ವಿಲನ್ ಲುಕ್ ಕೊಟ್ಟ ಕಾಶಿನಾಥ್ ಪುತ್ರ ಅಭಿಮನ್ಯು:'ಎಲ್ಲಿಗೆ ಪಯಣ ಯಾವುದೋ ದಾರಿ'

ಕಾಶಿನಾಥ್ ಪುತ್ರ ಅಭಿಮನ್ಯು ಸ್ಯಾಂಡಲ್‌ವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಅಭಿಮನ್ಯು ನಟಿಸುತ್ತಿರುವ ಹೊಸ ಸಿನಿಮಾ 'ಎಲ್ಲಿಗೆ ಪಯಣ ಯಾವುದೋ ದಾರಿ' ಶೂಟಿಂಗ್ ಮುಗಿದು, ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.

ಮಹಾಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ವಿಲನ್ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಕಿಚ್ಚ ಸುದೀಪ್ ಈ ಸಿನಿಮಾದ ವಿಲನ್ ಮೋಷನ್ ಪೋಸ್ಟರ್ ಅನ್ನು ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

Kashinath son Abhimanyu Movie Ellige Payana Yavudo Daari Motion poster Revealed By Sudeep

"ಎಲ್ಲಿಗೆ ಪಯಣ ಯಾವುದೋ ದಾರಿ ಈ ಚಿತ್ರದ ಮೋಷನ್ ಪೋಸ್ಟರ್ ಅನ್ನು ಇವತ್ತು ಬಿಡುಗಡೆ ಮಾಡುತ್ತಿದ್ದೇವೆ. ಇದನ್ನು ಮಾಡುವುದಕ್ಕೆ ತುಂಬಾನೇ ಖುಷಿಯಾಗಿದೆ. ಕಾಶಿನಾಥ್ ಅವರ ಸಿನಿಮಾಗಳನ್ನು ನೋಡಿ ಖುಷಿ ಪಟ್ಟವರು. ಅವರ ಮಗ ಅಭಿಮನ್ಯು ಬಹಳ ಹಳೆಯ ಪರಿಚಯ. ಸಿಸಿಎಲ್‌ನಿಂದ ನನಗೆ ಪರಿಚಯ. ಇವತ್ತು ತುಂಬಾ ಕಷ್ಟ ಪಟ್ಟು ಎಫರ್ಟ್ಸ್ ಹಾಕಿ ಮಾಡಿರುವಂತಹ ಸಿನಿಮಾ. ಅಭಿಮನ್ಯು ನನ್ನ ಫೇವರಿಟ್ ಬಾಯ್. ಅವರ ಕರಿಯರ್ ಇನ್ನೂ ಚೆನ್ನಾಗಿ ಆಗಬೇಕು. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡಿ. ನಿಮ್ಮ ಕಲೆಗಳು ಬೆಳೆಯಬೇಕು ಅಂದರೆ, ನಿಮ್ಮ ಸಪೋರ್ಟ್ ಇರಬೇಕು." ಎಂದು ಕಿಚ್ಚ ಸುದೀಪ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಭಿಮನ್ಯು ಮತ್ತೆ ಕಮ್ ಬ್ಯಾಕ್ ಮಾಡಬೇಕು ಅಂತ ನಿರ್ಧರಿಸಿದಾಗ, ಅವರಿಗೆ ಸಿಕ್ಕ ಬೆಸ್ಟ್ ಪ್ರಾಜೆಕ್ಟ್ ಇದು. ಸ್ಟೋರಿ ಕೇಳಿಯೇ ಥ್ರಿಲ್ ಆಗಿದ್ದರು. 'ಎಲ್ಲಿಗೆ ಪಯಣ ಯಾವುದೋ ದಾರಿ' ಮೊದಲಿಗೆ ಟೈಟಲ್‌ನಿಂದಲೇ ಪ್ರೇಕ್ಷಕರನ್ನು ಎಳೆಯಲು ಆರಂಭಿಸಿದೆ. ಅದರಲ್ಲೂ ಈಗ ಹೊರಬಿದ್ದಿರೋ ಪೋಸ್ಟರ್ ಮತ್ತಷ್ಟು ಕಿಕ್ ಕೊಡುತ್ತಿದೆ. ಸ್ಯಾಂಡಲ್‌ವುಡ್‌ಗೆ ಹೊಸ ಶೈಲಿಯ ಸಿನಿಮಾ ಸಿಗಬಹುದು ಎಂಬ ನಿರೀಕ್ಷೆ ಹುಟ್ಟಿದೆ.

Kashinath son Abhimanyu Movie Ellige Payana Yavudo Daari Motion poster Revealed By Sudeep

'ಎಲ್ಲಿಗೆ ಪಯಣ ಯಾವುದೋ ದಾರಿ' ಶೂಟಿಂಗ್ ಶುರುವಾಗಿತ್ತು. ಆ ಸಿನಿಮಾವನ್ನು ಕಿರಣ್ ಸೂರ್ಯ ನಿರ್ದೇಶಿಸಿದ್ದಾರೆ. ಇದೊಂದು ಥ್ರಿಲ್ಲರ್ ಸಿನಿಮಾ. ಸುಮಾರು 108 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಈ ಸಿನಿಮಾ ಮೂಲಕ ಕಾಶಿನಾಥ್ ಪುತ್ರ ಅಭಿಮನ್ಯು ಮತ್ತೆ ಚಿತ್ರರಂಗಕ್ಕೆ ಮರಳಿದ್ದು, ಯಶಸ್ಸಿನ ನಿರೀಕ್ಷೆಯಿದೆ.

ಈ ಸಿನಿಮಾದ ಪೋಸ್ಟರ್ ಅನ್ನು 2019ರಲ್ಲಿ ಉಪೇಂದ್ರ ಲಾಂಚ್ ಮಾಡಿದ್ದರು. ಹಾಗೇ ಇನ್ನೊಂದು ಲುಕ್ ಅನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ರಿವೀಲ್ ಮಾಡಬೇಕಿತ್ತು. ಆದೇ ಲುಕ್ ಅನ್ನು ಈಗ ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ. ಅಂದ್ಹಾಗೆ ಸಿನಿಮಾದಲ್ಲಿ ಒಂದು ಹಾಡನ್ನು ಕಿಚ್ಚ ಸುದೀಪ್ ಕೂಡ ಹಾಡಿದ್ದಾರೆ.

More from Filmibeat

English summary
Kashinath son Abhimanyu Movie Ellige Payana Yavudo Daari Motion poster Revealed By Sudeep, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X