ಕಿರುತೆರೆ ರಾವಣ ಜೆಕೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಸ್ಯಾಂಡಲ್‌ವುಡ್‌ ನಟ ಕಾರ್ತಿಕ್ ಜಯರಾಮ್ ಅಂದರೆ, ತಕ್ಷಣಕ್ಕೆ ನೆನಪಾಗುವುದು ರಾವಣನ ಪಾತ್ರ. ಕಿರುತೆರೆಯಲ್ಲಿ ಹಲವು ಪಾತ್ರಗಳಲ್ಲಿ ಮಿಂಚಿದರೂ, ಜೆಕೆಯನ್ನು ಭಾರತೀಯರು ರಾವಣ ಪಾತ್ರದಿಂದ ಗುರುತಿಸುತ್ತಾರೆ. ಕನ್ನಡ ನಟನಾದರೂ, ಹಿಂದಿಯ ಕಿರುತೆರೆಯಲ್ಲೂ ಜೆಕೆ ಹೆಸರು ಮಾಡಿದ್ದಾರೆ.

ಜಯರಾಮ್ ಕಾರ್ತಿಕ್ ಈಗ ಮತ್ತೊಂದು ಖುಷಿಯಲ್ಲಿದ್ದಾರೆ. ಇವರಿಗೆ ಪ್ರತಿಷ್ಠಿತ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಮಿಂಚುತ್ತಿರುವ ಜೆಕೆ ಬಾಲಿವುಡ್‌ನಲ್ಲೂ ಸಾಕಷ್ಟು ಚಿರಪರಿಚಿತರಾಗಿದ್ದು, ರಾವಣನ ಪಾತ್ರದಿಂದಲೇ. ಈಗ ಅದೇ ಪಾತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿಯೊಂದು ಲಭಿಸಿದೆ.

ಜೆಕೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಮೇ 01 ಕಾರ್ತಿಕ್ ಜಯರಾಮ್ (JK) ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇನ್ನೂ ಬರ್ತ್‌ಡೇ ಸಂಭ್ರಮದಲ್ಲಿ ಇರುವಾಗಲೇ ಮತ್ತೊಂದು ಖುಷಿ ವಿಷಯ ಅವರನ್ನು ಹುಡುಕಿಕೊಂಡು ಬಂದಿದೆ. ಪ್ರತಿಯೊಬ್ಬ ನಟನಿಗೂ ತಾನು ನಟಿಸಿದ ಪಾತ್ರಕ್ಕೆ ಪ್ರಶಸ್ತಿ ಸಿಗಬೇಕು ಎಂಬ ಆಸೆ ಇರುತ್ತೆ. ಅದರಂತೆಯೇ ಜೆಕೆಗೆ ಪ್ರತಿಷ್ಠಿತ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು ಈ ಖುಷಿಯನ್ನು ಸ್ವತ: ಜೆಕೆ ಹಂಚಿಕೊಂಡಿದ್ದಾರೆ.

ಜೆಕೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಜೆಕೆ ಅಲ್ಲಿ ಈ ಅವಾರ್ಡ್ ಅನ್ನು ಪಡೆದುಕೊಂಡಿದ್ದಾರೆ. " ದಾದಾ ಸಾಹೇಬ್ ಫಾಲ್ಕೆ ಅವಾರ್ಡ್. ಹಾರ್ಡ್ ವರ್ಕ್ ಕಂಡಿತವಾಗಿಯೂ ನಿಮಗೆ ಬೆಲೆ ತಂದುಕೊಡುತ್ತೆ. ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ನನ್ನ ಮುಡಗೊಂದು ಗರಿ." ಎಂದು ಬರೆದುಕೊಂಡಿದ್ದಾರೆ.

Karthik Jayaram aka JK won Dadasahebphalke award for Raavan character in Siya Ke Ram

ರಾವಣ ಪಾತ್ರಕ್ಕೆ ಪ್ರಶಸ್ತಿ ಗಿಟ್ಟಿಸಿಕೊಂಡ ಜೆಕೆ

ಜೆಕೆ ಹಿಂದಿ ಧಾರಾವಾಹಿ 'ಸಿಯಾ ಕೆ ರಾಮ್' ಮೂಲಕ ಸಾಕಷ್ಟು ಜನಪ್ರಿಯರಾಗಿದ್ದಾರೆ. ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿದ್ದ 'ಸಿಯಾ ಕೆ ರಾಮ್' ಸುಮಾರು 326 ಸಂಚಿಕೆಗಳಲ್ಲಿ ಪ್ರಸಾರವಾಗಿದೆ. ಈ ಧಾರಾವಾಹಿಯಲ್ಲಿ ಜೆಕೆ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾವಣನಾಗಿ ಅಭಿನಯಿಸಿದ್ದ ಜೆಕೆಯನ್ನು ನೋಡಿ ಉತ್ತರ ಭಾರತದ ಜನರು ಕೂಡ ಮೆಚ್ಚುಗೆ ಸೂಚಿಸಿದ್ದರು.

'ಸಿಯಾ ಕೆ ರಾಮ್' ಧಾರಾವಾಹಿಯಲ್ಲಿ ಮದಿರಕ್ಷಿ ಮುಂಡ್ಲೆ ಸೀತಾಯ ಪಾತ್ರದಲ್ಲಿ ನಟಿಸಿದ್ದರು. ಆಶಿಶ್ ಶರ್ಮಾ ರಾಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರೊಂದಿಗೆ ಕಾರ್ತಿಕ್ ರಾವಣನಾಗಿ ಕಾಣಿಸಿಕೊಂಡಿದ್ದರು. 2015ರಲ್ಲಿ ಆರಂಭ ಆಗಿದ್ದ ಧಾರಾವಾಹಿ 2016ಕ್ಕೆ ಮುಕ್ತಾಯ ಗೊಂಡಿದೆ.

Karthik Jayaram aka JK won Dadasahebphalke award for Raavan character in Siya Ke Ram

ಸಿನಿಮಾಗಳಲ್ಲಿ ನಟಿಸಿರುವ ಜೆಕೆ

ಜೆಕೆ ಹಿಂದಿ ಧಾರಾವಾಹಿಗಳಲ್ಲಷ್ಟೇ ನಟಿಸುತ್ತಿಲ್ಲ. ಬದಲಾಗಿ ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ. 2020ರಲ್ಲಿ ಹಿಂದಿ ಸಿನಿಮಾ 'ಓ ಪುಷ್ಪ ಐ ಹೇಟ್ ಟಿಯರ್ಸ್' ತೆರೆಕಂಡಿತ್ತು. ಸದ್ಯ ಜೆಕೆ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕಿರುತೆರೆ ಅಂತ ತಮ್ಮನ್ನು ತಾವು ಬ್ಯುಸಿಯಾಗಿಟ್ಟುಕೊಂಡಿದ್ದಾರೆ.

More from Filmibeat

English summary
Karthik Jayaram aka JK won Dadasahebphalke award for Raavan character in Siya Ke Ram, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X