ಉಪ್ಪಿ ಡಬ್ಬಲ್ ಮೀನಿಂಗ್ ಟ್ಯಾಲೆಂಟ್ ಬಗ್ಗೆ ಗುರುಗಳು ಏನು ಹೇಳಿದ್ರು? UI ಸಾಂಗ್ ರಿಲೀಸ್ ಬಳಿಕ ಕಾಶಿನಾಥ್ ವಿಡಿಯೋ ವೈರಲ್!

ಸ್ಯಾಂಡಲ್‌ವುಡ್‌ನ ಕ್ರಿಯೇಟಿವ್ ಡೈರೆಕ್ಟರ್ ಉಪೇಂದ್ರ. ಇವರು ನಿರ್ದೇಶನಕ್ಕೆ ಅಂತ ಇಳಿದರೆ, ಸಿನಿ ಪ್ರೇಮಿಗಳಿಗೆ ಕಿಕ್ ಮೇಲೆ ಕಿಕ್ ಕೊಡೋದು ಗ್ಯಾರಂಟಿ. ಒಂದೊಂದು ಸೀನ್‌, ಒಂದೊಂದು ಸಾಂಗ್ ಕೂಡ ಅಷ್ಟೇ ಥ್ರಿಲ್ಲಿಂಗ್ ಅಂತ ಅನಿಸುತ್ತೆ. ಈಗ ಉಪ್ಪಿ ನಿರ್ದೇಶಿಸಿದ ಹೊಚ್ಚ ಹೊಸ ಸಿನಿಮಾ 'UI' ಮೊದಲ ಹಾಡಿನ ಪ್ರೋಮೊ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.

'ಯುಐ' ಸಿನಿಮಾ ಸಾಂಗ್ ಪ್ರೋಮೊದಲ್ಲಿ ಬಂದಿರೋ ಹಾಡಿನ ಸಾಲುಗಳು ಕೆಲವರಿಗೆ ಇಷ್ಟ ಆಗಿವೆ. ಮತ್ತೆ ಕೆಲವರಿಗೆ ಇಷ್ಟ ಆಗಿಲ್ಲ. ಉಪ್ಪಿ ಮತ್ತೆ ಹಾಡಿನಲ್ಲಿ ಡಬ್ಬಲ್ ಮೀನಿಂಗ್ ಬರುವಂತಹ ಸಾಹಿತ್ಯ ರಚಿಸಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ನೆಟ್ಟಿಗರು ಈ ಹಾಡಿನ ಸಾಲಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುವುದಕ್ಕೆ ಮುಂದಾಗಿದ್ದಾರೆ.

Kashinath video goes viral after Upendra UI movie song promo out

ಅದರಲ್ಲೂ ನೆಟ್ಟಿಗರೊಬ್ಬರು ಉಪ್ಪಿ ಬಗ್ಗೆ ಅವರ ಗುರುಗಳಾದ ದಿವಂಗತ ನಟ ಕಾಶಿನಾಥ್ ಹೇಳಿದ ಡೈಲಾಗ್‌ ಅನ್ನು ಟ್ರೆಂಡ್ ಮಾಡುತ್ತಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಉಪೇಂದ್ರ ಡಬಲ್ ಮೀನಿಂಗ್ ಟ್ಯಾಲೆಂಟ್ ಬಗ್ಗೆ ಕಾಶಿನಾಥ್ ಏನು ಹೇಳಿದ್ದಾರೆ? ಯಾವಾಗ ಹೇಳಿದ್ದು? 'ಯುಐ' ಹಾಡಿನ ಬಗ್ಗೆ ನೆಟ್ಟಿಗರು ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಯುಐ' ಸಿನಿಮಾದ ಸಾಂಗ್ ಪ್ರೋಮೊ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರು ಕ್ರಿಯೇಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲಿ ಒಬ್ಬರು ಕಾಶಿನಾಥ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಉಪೇಂದ್ರ ನಿರ್ದೇಶಿಸಿದ 'ಶ್!' ಸಿನಿಮಾದ ಡೈಲಾಗ್. ಇದರಲ್ಲಿ ಕಾಶಿನಾಥ್ ಅವ್ರಿಗೆ ಉಪ್ಪಿ ಬಗ್ಗೆನೇ ಒಂದು ಡೈಲಾಗ್ ಕೊಡಲಾಗಿತ್ತು. ಅದೇ ಡೈಲಾಗ್ ಅನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ.

