆ ನಿರ್ದೇಶಕ ರೋಹಿತ್ ಪದಕಿ ಉತ್ಸಾಹದಿಂದಲೇ ಕೆಲಸ ಆರಂಭಿಸಿದ್ದರು.

ಬಹುತಾರಾಗಣದ ಸಿನಿಮಾ ಆಗಿದ್ದರಿಂದ 'ಉತ್ತರಕಾಂಡ' ಶೂಟಿಂಗ್ ತಡವಾಗಬಹುದೆಂಬ ನಿರೀಕ್ಷೆ ಇದ್ದೇ ಇತ್ತು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಾಲಿ ಧನಂಜಯ್, ದಿಗಂತ್ ಸೇರಿದಂತೆ ಹಲವು ಮಂದಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಬಹುತಾರಾಗಣದ ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದರು.

Karthik Gowda revealed why Shivarajkumar Daali Dhananjay movie Uttarakhand movie stopped

ಆದರೆ, ಕೆಲವು ದಿನಗಳಿಂದ 'ಉತ್ತರಕಾಂಡ' ಸಿನಿಮಾ ಸ್ಥಗಿತಗೊಳಿಸಲಾಗಿದೆ ಅನ್ನೋ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿತ್ತು. ಕೆಆರ್‌ಜಿ ಸ್ಟುಡಿಯೋ ನಿರ್ಮಿಸುತ್ತಿರುವ ಸಿನಿಮಾ ನಿಂತಿದ್ದೇಕೆ ಅನ್ನುವುದೇ ದೊಡ್ಡ ಚರ್ಚೆಯಾಗಿತ್ತು. ಈಗ ಮತ್ತೊಮ್ಮೆ 'ಉತ್ತರಕಾಂಡ' ಸಿನಿಮಾ ನಿಂತಿದೆ ಅನ್ನುವ ಬಗ್ಗೆ ನಿರ್ಮಾಪಕ ಕಾರ್ತಿಕ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಈ ಸಿನಿಮಾದ ಶೂಟಿಂಗ್ ನಿಂತಿದ್ದು ಏಕೆ? ತಿಳಿಯಲು ಮುಂದೆ ನೋಡಿ.

'ಉತ್ತರಕಾಂಡ' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಟ್ರೆಂಡ್ ಅನ್ನು ಹುಟ್ಟಾಕುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದ ಭಾಗದ ಟಚ್ ಮಾಡದೇ ಇರುವ ಅದೆಷ್ಟೋ ಕಥೆಗಳು ಮುಂದಿನ ದಿನಗಳಲ್ಲಿ ಸಿನಿಮಾ ಆಗುವ ಲಕ್ಷಣಗಳು ಇವೆ. ಈ ಸಿನಿಮಾದಲ್ಲಿ ನಟಿಸುತ್ತಿರುವ ಸ್ಟಾರ್‌ಗಳ ಲುಕ್ ಇಂತಹದ್ದೊಂದು ಭರವಸೆಯನ್ನು ಹುಟ್ಟಾಕಿತ್ತು. ಅಷ್ಟರಲ್ಲೇ ಈ ಸಿನಿಮಾ ಸ್ಥಗಿತಗೊಂಡಿದೆ ಅನ್ನೋ ಸುದ್ದಿ ಹರಿದಾಡುವುದಕ್ಕೆ ಶುರು ಮಾಡಿತ್ತು.

Karthik Gowda revealed why Shivarajkumar Daali Dhananjay movie Uttarakhand movie stopped

ಈ ಗೊಂದಲಗಳಿಗೆ ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಮತ್ತೆ ಕ್ಲಾರಿಟಿ ಕೊಟ್ಟಿದ್ದಾರೆ. 'ಉತ್ತರಕಾಂತ' ಸಿನಿಮಾದ ಶೂಟಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಸಿನಿಮಾ ಸ್ಥಗಿತಗೊಂಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ಕಾರ್ತಿಕ್ ಗೌಡ ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ನಾನು ಈಗಾಗಲೇ ಹೇಳಿದಂತೆ ಈ ಸಿನಿಮಾದ ಶೂಟಿಂಗ್ ಹಲವು ಶೆಡ್ಯೂಲ್‌ಗಳಲ್ಲಿ ನಡೆಯಬೇಕಿದೆ. ಒಮ್ಮೆ ಅಣ್ಣ (ಶಿವರಾಜ್‌ಕುಮಾರ್) ಬಂದ ಕೂಡಲೇ ನಾವು ಮತ್ತೆ ಶೂಟಿಂಗ್ ಆರಂಭಿಸುತ್ತೇವೆ. ನಾವು ಈಗಾಗಲೇ ಶೇ.30ರಷ್ಟು ಶೂಟಿಂಗ್ ಅನ್ನು ಮುಗಿಸಿದ್ದೇವೆ." ಎಂದು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಕಾರ್ತಿಕ್ ಗೌಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಶಿವಣ್ಣನ ಹುಟ್ಟುಹಬ್ಬಕ್ಕೆ 'ಉತ್ತರಕಾಂಡ' ಸಿನಿಮಾದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿತ್ತು. ರಕ್ತ ಚರಿತ್ರೆ ಬರೆಯಲು ಹೊರಟಿದ್ದ ಶಿವಣ್ಣ 'ಮಾಲೀಕ'ನಾಗಿ ಮಾಸ್ ಅವತಾರ ತಾಳಿದ್ದರು. ಇದು ಶಿವಣ್ಣನ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಆದ್ರೀಗ ಶಿವಣ್ಣ ದಿಢೀರನೇ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಸಿನಿಮಾವನ್ನು ಸ್ಥಗಿತಗೊಳಿಸಲಾಗಿದೆ. ಹಾಗೇ ಸಾಕಷ್ಟು ಕಲಾವಿದರು ಒಟ್ಟಿಗೆ ನಟಿಸಬೇಕಿದ್ದರಿಂದ ಅವರ ಡೇಟ್ಸ್‌ ಅನ್ನು ಮ್ಯಾಚ್ ಮಾಡಬೇಕಿದೆ. ಈ ಕಾರಣಕ್ಕೆ ಶೂಟಿಂಗ್ ಸದ್ಯಕ್ಕೆ ನಿಲ್ಲಿಸಲಾಗಿದೆ ಎನ್ನಲಾಗಿದೆ.

More from Filmibeat

English summary
Karthik Gowda revealed why Shivarajkumar, Daali Dhananjay movie Uttarakhand movie stopped;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X