"ರೀ.. ಆ ಉಪೇಂದ್ರನ ಬಂದು ನನ್ನನ್ನು ನೋಡಲಿಕ್ಕೆ ಹೇಳ್ರಿ. ಈ ರೀತಿ ಒಳ್ಳೊಳ್ಳೆ ಪದಗಳನ್ನು ಡಬಲ್ ಮೀನಿಂಗ್ ಮಾಡಿಬಿಟ್ರೆ, ಜನ ಏನ್ರಿ ಮಾತಾಡುತ್ತಾರೆ. ಆಮೇಲೆ ನಮ್ಮನ್ನು ಹಾಕೊಂಡು ತಟ್ಟಿಬಿಡುತ್ತಾರಷ್ಟೇ.. " ಎನ್ನುವ ಡೈಲಾಗ್ ಅದು. 'UI' ಸಾಂಗ್ ಪ್ರೋಮೊ ಟೀಸರ್ ರಿಲೀಸ್ ಆಗುತ್ತಿದ್ದಂತೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಇದರೊಂದಿಗೆ ಸೋಶಿಯಲ್ ಮೀಡಿಯಾ ಸಾಕಷ್ಟು ಮಂದಿ 'UI' ಸಾಂಗ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಸಾಹಿತ್ಯಕ್ಕೆ ದೊಡ್ಡ ನಮಸ್ಕಾರ.. ಇದರಲ್ಲಿ ಏನಿಲ್ಲ...!! ಏನೇನಿಲ್ಲ..! ನಂದು ತುಂಬಾ ದೊಡ್ಡದು.. ಅವನಿಗಿಂತ ನಿಂದು ಚಿಕ್ಕದು.. ನಿಂದು ತುಂಬಾ ಚಿಕ್ಕದು.. ಇವನಗಿಂತ ನಿಂದು ಚಿಕ್ಕದು.." ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಹಾಗೇ ಮತ್ತೆ ಕೆಲವರು ಭಿನ್ನ ಭಿನ್ನವಾಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬರು " ದಂಪತಿಗಳು ಕರಿಮಣಿ ಮಾಲೀಕನ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅದೇ ಸಿಂಗಲ್ ಆಗಿರುವವರು ಯುಐ ಹಾಡಿನ ಸಾಲಿನ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ." ಎಂದಿದ್ದಾರೆ. ಅದೇ ಇನ್ನೊಬ್ಬರು "ಮನಸ್ಸು ಅಂತ ಹೇಳಿದ್ದರೆ ಇಷ್ಟೊಂದು ಹೈಪ್ ಆಗುತ್ತಿರಲಿಲ್ಲ. ಅದಕ್ಕೆ ಯುಐ ಚೀಪ್ ಸಾಂಗ್ ಅನ್ನು ಉಪೇಂದ್ರ ಸಿನಿಮಾ ಪ್ರಚಾರಕ್ಕಾಗಿ ಬಳಿಸಿಕೊಳ್ಳುತ್ತಿರುವುದು ಚೀಪ್ ಅನಿಸುತ್ತಿಲ್ವಾ ?" ಮತ್ತೊಬ್ಬರ ಕಮೆಂಟ್ ಮಾಡಿದ್ದಾರೆ.

ಏನೇ ಚರ್ಚೆಯಾಗುತ್ತಿದ್ದರೂ, ಉಪೇಂದ್ರ ಮತ್ತೆ ಸುದ್ದಿಯಲ್ಲಿದ್ದಾರೆ. 'UI' ಸಿನಿಮಾದ ಮೊದಲ ಹಾಡಿನ ಝಲಕ್ ಕಿಕ್ ಕೊಡುತ್ತಿದೆ. ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರಚಾರ ಸಿಕ್ಕಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಟ್ಯಾಲೆಂಟ್ ಅನ್ನು ಹೊಗಳುತ್ತಿದ್ದರೆ, ಮತ್ತೆ ಕೆಲವರು ಪ್ರಚಾರಕ್ಕೆ ಹೀಗೆ ಮಾಡುವುದು ಸರಿಯೇ ಎಂದು ಹೇಳುತ್ತಿದ್ದಾರೆ. ಆದರೆ, ಫೆಬ್ರವರಿ 26ಕ್ಕೆ ಈ ಸಾಂಗ್ ಪೂರ್ತಿ ರಿಲೀಸ್ ಆದ್ಮೇಲೆ ಉಪ್ಪಿ ಏನು ಗಿಮಿಕ್ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ.

More from Filmibeat

English summary
Netizens reaction on Upendra movie UI song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X